ಪ್ರತ್ಯೇಕ ಬಜೆಟ್ ಮಂಡನೆ, ರೈತರ ಬೆಳೆ ಸಾಲ ಮನ್ನಾಕ್ಕೆ ಜೈಕರವೇ ಒತ್ತಾಯ

0
17

ಕಲಬುರಗಿ;  ರಾಜ್ಯದಲ್ಲಿ ಎರಡು ವರ್ಷಗಳಿಂದ ಅತಿವೃಷ್ಟಿ , ಭೀಕರ ಪ್ರವಾವ , ನೆರೆ ಹಾವಳಿಂದಾಗಿ ರೈತರು ತಿವ್ರ ಸಂಕಷ್ಟದಲ್ಲಿದ್ದು , ಬರುವ ರಾಜ್ಯ ಬಜೆಟ್‌ನಲ್ಲಿ ಕೃಷಿ ವಲಯಕ್ಕೆ ಹೆಚ್ಚಿನ ಒತ್ತು ಕೊಟ್ಟು ಪ್ರತ್ಯೇಕ ಬಜೆಟ್ ಮಂಡಿಸಿ, ಕೃಷಿ ಕ್ಷೇತ್ರಕ್ಕೆ ಆಧುನಿಕಕರಣಕ್ಕೆ ಹೊಸ ಹೊಸ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕು ಎಂದು ಜೈ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಜಿಲ್ಲಾಧಿಕಾರಿಗಲ ಮುಖಾಂತರ ಕೃಷಿ ಸಚಿವ ಬಿ.ಸಿ.ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.

ಅಷ್ಟೆ ಅಲ್ಲ ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರಿ ಸಂಘಗಳ ಮೂಲಕ ರೈತರು ಪಡೆದ ಬೆಳೆ ಸಾಲ ಮನ್ನಾ ಮಾಡಬೇಕು . ಇನ್ನು ಈ ಭಾಗದ ಪ್ರಮುಖ ವಾಣಿಜ್ಯ ಬೆಳೆ ತೊಗರಿಯಾಗಿದ್ದು , ಅಷ್ಟೆ ಅಲ್ಲ ಭೌಗೋಳಿಕ ಸೂಚಂಕ ಪಡೆದಿರುವ ತೊಗರಿಗೆ ಜಾಗತಿಕ ಮಟ್ಟದಲ್ಲಿ ಮಾರಾಟವಾಗಲು ಬೇಕಾದ ಸೌಕರ್ಯ ಒದಗಿಸಿಕೊಡಬೇಕು . ತೊಗರಿ ಅಭಿವೃದ್ಧಿ ಮಂಡಳಿಗೆ ಬಜೆಟ್‌ನಲ್ಲಿ ಕನಿಷ್ಟ ೫೦ ಕೋಟಿ ರೂ . ಮೀಸಲಿಡಬೇಕು . ಕೊಡಿಸುವುದಲ್ಲದೆ , ರೈತ ಸಂಜೀವಿನಿ ಯೋಜನೆಗೆ ಮರು ಚಾಲನೆ ನೀಡಬೇಕು . ಕೋವಿಡ್ ಸಂಕಷ್ಟದಿಂದ ಕೃಷಿ ಇಲಾಖೆಯಿಂದ ರಿಯಾತಿ , ಪ್ರೋತ್ಸಾಹ ಧನ ನೀಡುವ ಅನೇಕಗಳು ಯೋಜನೆ ಮೊಟಕುಗೊಳಿಸಲಾಗಿದ್ದು , ಕೂಡಲೇ ಆ ಎಲ್ಲಾ ಯೋಜನೆಗಳನ್ನು ಯಥಾವತ್ತಾಗಿ ಮರು ಕಾರ್ಯಾನಷ್ಠಾನಕ್ಕೆ ತರಬೇಕು .

Contact Your\'s Advertisement; 9902492681

ಗಂಗಾಕಲ್ಯಾಣ ಯೋಜನೆ ಅಡಿ ಫಲಾನಾಭಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕವಾಗಿರಬೇಕು ಫಲಾನುಭವಿಗಳ ಆಯ್ಕೆ ಮಿತಿ ಹೆಚ್ಚಿಸಬೇಕು . ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ರೈತ ಉತ್ಪಾದನಾ ಸಂಸ್ಥೆ ( ಎಫ್‌ಇಒ ) ಗಳ ಅನುಷ್ಠಾನಕ್ಕೆ ಒತ್ತು ಕೊಟ್ಟು , ಶಿಘ್ರದಲ್ಲಿ ಪ್ಯಾಕೇಜ್ ಹಣ ಮಂಜೂರ ಮಾಡಬೇಕು. ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಕಲಬುರಗಿಯ ತಂಪು ತೊಗರಿ ಬೆಳೆ ವಿತರಿಸಲು ಕ್ರಮವಹಿಸಬೇಕು.

ಕಲಬುರಗಿ – ಯಾದಗಿರಿ ಡಿಸಿಸಿ ಬ್ಯಾಂಕ್‌ನಲ್ಲಿ ಸಾಮಾನ್ಯ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ೩ ಲಕ್ಷ ರೂ ವರೆಗೆ ಬೆಳೆ ಸಾಲ ನೀಡಲು ಬರುವ ಜೂನ್ ತಿಂಗಳಿನಿಂದ ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರಿಗೆ ಉಚಿತ ಬೀಜ , ರಸಗೊಬ್ಬರ ವಿತರಿಸಲು ಕ್ರಮ ವಹಿಸಬೇಕು ಎಂದರು. ಈ ಸಂದರ್ಭದಲ್ಲಿ ವೇದಿಕೆಯ ರಾಜ್ಯಾಧ್ಯಕ ಮಮಜುನಾಥ ಹಾಗರಗಿ, ಜಗನ್ನಾಥ ಪಟ್ಟಣಶೇಟ್ಟಿ, ಶರಣು ಖಾನಪೂರೆ, ಬಾಲರಾಜ, ಶಾಂತು, ರತ್ನಕರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here