ಕಲಬುರಗಿ:ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದ ವಿವಿಧ ಪ್ಯಾಸೆಂಜರ್ ರೈಲುಗಳನ್ನು ಬಂದ್ ಮಾಡಿದ್ದು ಮತ್ತೆ ಅವುಗಳು ಓಡಿಸಬೇಕು ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಸಿರಗಾಪೂರ ಅವರು ರೈಲ್ವೆ ಇಲಾಖೆಗೆ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ದಿನ ನಿತ್ಯ ದುಡಿಯುವ ವರ್ಗದ ಜನರು ಪ್ಯಾಸೆಂಜರ್ ರೈಲನ್ನೇ ಅವಲಂಭಿಸಿದ್ದಾರೆ.ಕಲಬುರಗಿ ಹಾಗೂ ಸೋಲಾಪುರದಿಂದ ಹೊರಡುವ ಪ್ಯಾಸೆಂಜರ್ ರೈಲುಗಳ ಮೂಲಕ ಸಾರ್ವಜನಿಕರು ಕೆಲಸಗಳಿಗೆ ತೆರಳುತ್ತಾರೆ.ರೈಲುಗಳು ಬಂದ್ ಆಗಿರುವುದರಿಂದ ಬಸ್ ಮೂಲಕ ಪ್ರಯಾಣಿಸುತ್ತಿದ್ದಾರೆ.ಆದರೆ ಬಸ್ ಟಿಕೆಟ್ ದರ ದುಬಾರಿಯಾಗಿದೆ.ಇದರಿಂದ ದಿನ ನಿತ್ಯ ಓಡಾಡುವ ಜನರಿಗೆ ತೊಂದರೆಯಾಗುತ್ತಿದೆ.
ಕಲಬುರಗಿಯಿಂದ ಹೈದರಾಬಾದಗೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲಿನಲ್ಲಿ ದಿನಾಲು ಸಾವಿರಾರು ಜನರು ವ್ಯಾಪಾರ ವಹಿವಾಟಿಗಾಗಿ ಓಡಾಡುತ್ತಿದ್ದರು.ಅಲ್ಲದೆ ಆಸ್ಪತ್ರೆಗೆ ಕಲಬುರಗಿಯಿಂದ ನೂರಾರು ರೋಗಿಗಳು ಸೋಲಾಪುರಕ್ಕೂ ಹೋಗುತ್ತಿದ್ದರು.ಆದರೆ ಕೊರೊನಾದಿಂದ ಈ ರೈಲುಗಳು ಸ್ಥಗಿತಗೊಂಡಿವೆ.ಹಿಗಾಗಿ ಜನರು ದುಬಾರಿ ಬೆಲೆ ತೆತ್ತು ಬಸ್ ನಲ್ಲಿ ಪ್ರಯಾಣಿಸುವುದು ಅನಿವಾರ್ಯವಾಗಿದೆ.
ಇನ್ನು ಸಮೀಪದ ಸೋಲಾಪುರ, ರಾಯಚೂರು,ವಾಡಿ,ಸೇಡಂಗಳಿಗೆ ಪ್ರಯಾಣ ಮಾಡಬೇಕಾದರೂ ಆನ್ ಲೈನ್ ಮುಂಗಡ ಬುಕ್ಕಿಂಗ್ ಮಾಡಿಸಬೇಕು.ಇದು ಬಡ ಜನರಿಗೆ ಸಂಕಷ್ಟ ಎದುರಾಗಿದೆ. ಮೊದಲಿನಂತೆ ರೈಲು ನಿಲ್ದಾಣದ ಟಿಕೆಟ್ ಕೌಂಟರ್ ನಲ್ಲಿ ಟಿಕೆಟ್ ನೀಡಬೇಕು.ಈಗಾಗಲೇ ಕೊರೊನಾ ಸಂಪೂರ್ಣ ಕಡಿಮೆಯಾಗಿದೆ. ಕೂಡಲೇ ಸ್ಥಗಿತ ಗೊಂಡಿರುವ ಪ್ಯಾಸೆಂಜರ್ ರೈಲುಗಳನ್ನು ಚಲಿಸುವಂತೆ ಮಾಡಿ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.