ಸುರಪುರ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಸಂಸ್ಥೆಯಿಂದ ಕಕ್ಕೇರಾ ಪಟ್ಟಣದ ನವಜ್ಯೋತಿ ಜ್ಞಾನ ವಿಕಾಸ ಕೇಂದ್ರ ಸಭೆಯಲ್ಲಿ ಪೌಷ್ಠಿಕ ಆಹಾರ ಮೇಳ ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆವಹಹಿಸಿದ್ದ ಲಕ್ಷ್ಮೀಬಾಯಿ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ,ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಸಂಸ್ಥೆಯಿಂದ ಅನೇಕ ಸಮಾಜ ಮುಖಿಯಾದ ಕಾರ್ಯಗಳನ್ನು ಮಾಡುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಸ್ಥಳಿಯ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ:ನಜಮಾ ಮಾತನಾಡಿ,ಪ್ರತಿಯೊಬ್ಬರಿಗೂ ಪೌಷ್ಠಿಕ ಆಹಾರ ತುಂಬಾ ಅಗತ್ಯವಾಗಿದೆ.ಅಲ್ಲದೆ ಬಿಸಿಯಾದ ಆಹಾರವನ್ನು ಸೇವಿಸಬೇಕು ಮತ್ತು ಆಹಾರದಲ್ಲಿ ತರಕಾರಿ ಸೊಪ್ಪು ಹೆಚ್ಚೆಚ್ಚೆ ಸೇವಿಸುವಂತೆ ಮತ್ತು ಮೊಳಕೆ ಕಾಳುಗಳು,ಹಾಲು,ಹಣ್ಣು ಶೇಂಗಾ,ಬೆಲ್ಲ ಸೇವನೆ ತುಂಬಾ ಉಪಯುಕ್ತವಾದುದಾಗಿದೆ ಎಂದರು.ಅಲ್ಲದೆ ಪ್ರತಿಯೊಬ್ಬರಿಗೆ ಬರುವ ಕಾಯಿಲೆಗಳಲ್ಲಿ ನೀರಿನಿಂದಲೂ ಅನೇಕ ಕಾಯಿಲೆಗಳು ಬರುತ್ತವೆ,ಆದ್ದರಿಂದ ಶುಧ್ಧವಾದ ನೀರನ್ನು ಕುಡಿಯುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜ್ಞಾನ ವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಸವಿತಾ ಸೇರಿದಂತೆ ಸೇವಾ ಪ್ರತಿನಿಧಿಗಳು ಹಾಗು ಕೇಂದ್ರದ ಅನೇಕ ಸದಸ್ಯರು ಭಾಗವಹಿಸಿದ್ದರು.