ಸುರಪುರ: ಸರಕಾರ ಪಿಂಜಾರ ಅಭೀವೃಧ್ದಿ ನಿಗಮ ಸ್ಥಾಪಿಸುವ ಮೂಲಕ ಸಮಾಜದ ಅಭೀವೃಧ್ಧಿಗೆ ಸಹಕಾರ ನೀಡುವಂತೆ ಪಿಂಜಾರ ಸೇವಾ ಸಂಘದ ಜಿಲ್ಲಾಧ್ಯಕ್ಷ ಅಹ್ಮದ ಪಠಾಣ ಮಾತನಾಡಿದರು.
ನಗರದ ಪಿಂಜಾರ ವಿವಿದೋದ್ದೇಶ ಸೇವಾ ಸಂಘದ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ರಾಜ್ಯದಲ್ಲಿನ ಪಿಂಜಾರ ಸಮುದಾಯದ ಅಭೀವೃಧ್ಧಿಗೆ ಡಾ:ಸಿ.ಎಸ್.ದ್ವಾರಕಾನಾಥ ನೀಡಿದ ವರದಿ ಕೂಡಲೆ ಜಾರಿಗೊಳಿಸಬೇಕು.ಅಲ್ಲದೆ ಪಿಂಜಾರ ಅಭೀವೃಧ್ಧಿ ನಿಗಮ ಸ್ಥಾಪಿಸುವಂತೆ ಕಳೆದ ಒಂಬತ್ತು ವರ್ಷಗಳಿಂದ ಸರಕಾಕ್ಕೆ ನಮ್ಮ ಬೇಡಿಕೆಗಳ ಕುರಿತು ಒತ್ತಾಯಿಸುತ್ತಿದ್ದರು ಸರಕಾರಗಳು ನಮ್ಮ ಸಮಸ್ಯೆಗಳನ್ನು ಆಲಿಸದೆ ನಿರ್ಲಕ್ಷ್ಯ ತೋರುತ್ತಿದೆ.ಇದನ್ನು ಖಂಡಿಸುವೆವು.ಕೂಡಲೆ ಸರಕಾರ ಅಭೀವೃಧ್ಧಿ ನಿಗಮ ಸ್ಥಾಪಿಸಬೇಕು.ಅಲ್ಲದೆ ನಮ್ಮ ಸಮುದಾಯದ ಜಾತಿ ಪ್ರಮಾಣ ಪತ್ರಗಳಲ್ಲಿ ಮುಸ್ಲಿಂ ಎಂದು ನಮೂದಿಸಲಾಗುತ್ತಿದೆ.
ಇದರಿಂದ ನಿಜವಾದ ಪಿಂಜಾರ,ನದಾಫ ಮತ್ತಿತರೆ ಹೆಸರಲ್ಲಿ ಕರೆಯುವ ನಮ್ಮ ಜನಾಂಗದವರಿಗೆ ಸೌಲಭ್ಯಗಳು ಸಿಗುತ್ತಿಲ್ಲ.ಆದ್ದರಿಂದ ಈ ಮುಂದೆ ಸರಕಾರ ಕೊಡುವ ಜಾತಿ ಪ್ರಮಾಣ ಪತ್ರಗಳಲ್ಲಿ ಪಿಂಜಾರ ಎಂದು ನಮೂದಿಸಬೇಕು ಮತ್ತು ನಮ್ಮ ಸಮುದಾಯದವರಲ್ಲದೆ ಬೇರೆ ಯಾರೂ ಪಿಂಜಾರ ಜಾತಿ ಪ್ರಮಾಣ ಪತ್ರ ಪಡೆಯದಂತೆ ತಡೆಯಲು ಗ್ರಾಮ ಲೆಕ್ಕಿಗರು ಪಂಚನಾಮೆ ನಡೆಸಿ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಒತ್ತಾಯಿಸಿದರು.
ಅಲ್ಲದೆ ಖಾದಿಯಾನರು ಪಿಂಜಾರರೆಂದು ಹೇಳಿಕೊಂಡು ಧರ್ಮಾಂತರಗೊಳ್ಳುತ್ತಿರುವ ಬಗ್ಗೆ ದೂರುಗಳಿವೆ.ಆದ್ದರಿಂದ ನಮ್ಮ ಸಮಾಜದ ಜಾಗೃತಿಗಾಗಿ ಮತ್ತು ಖಾದಿಯಾನರ ಧರ್ಮಾಂತರ ತಡೆಯಲು ಅಗಸ್ಟ್ ೧ ರಂದು ಹುಣಸಗಿ ತಹಸೀಲ್ ಕಚೇರಿ ಮುಂದೆ ಮತ್ತು ಅಗಸ್ಟ್ ೮ ರಂದು ಸುರಪುರ ತಹಸೀಲ್ ಮುಂದೆ ಮತ್ತು ಸಪ್ಟೆಂಬರ್ ೧ ರಂದು ಶಹಾಪುರ ತಹಸೀಲ್ ಕಚೇರಿ ಮುಂದೆ ಹಾಗು ಸಪ್ಟೆಂಬರ್ ೫ ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಸುರಪುರ ತಾಲ್ಲೂಕಾಧ್ಯಕ್ಷ ಅಬ್ದುಲಸಾಬ್ ಬೇವಿನಾಳ,ಹುಣಸಗಿ ತಾಲ್ಲೂಕಾಧ್ಯಕ್ಷ ಬಂದಗೀಸಾಬ ಬಸಂತಪೂರ ಹಾಗು ಮುಖಂಡರಾದ ಕಾಸಿಂ ಸಾಬ ಅಂಜಳ, ಖಾದರಸಾಬ ನದಾಫ,ಶರಮುದ್ದೀನ್ ಶಖಾಪುರ, ಹುಸೇನಸಾಬ ಕಿರದಹಳ್ಳಿ,ಖಾಜಾಹುಸೇನ ದಳಪತಿ,ಬಾದಶಹ ನಾಗರಾಳ,ನಬಿರಸೂಲ ಏವೂರ,ಹುಸೇನಸಾಬ ಮಂಗಿಹಾಳ, ಚಂದಾಸಾಬ ಚಂದಲಾಪುರ,ಹುಸೇಸನಸಾಬ ಹುಣಸಗಿ,ಖಾಸಿಂ ಸಾಬ ಮುಷ್ಠಳ್ಳಿ ಸೇರಿದಂತೆ ಅನೇಕರಿದ್ದರು.