ವಿವಿಧ ಗ್ರಾಮಗಳಿಗೆ ಬಸ್ಸಿನ ಸೌಲಭ್ಯಕ್ಕಾಗಿ ವಿದ್ಯಾರ್ಥಿ ಒಕ್ಕೂಟ ಮನವಿ

0
142

ಸುರಪುರ: ತಾಲ್ಲೂಕಿನ ಅನೇಕ ಗ್ರಾಮಗಳಿಗೆ ಬಸ್ಸಿನ ಸೌಲಭ್ಯವಿಲ್ಲದೆ ಜನರು ಹಾಗು ವಿದ್ಯಾರ್ಥಿಗಳು ತೀವ್ರ ತೊಂದರೆ ಪಡುವಂತಾಗಿದೆ.ಆದ್ದರಿಂದ ಕೂಡಲೆ ಎಲ್ಲಾ ಗ್ರಾಮಗಳಿಗೆ ಬಸ್ಸಿನ ಸೌಲಭ್ಯ ಕ್ಲಪಿಸುವಂತೆ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಸಿದ್ದನಗೌಡ ಬಿರಾದಾರ ಒತ್ತಾಯಿಸಿದರು.

ನಗರದ ಬಸ್ ಡಿಪೋ ಬಳಿ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ, ತಾಲ್ಲೂಕಿನ ಹಾಲಗೇರಾ,ಶಖಾಪೂರ,ಹೆಮನೂರ,ಮರಕಲ್ ಸೇರಿದಂತೆ ಅನೇಕ ಗ್ರಾಮಗಳಿಗೆ ಮದ್ಹ್ಯಾನ ಕಾಲೇಜು ಮುಗಿಸಿಕೊಂಡು ಮನೆಗೆ ಹೋಗಲು ಸರಿಯಾದ ಬಸ್ಸಿನ ಸೌಕರ್ಯವಿಲ್ಲದೆ.ಬೆಳಿಗ್ಗೆ ಎಂಟು ಗಂಟೆಗೆ ಬಂದ ವಿದ್ಯಾರ್ಥಿಗಳು ಸಂಜೆಯ ವರೆಗು ಊಟವಿಲ್ಲದೆ ಹಸಿವಿನಿಂದ ಪರದಾಡುವಂತ ಪರಸ್ಥಿತಿ ಇದೆ.ಅಲ್ಲದೆ ವಿದ್ಯಾರ್ಥಿಗಳಿಗೆ ಅಭ್ಯಾಸದ ಕೊರತೆಯು ಉಂಟಾಗಲಿದೆ.ಆದ್ದರಿಂದ ಬೆಳಿಗ್ಗೆ ಎಂಟು ಗಂಟೆಯೊಳಗೆ ಬಸ್ಸು ಬರಬೇಕು ಮತ್ತು ಮದ್ಹ್ಯಾನ ಒಂದು ಗಂಟೆಗೆ ಸರಿಯಾಗಿ ಬಸ್ಸನ್ನು ಬಿಡಬೇಕು.

Contact Your\'s Advertisement; 9902492681

ಒಂದು ಗಂಟೆಗೆ ಹೋಗಬೇಕಾದ ಬಸ್ಸು ನಾಲ್ಕು ಗಂಟೆಗೆ ಹೋಗುತ್ತದೆ.ಕೆಲವೊಮ್ಮೆ ಬಸ್ಸೆ ಇರದೆ ವಿದ್ಯಾರ್ಥಿಗಳು ಪರದಾಡಿದ ಪ್ರಸಂಗಗಳು ನಡೆದಿವೆ.ಆದರೆ ಸರಕಾರ ವಿದ್ಯಾರ್ಥಿಗಳಿಗೆ ಎಲ್ಲಾ ಸೌಲಭ್ಯ ಕೊಡುತ್ತದೆ ಎನ್ನುತ್ತಾರೆ.ಆದರೆ ಬಸ್ಸಿನ ವ್ಯವಸ್ಥೆ ಇಲ್ಲದೆ ತೊಂದರೆ ಪಡುವಂತಾಗುತ್ತಿದೆ.ಆದ್ದರಿಂದ ನಾಳೆಯಿಂದಲೇ ಮದ್ಹ್ಯಾನ ಸರಿಯಾದ ಸಮಯಕ್ಕೆ ಬಸ್ ಓಡಿಸಬೇಕು ಇಲ್ಲವಾದರೆ ಡಿಪೋ ಮುಂದೆ ಉಗ್ರ ಪ್ರತಿಭಟನೆ ನಡೆಸಲಾಗುವುದೆಂದು ಈ ಮೂಲಕ ಆಗ್ರಹಿಸುವುದಾಗಿ ತಿಳಿಸಿ,ನಂತರ ಘಟಕ ವ್ಯವಸ್ಥಾಪಕರಿಗೆ ಬರೆದ ಮನವಿಯನ್ನು ಮ್ಯಾನೆಜರವರಿಗೆ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳಾದ ಶಾಂತಮ್ಮ ಹಾಲಗೇರಾ, ಸಂಗೀತಾ, ರೇಣುಕಾ, ಮಲ್ಕಮ್ಮ, ವಸಂತಕುಮಾರ, ರವಿಕುಮಾರ, ಮೈಲಾರಿ,ಆರತಿ ಶಖಾಪುರ,ಶಿವಪುತ್ರ ಹೆಮನೂರ,ದೇವಮ್ಮ,ದೇವಿಕಾ ಹೆಮನೂರ,ಭಾಗ್ಯಾ ಸತ್ಯಂಪೇಟೆ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here