ಶಹಾಬಾದ: ತಾಲೂಕಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಹೆಚ್ಚುತ್ತಲಿರುವುದನ್ನು ಮನಗಂಡು ಪೊಲೀಸ್ ಇಲಾಖೆ ಶಹಾಬಾದ ನಗರದ ಹಳೆ ಪೊಲೀಸ್ ಠಾಣೆಯನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆ ಮಾಡಿ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಈಗಾಗಲೇ ಜಿಲ್ಲಾ ಎಸ್‌ಪಿ ಇಶಾ ಪಂತ್ ಅವರು ಬೇಟಿ ನೀಡಿ, ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲು ಸೂಚನೆ ನೀಡಿದ್ದಾರೆ.ನಗರದ ಬಸವೇಶ್ವರ ನಗರದ ಹಳೆ ಪೊಲೀಸ್ ಠಾಣೆಯನ್ನು ಸುಮಾರು ವರ್ಷಗಳಿಂದ ಬಳಕೆ ಮಾಡದಿರದಿರುವುದರಿಂದ ಆವರಣ ಸಂಪೂರ್ಣ ಮುಳ್ಳು ಕಂಟಿ ಬೆಳೆದಿತ್ತು.ಠಾಣೆಯ ಕೊಠಡಿಗಳು ಸಂಪೂರ್ಣ ಧೂಳು ತುಂಬಿಕೊಂಡಿತ್ತು.
ಅದನ್ನು ಸಂಪೂರ್ಣ ಸ್ವಚ್ಛಗೊಳಿಸಿದ್ದಾರೆ. ಕೊಳವೆ ಬಾವಿಯನ್ನು ದುರಸ್ತಿ ಮಾಡಿಸಿ, ನೀರಿನ ಎಲ್ಲಾ ಸೌಲಭ್ಯಗಳನ್ನು ಒದಗಿಸಿದ್ದಾರೆ.ಸದ್ಯ ಕೋವಿಡ್ ಸೊಂಕಿತ್ ರೋಗಿಗಳಿಗೆ ಹಾಸಿಗೆ ವ್ಯವಸ್ಥೆಯನ್ನು ಮಾಡಲಾಗಿದೆ. ವಾಡಿ, ಚಿತ್ತಾಪೂರ, ಮಾಡಬೂಳ, ಕಾಳಗಿ ವ್ಯಾಪ್ತಿಯ ಎಲ್ಲಾ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಗಳಿಗೆ ಮಾತ್ರ ಹೋಮ್ ಕ್ವಾರಂಟೈನ್ ಆಗಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ.ಈಗಾಗಲೇ ೧೦ ಹಾಸಿಗೆಗಳ (ಬೆಡ್) ವ್ಯವಸ್ಥೆ ಕಲ್ಪಿಸಲಾಗಿದೆ.ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಮಾಡಿಕೊಡಲಾಗಿದೆ.
ಕೋವಿಡ್ ಪಾಸಿಟಿವ್ ಹೊಂದಿದವರು ಮನೆಯಲ್ಲಿ ಕೊಣೆಗಳ ಕೊರತೆಯಿರುವುದರಿಂದ ಹೋಮ್ ಕ್ವಾರಂಟೈನ್ ಆಗಲು ತೊಂದರೆಯಾಗುತ್ತದೆ.ಅಲ್ಲದೇ ಮನೆಯ ಸದಸ್ಯರಿಗೂ ಹರಡುವ ಸಾಧ್ಯತೆ ಇರುವುದರಿಂದ ಬಳಕೆ ಮಾಡದೇ ಬಿದ್ದಿರುವ ಹಳೆಪೊಲೀಸ್ ಠಾಣೆಯನ್ನು ಸ್ವಚ್ಛಗೊಳಿಸಿ ಮತ್ತೆ ಮರುಬಳಕೆ ಮಾಡಿ ಪೊಲೀಸ್ ಸಿಬ್ಬಂದಿಗಳಿಗೆ ಅನುಕೂಲ ಮಾಡಿಕೊಡುತ್ತಿರುವುದಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಪೊಲೀಸ್ ಸಿಬ್ಬಂದಿಗಳಿಗೆ ಕೋವಿಡ್-೧೯ ಪಾಸಿಟಿವ್ ಕಂಡು ಬಂದರೆ ನಗರದ ಕೋವಿಡ್ ಕೇರ್ ಸೆಂಟರ್‌ನಲ್ಲಿ ಹೋಮ್ ಕ್ವಾರಂಟೈನ್ ಆಗಬಹುದು.ಅದಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ.ಮನೆಯಲ್ಲಿ ಇರುವಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗಿದೆ.೧೦ ಬೆಡ್‌ಗಳ ವ್ಯವಸ್ಥೆ ಕಲ್ಪಿಸಲಾಗಿದೆ.ಆದಷ್ಟು ಇದರ ಸದುಪಯೋಗ ಮಾಡಿಕೊಳ್ಳಬೇಕು – ಸಂತೋಷ ಹಳ್ಳೂರ್ ಪಿಐ ಶಹಾಬಾದ.