ಸುರಪುರ: ನಗರದ ಮೋಜಂಪುರ ಶಾದಿ ಮಹಲ್‌ನಲ್ಲಿ ಕರ್ನಾಟಕ ಉರ್ದು ಅಕಾಡೆಮಿ ಹಾಗೂ ಸುಮಯ್ಯಾ ಮಹಿಳಾ ಸೇವಾ ಸಹಾಯ ಸಂಘದ ವತಿಯಿಂದ ಕವಿಗೋಷ್ಟಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಹೆಚ್.ಕೆ.ಕುರಕುಂದಾ ಮಾತನಾಡಿ ತನ್ನದೇ ಆದ ಭವ್ಯ ಇತಿಹಾಸ ಹೊಂದಿರುವ ಉರ್ದು ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಇಂತಹ ಉರ್ದು ಕವಿಗೋಷ್ಠಿಗಳು ಪೂರಕವಾಗುತ್ತವೆ ಎಂದು ಹೇಳಿದರು, ಅಕಾಡೆಮಿ ವತಿಯಿಂದ ಪ್ರತಿವರ್ಷ ಈ ಭಾಗದಲ್ಲಿ ಉರ್ದು ಕವಿಗೋಷ್ಠಿಗಳನ್ನು ಆಯೋಜಿಸಲಾಗುವುದು ಇದರಿಂದ ಯುವ ಕವಿಗಳಿಗೆ ಪ್ರೇರಣೆ ಸಿಗಲಿದೆ ಹಾಗೂ ಸೂಕ್ತ ವೇದಿಕೆ ಕಲ್ಪಿಸಿಕೊಡಲಿದೆ ಎಂದು ಹೇಳಿದರು.
ಅತಿಥಿಗಳಾಗಿ ಡಾ.ಮಹ್ಮದ ಮುನವರ ಬೋಡೆ, ರಿಯಾಜುರ್ ರಹೆಮಾನ ಅನ್ಸಾರಿ, ಮಹ್ಮದ ನಿಜಾಮುದ್ದಿನ್ ಶಾಹಿ ಇಮಾಮ ತಿರಂದಾಜ, ನಗರಸಭೆ ಸದಸ್ಯ ಅಹ್ಮದ ಶರೀಫ್, ಮಾಜಿ ಸದಸ್ಯ ತೌಫೀಕ್ ಅಹ್ಮದ ವೇದಿಕೆಯಲ್ಲಿದ್ದರು.
ಸಾಹಿತಿಗಳಾದ ಇರ್ಷಾದ ಅಂಜುಮ್ ಮಾಲೆಗಾಂವ್, ಮಲಿಕ್ ಮಂಜರ ಮಾಲೇಗಾಂವ್, ಡಾ.ಅತೀಕ್ ಅಜಮಲ್ ಕಲಬುರಗಿ, ಮುಕೀಮ ಬಾಬಾ ಮಜಾಯ ಕಲಬುರಗಿ, ತೋಫಿಕ್ ಅಸದ್ ತಿಮ್ಮಾಪುರಿ, ಔಸಾಫ್ ಮುಜಾಹಿದ್ ತಿಮ್ಮಾಪುರಿ, ಅಜೀಮ್ ಫರೀದಿ, ಮಹ್ಮದ ಸಾದೀಕ್ ಉಂಬ್ರಿ, ಜಹೀರ್ ಹುಸೇನ ರುಕ್ಮಾಪುರ, ಶೌಕತ್ ಹುಸೇನ ಮಶಕೂರ, ಮುಬೀನ್ ಅಹ್ಮದ ಜಖಂ ಯಾದಗಿರಿ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಮುಖಂಡರಾದ ರಫೀಕಸಾಬ ರೇವೂರ ರಂಗಂಪೇಟ, ಅಬೀದ್ ಹುಸೇನ ಪಗಡಿ, ಕಲೀಮುದ್ದಿನ್ ಫರೀದಿ, ಮಹ್ಮದ ಶಮಸುದ್ದೀನ್ ನಗನೂರಿ, ಶೇಖ ಅಮ್ಜದ್, ಅಬ್ದುಲ್ ರೌಫ್, ಅನ್ವರ್ ಇನಾಂದಾರ, ಮಹ್ಮದ ಮೌಲಾಲಿ ಸೌದಾಗರ, ದಖನಿ ವಕೀಲರು ಉಪಸ್ಥಿತರಿದ್ದರು.