ಸುರಪುರ: ನಗರದ ಶ್ರೀ ಜನನಿ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಮತದಾರರ ದಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮತದಾನ ಪ್ರತಿಜ್ಞಾ ವಿಧಿಯೊಂದಿಗೆ ಜನಸ್ನೇಹಿ ಪೋಲಿಸ್ ವಿಭಾಗದ ವತಿಯಿಂದ ಪೊಲೀಸ್ ಪೇದೆ ದಯಾನಂದ ಬಿ ಜಮಾದಾರ್ ಭಾಗವಹಿಸಿ ವಿಶೇಷ ಕಾನೂನು ಅರಿವು ಉಪನ್ಯಾಸ ನೀಡಿದರು. ಹೆಣ್ಣು ಮಕ್ಕಳಿಗೆ ಕಾನೂನಿನ ಸೌಲಭ್ಯಗಳನ್ನು ಹೇಗೆ ಉಪಯೋಗಿಸಿಕೊಳ್ಳಬೇಕು ಎಂದು ತಿಳಿಸಿದರು.ಅಲ್ಲದೆ ಎಲ್ಲರು ಮತದಾರ ಪಟ್ಟಿಯಲ್ಲಿ ಹೆಸರನ್ನು ನೊಂದಾಯಿಸಿಕೊಳ್ಳುವಂತೆ ಮತ್ತು ಕಡ್ಡಾಯವಾಗಿ ಮತದಾನ ಮಾಡುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಆದಿಶೇಷ ನೀಲಗಾರ , ಪ್ರಾಂಶುಪಾಲರಾದ ಬಸವರಾಜ್ವೇರಿ ಘಂಟಿ , ಉಪನ್ಯಾಸಕರಾದ ವೆಂಕಟೇಶ ಜಾಲಗಾರ, ಅಂಬ್ರೇಶ್ ಚಿಲ್ಲಾಳ, ಮಹೇಶ ಕುಮಾರ, ಚಂದ್ರಶೇಖರ ನಾಯಕ್, ಬೀರಲಿಂಗ ಕೊಡೆಸೂರ, ಮರೆಮ್ಮ, ನಂದಿನಿ, ಶ್ರೀದೇವಿ ಸೇರಿದಂತೆ ಮಹಾವಿದ್ಯಾಲಯದ ಎಲ್ಲಾ ಉಪನ್ಯಾಸಕರು ಹಾಗು ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.