ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಕೌಶಲ್ಯ ಕೇಂದ್ರದ ಉಪಕರಣಗಳ ವಿತರಣೆ ಕಾರ್ಯಕ್ರಮದಲ್ಲಿ ಶಾಸಕ ಸುಭಾಷ್ ಆರ್ ಗುತ್ತೇದಾರ ಭಾಗವಹಿಸಿ ಉಪಕರಣಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಸಂಘದ ಸ್ವಯಂ ಉದ್ಯೋಗ ನಿರ್ದೇಶಕರಾದ ಮಂಜುಳಾ, ಪರವೀನ ಬೇಗಂ, ಜಿಲ್ಲಾ ಸಂಯೋಜಕ ಶ್ರೀಧರ ಆಲೂರಕರ, ತಾಲೂಕಾ ಸಂಯೋಜಕ ಮಲ್ಲಿನಾಥ ಬಿರಾದಾರ, ಮಂದಾಕಿನಿ ಜಿರೋಳಿ ಸೇರಿದಂತೆ ತಾಲೂಕಿನ ಹಲವಾರು ಫಲಾನುಭವಿಗಳು ಭಾಗವಹಿಸಿದ್ದರು.
ತಾಲೂಕಿನ ಸಂಯೋಜಕರಾದ ಪ್ರಕಾಶ ಗಾಯಕವಾಡ ನಿರೂಪಿಸಿದರೆ, ತಿಪ್ಪೇರುದ್ರ ಮಠಪತಿ ವಂದಿಸಿದರು.