ಜೇವರ್ಗಿ: ತಾಲೂಕು ಆಡಳಿತದ ಕೇಂದ್ರ ಕಚೇರಿಯಾಗಿರುವ ಇಲ್ಲಿನ ವಿಧಾನಸೌಧದ ಆವರಣದಲ್ಲಿ ಕಚೇರಿಗಳಲ್ಲಿ ಕೆಲಸ ಆಗಬೇಕಾದರೆ ದುಡ್ಡು ಬಿಚ್ಚಲೆ ಬೇಕು ಎಂದು ಸ್ಥಳೀಯರಿಂದ ಆರೋಪ ಕೇಳಿಬರುತ್ತಿದೆ.
ಸರಕಾರಿ ಕೆಲಸ ದೇವರ ಕೆಲಸ ದಕ್ಷಿಣೆ ಕೇಳುತ್ತಾರೆ , ಸರಕಾರಿ ಕೆಲಸ ಅಂದರೆ ಭಕ್ತಿ ಮತ್ತು ಶ್ರದ್ಧೆಯಿಂದ ದೇವರು ಕೆಲಸದಂತೆ ಮಾಡುತ್ತಾರೆ ಆದರೆ ಅದಕ್ಕೆ ದಕ್ಷಣೆ ಪಡೆಯಲು ಮಾತ್ರ ಹಿಂದೇಟು ಹಾಕುವುದಿಲ್ಲ. ಇಲ್ಲಿನ ತಾಲ್ಲೂಕು ಆಡಳಿತದ ಕಚೇರಿಯಲ್ಲಿರುವ ಎಲ್ಲಾ ಕಚೇರಿಗಳಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ತಾಂಡವಾಡುತ್ತಿದ್ದು ತಹಸಿಲ್ದಾರ್ ವಿನಯ್ ಕುಮಾರ್ ಪಾಟೀಲ್ ಅವರು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ ಎಂದು ಸ್ಥಳೀಯ ಫಲಾನುಭವಿಗಳು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಜೇವರ್ಗಿ ತಾಲೂಕು ಆಡಳಿತದ ಕಚೇರಿಯ ನೌಕರರು ಕರ್ತವ್ಯ ನಿರ್ವಹಿಸುವುದೇ ಬಹಳ ಅಪರೂಪ ಆದರೆ ಯಾವಾಗಲಾದರೂ ಬಂದರು ಕೇಳುವುದಿಲ್ಲ, ಬರುವುದಕ್ಕೆ ಹೋಗುವುದಕ್ಕೆ ಯಾವುದೇ ಅಡೆತಡೆ ಸಮಯದ ಪರಿವೆ ಇರುವುದಿಲ್ಲ. ಅವರನ್ನು ಯಾರೂ ಹೇಳುವವರು ಇಲ್ಲದಂತಾಗಿದೆ ಎಂದು ದೂರಿದ್ದಾರೆ.
ಇಲ್ಲಿನ ವಿವಿಧ ಹಳ್ಳಿಗಳಿಂದ ಆಗಮಿಸುವ ಜನನ ಮತ್ತು ಮರಣ ಪ್ರಮಾಣ ಪತ್ರವನ್ನು ಪಡೆಯುವ ಸಾರ್ವಜನಿಕರು ತಿಂಗಳುಗಟ್ಟಲೆ ಅಲೆದಾಡಿದರು ಕಚೇರಿ ಸಿಬ್ಬಂದಿಗಳು ಅವರಿಗೆ ಯಾವುದೇ ಪ್ರಮಾಣಪತ್ರ ನೀಡಿದ ಸತಾಯಿಸುತ್ತಾರೆ. ಅಲ್ಲದೆ ಮುಂಗಡವಾಗಿ ನೂರರಿಂದ ರಿಂದ ಎರಡು ನೂರು ರೂಪಾಯಿಗಳನ್ನು ಪಡೆದು ನಾಳೆ ಬನ್ನಿ ನೋಡೋಣ ಬನ್ನಿ. ಸಾಹೇಬರು ಇಲ್ಲ ಸಹಿ ಮಾಡಿಸಿ ಕೊಡುತ್ತೇವೆ ಎಂದು ಸಬೂಬು ಹೇಳುತ್ತಾರೆ ಎಂದು ಆರೋಪಗಳು ಕೇಳಿಬರುತ್ತಿವೆ.
ಸರಕಾರಿ ನಿಯಮಾವಳಿಗಳನ್ನು ಪಾಲಿಸಬೇಕಾದ ತಸಿಲ್ದಾರ್ ಕಾರ್ಯಲಯ ಸೇರಿದಂತೆ ಉಪನೋಂದಣಿ ಹಾಗೂ ಭೂದಾಖಲೆಗಳ ಸಹಾಯಕ ನಿರ್ದೇಶಕರು , ಅಧಿಕಾರಿಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇರಿದಂತೆ ಇತರ ಎಲ್ಲಾ ಕಾರ್ಯಗಳಲ್ಲಿ ಸಹ ಮಾಸ್ಕ ಗಳನ್ನು ಧರಿಸದೇ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದು, ಸಾರ್ವಜನಿಕರಿಗೆ ತಿಳುವಳಿಕೆ ನೀಡಬೇಕಾದ ಸರ್ಕಾರಿ ನೌಕರರ ಈ ರೀತಿ ಬೇಜವಾಬ್ದಾರಿತನ ತೋರಿಸಿದ್ದಾರೆ. ಇವರ ಮೇಲೆ ಕ್ರಮ ಕೈಗೊಳ್ಳುವ ಯಾರು? ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಇನ್ನಾದರೂ ತಹಸಿಲ್ ಕಾರ್ಯಾಲಯ ಜೇವರ್ಗಿ ಭ್ರಷ್ಟಾಚಾರ ಮುಕ್ತವಾಗಿ ಸಾರ್ವಜನಿಕರ ಸ್ನೇಹಿಯಾಗಿ ಕರ್ತವ್ಯ ನಿರ್ವಹಿಸುವುದೇ ಎನ್ನುವುದು ಕಾದುನೋಡಬೇಕಿದೆ.