ಕಲಬುರಗಿ: ವೈದ್ಯಕೀಯ ವಿದ್ಯಾರ್ಥಿಗಳ ಅಂತಿಮ ಪರೀಕ್ಷೆಗಳನ್ನು ಮುಂದೂಡುವಂತೆ ಆಗ್ರಹಿಸಿ ಇಂದು ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ವಿದ್ಯಾರ್ಥಿಗಳು ಹೋರಾಟ ನಡೆಸಿ ವೈದ್ಯಕೀಯ ಶಿಕ್ಷಣ ಸಚಿವರಿಗೆ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ನೇತೃತ್ವದಲ್ಲಿ ಆಗ್ರಹಿಸಿದರು.
ಇಂದು ರಾಜ್ಯದ್ಯಂತ ಪ್ರತಿಭಟನೆಗೆ ಕರೆ ನೀಡಿರುವ ವಿದ್ಯಾರ್ಥಿಗಳು ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಒಂದು ವರ್ಷ ಪಠ್ಯಕ್ರಮಗಳು ನಡೆಯಬೇಕಿತ್ತು. ಆದರೆ ಕೋವಿಡ್ ಹಿನ್ನೆಲೆ ಅವರಿಗೆ ಕೇವಲ ಏಳು ತಿಂಗಳುಗಳμÉ್ಟೀ ತರಗತಿಗಳು ನಡೆದಿವೆ. ಒಂದೆಡೆ ಸಂಪೂರ್ಣವಾಗಿ ತರಗತಿಗಳು ನಡೆಯದ ಕಾರಣ ಪಠ್ಯಕ್ರಮ ಪೂರ್ಣಗೊಂಡಿಲ್ಲ. ಅವಶ್ಯಕ ಕ್ಲಿನಿಕಲ್ ಪೋಸ್ಟಿಂಗ್ ನಡೆದಿಲ್ಲ. ಅಲ್ಲದೇ ಈ ವಿದ್ಯಾರ್ಥಿಗಳು ಕೋವಿಡ್ 2ನೇ ಅಲೆಯ ಸಂದರ್ಭದಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಿ ಸೇವೆ ಸಲ್ಲಿಸಿದ್ದಾರೆ ಎಂದು ಹೋರಾಟದ ಜಿಲ್ಲಾ ಉಪಾಧ್ಯಕ್ಷ ನೇತೃತ್ವವಹಿಸಿದ ಸ್ನೇಹಾ ಕಟ್ಟಿಮನಿ ತಿಳಿಸಿದರು.
ಪ್ರಸ್ತುತ ಓಮೈಕ್ರಾನ್ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಏರುತ್ತಿದೆ. ಈ ಹಿನ್ನೆಲೆ ಒಂದು ವಾರದ ಹಿಂದೆ ನೂರಾರು ವಿದ್ಯಾರ್ಥಿಗಳು ಎಐಡಿಎಸ್ಓ ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ಹೋರಾಟ ಸಮಿತಿ ನೇತೃತ್ವದಲ್ಲಿ ಆನ್ಲೈನ್ ಹೋರಾಟದಲ್ಲಿ ಭಾಗವಹಿಸಿದ್ದರು. ವೈದ್ಯಕೀಯ ಸಚಿವರಾದ ಕೆ. ಸುಧಾಕರ್ ಹಾಗೂ ಖಉUಊS ನ ಉಪಕುಲಪತಿಗಳನ್ನು ಭೇಟಿ ಮಾಡಿ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳ ಪರವಾಗಿ ನಿರ್ಧಾರ ಕೈಗೊಳ್ಳಬೇಕೆಂದು ಮನವಿ ಮಾಡಲಾಗಿತ್ತು. ಈ ಹೋರಾಟಕ್ಕೆ ಸ್ಪಂದಿಸಿದ ಆರೋಗ್ಯ ಸಚಿವರು ಪರೀಕ್ಷೆಗಳನ್ನು ಮುಂದೂಡಬೇಕೆಂದು ಸಲಹೆ ನೀಡಿದರು.
