ಜಿಡಗಾ ಗ್ರಾಪಂನಲ್ಲಿ ೭೩ನೇ ಗಣರಾಜ್ಯೋತ್ಸವ ಆಚರಣೆ

0
19

ಆಳಂದ: ತಾಲೂಕಿನ ಜಿಡಗಾ ಗ್ರಾಮ ಪಂಚಾಯತ್‌ನಲ್ಲಿ ೭೩ನೇ ಗಣರಾಜ್ಯೋತ್ಸವ ನಿಮಿತ್ತ ಗ್ರಾಪಂ ಅಧ್ಯಕ್ಷ ಸಿದ್ಧರಾಮ ಯಾದವಾಡ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಸಾರ್ವಜನಿಕರಿಗೆ ಕಸವಿಲೆವಾರಿ ಬಕೇಟಗಳನ್ನು ವಿತರಿಸಿದರು.

ಗ್ರಾಪಂ ಅಧ್ಯಕ್ಷ ಸಿದ್ಧರಾಮ ಯಾದವಾಡ ಅವರು ರಾಷ್ಟ್ರಧ್ಜಜಾರೋಹಣ ನೆರವೇರಿಸಿದ ಅವರು ಗ್ರಾಮ ಸ್ವಚ್ಛತೆಗೆ ಪಂಚಾಯತ ಆಡಳಿತದೊಂದಿಗೆ ಗ್ರಾಮಸ್ಥರ ಸಹಕಾರ ಮುಖ್ಯವಾಗಿದೆ ಎಂದು ಅವರು ಹೇಳಿದರು. ಇದೇ ವೇಳೆ ೧೫ನೇ ಹಣಕಾಸಿನ ಅನುದಾನದಲ್ಲಿ ಒಣ ಕಸ ಮತ್ತು ಹಸಿ ಕಸ ವಿಲೆವಾರಿ ಕೈಗೊಳ್ಳಲು ಸಾರ್ವಜನಿಕರಿಗೆ ಬಕೇಟಗಳನ್ನ ವಿತರಿಸಿದರು. ಅಭಿವೃದ್ಧಿ ಅಧಿಕಾರಿ ರಾಮದಾಸ ಪೂಜಾರಿ ಮಾತನಾಡಿ, ಸರ್ಕಾರಿ ಯೋಜನೆಗಳ ಅನುಷ್ಠಾನಕ್ಕೆ ಸರ್ವರು ಕೈಜೋಡಿಸಿ ಮಾದರಿ ಗ್ರಾಪಂನ್ನಾಗಿಸಲು ಪಣತೋಡಬೇಕಾಗಿದೆ. ಆಗ ಮಾತ್ರ ಗಣರಾಜ್ಯೋತ್ಸವದ ಮತ್ತು ಸ್ವಾತಂತ್ರ್ಯದ ಗ್ರಾಮ ಸ್ವರಾಜ್ಯದ ಕನಸು ಸಹಕಾರಗೊಳ್ಳುತ್ತದೆ ಎಂದರು.

Contact Your\'s Advertisement; 9902492681

ಗ್ರಾಪಂ ಉಪಾಧ್ಯಕ್ಷೆ ಜ್ಯೋತಿ ವಿರೇಂದ್ರ ಪಾಟೀಲ, ಸದಸ್ಯ ಸಿದ್ಧರಾಮ ಮಂಡೆ, ಶ್ರೀಶೈಲ ಮೂಲಗೆ, ಶರಣಗೌಡ, ಸಂಜುಕುಮಾರ ಆರೆ, ಲಕ್ಷ್ಮಣ ಮಂಡೆ, ಶರಣು ಕಾಳಕಿಂಗೆ, ಬಾಬುರಾವ್ ಸಾವಳೇಶ್ವರ, ದಯಾನಂದ, ಹರಿಶ್ಚಂದ್ರ, ಮುಖಂಡ ಶ್ರೀಶೈಲ ಸ್ವಾಮಿ, ಬಸವರಾಜ ಯಾದವಾಡ, ಶಶಿಕಾಂತ ಕಾಳಕಿಂಗೆ, ಸಂದೀಪ ಕಾಳಕಿಂಗೆ, ಬಸವರಾಜ ಹೆಡೆ ಸೇರಿದಂತೆ ಗ್ರಾಮಸ್ಥರು, ಪಂಚಾಯತ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here