ಒಂದು ವಾರ ಸಮಯವನ್ನು ತೆಗೆದುಕೊಂಡು ಸಭೆ ಕರೆದು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿತ್ತು. ಆದರೆ ಮತ್ತೆ ಇದೇ ಫೆಬ್ರವರಿ 22 ರಿಂದ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಿರುವುದು ಅತ್ಯಂತ ಅಮಾನವೀಯ ಮತ್ತು ಖಂಡನೀಯವಾದದ್ದು. ಫೆಬ್ರವರಿಯಲ್ಲಿ ಪರೀಕ್ಷೆ ನಡೆಸಲೇ ಬೇಕು ಎಂಬುದಕ್ಕೆ \ ನೀಡಿರುವ ಕಾರಣ ಮುಂದೆ ಬರುವ ನೀಟ್ ಪರೀಕ್ಷೆಗೆ ತೊಂದರೆಯಾಗಬಾರದೆಂದು, ಆದರೆ ನೀಟ್ ಪರೀಕ್ಷೆಗೂ ಇದಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಹಾಗೂ ಅಪ್ರಸ್ತುತ. ಇದಲ್ಲದೇ ಓಒಅ ಕೂಡ ಮಾರ್ಚ್ ತಿಂಗಳಲ್ಲಿ ಪರೀಕ್ಷೆಗಳನ್ನು ನಡೆಸಬೇಕು ಎಂದು ಮಾರ್ಗಸೂಚಿಸಿದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷರಾದ ಹಣಮಂತ ಎಸ್ ಹೆಚ್ ತಿಳಿಸಿದರು.
ಇತ್ತ ಕೊಂಚ ಭರವಸೆಯಿಂದ ಕಾಯುತ್ತಿದ್ದ ಅಂತಿಮ ವರ್ಷದ ಸಾವಿರಾರು ವೈದ್ಯಕೀಯ ವಿದ್ಯಾರ್ಥಿಗಳನ್ನು ಸಂಧಿಗ್ದ ಪರಿಸ್ಥಿತಿಗೆ ದೂಡಿದ್ದು, ಅವರು ಮಾನಸಿಕ ಹಿಂಸಿಗೆ ಒಳಗಾಗಿದ್ದಾರೆ. ಈಗಾಗಲೇ ಬಹುತೇಕ ರಾಜ್ಯಗಳು ವಿದ್ಯಾರ್ಥಿಗಳ ಭವಿಷ್ಯವನ್ನು ಮನಗಂಡು ಒಂದು ತಿಂಗಳುಗಳ ಕಾಲ ಪರೀಕ್ಷೆಗಳನ್ನು ಮುಂದೂಡಿದೆ. ಹಾಗಾಗಿ ನಮ್ಮ ರಾಜ್ಯದಲ್ಲೂ ವೈದ್ಯಕೀಯ ವಿದ್ಯಾರ್ಥಿಗಳು ಒತ್ತಡಕ್ಕೊಳಗಾಗದೇ ನಿರ್ಭಯದಿಂದ ಪರೀಕ್ಷೆಗಳನ್ನು ಎದುರಿಸಲು, ಪರೀಕ್ಷೆಗೆ ಅಚ್ಚುಕಟ್ಟಾಗಿ ತಯಾರಾಗಲು ಅಗತ್ಯವಿರುವಷ್ಟು ಕಾಲಾವಕಾಶ ಒದಗಿಸಿ, ನಂತರದಲ್ಲಿ ಪರೀಕ್ಷೆಯ ವೇಳಾಪಟ್ಟಿಯನ್ನು ನಿಗದಿಪಡಿಸಬೇಕೆಂದು ಸಮಿತಿ ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸಸ್ ಕುಲಪತಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಪತ್ರ ಸಲ್ಲಿಸಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಕಾಯದರ್ಶಿಗಳಾದ ತುಳಜರಾಮ ಎನ್ ಕೆ, ಸದಸ್ಯರಾದ ಶಿಲ್ಪಾ ಬಿ ಕೆ, ಪ್ರೀತಿ ದೊಡ್ಡಮನಿ, ಭೀಮು ಆಂದೋಲ, ನಾಗರಾಜ, ಅಲಿಖಾನ್, ವಿಕಾಶ್, ಅಭಿಲಾಸ್, ಪ್ರಮೋದ, ಸೇರಿ ಹಲವಾರು ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.