ಸಾಮಾಜಿಕ ಸಾಮರಸ್ಯಕ್ಕೆ ಧರ್ಮಕಿಂತ ದೇಶ ದೊಡ್ಡದೆಂಬ ಭಾವನೆ ಎಲ್ಲರಲ್ಲಿ ಬರಬೇಕು: ದಸ್ತಿ

0
15

ಕಲಬುರಗಿ: ಪ್ರಸ್ತುತ ನಮ್ಮ ದೇಶದಲ್ಲಿ ಸಾಮಾಜಿಕ ಸಮಾರಸ್ಯ ಅತಿ ಅವಶ್ಯವಾಗಿದೆ.ಡಾ.ಬಾಬಾಸಾಹೇಬ ಅಂಬೇಡ್ಕರ ಮತ್ತು ಡಾ.ರಾಮ ಮನೋಹರ ಲೋಹಿಯಾ ಹೇಳಿರುವಂತೆ ದೇಶದ ಪ್ರತಿಯೊಬ್ಬ ನಾಗರಿಕರು ತಮ್ಮ ತಮ್ಮ ಧರ್ಮಕಿಂತ ದೇಶ ದೊಡ್ಡದೆಂಬ ಭಾವನೆ ಬೆಳಸಿಕೊಳ್ಳುವದು ಅತಿ ಅವಶ್ಯ ಮತ್ತು ಅನಿವಾರ್ಯವಾಗಿದೆ ಎಂದು ಕಲ್ಯಾಣ ಕರ್ನಾಟಕ ಜನಪರ ಸಂಫರ್ಷ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರು ತಿಳಿಸಿದ್ದಾರೆ.

ಮೊದಲು ನಮ್ಮೆಲ್ಲರಿಗೆ ನಮ್ಮ ದೇಶದ ಸಂವಿಧಾನ ದೊಡ್ಡದು ಅದೆ ಪವಿತ್ರ  ಗ್ರಂಥ ನಂತರ ನಾವು ನಂಬುವ ಆಯಾ ಮತ ಧರ್ಮಗಳ ನಂಬಿಕೆಗಳು, ಗ್ರಂಥಗಳು ಎಂಬುವದು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು.ಕಲ್ಯಾಣ ನಾಡಿನ ಬಸವಾದಿ ಶರಣರು ಮತ್ತು ದಾಸರು ಸೂಫಿ ಸಂತರು ಬೋದಿಸಿರುವ ಮಾನವೀಯ ಮೌಲ್ಯಗಳ ಸಂದೇಶ ಜಗತ್ತಿನ ಮಾನವ ಜಾತಿಗೆ ಸಾಮಾಜಿಕ ಸಮಾರಸ್ಯದಿಂದ ಬದುಕಲು  ಇಂದಿಗೂ ಪ್ರಸ್ತುತವಾಗಿದೆ.

Contact Your\'s Advertisement; 9902492681

ನಮ್ಮ ಧರ್ಮ ಮತ್ತು ನಮ್ಮ ಧರ್ಮ ಗ್ರಂಥವೇ ಶ್ರೇಷ್ಠ ಎಂಬ ಅಜ್ಞಾನವನ್ನು ಬಿಟ್ಟು ನಮ್ಮ ಭಾರತ ದೇಶ ಮಹಾನ, ನಮ್ಮ ಸಂವಿಧಾನವೇ ಶ್ರೇಷ್ಠ ಎಂಬ ಮಾರ್ಗದಲ್ಲಿ ನಡೆಯುವುದು ಪ್ರತಿಯೊಬ್ಬ ಭಾರತೀಯನು  ಕರ್ತವ್ಯದಂತೆ ನಡೆಯುವದು ಪ್ರಸ್ತುತ ಅತಿ ಅವಶ್ಯವಾಗಿದೆ ಎಂದು ಕಲ್ಯಾಣ ಕರ್ನಾಟಕ ಜನಪರ ಸಂಫರ್ಷ ಸಮಿತಿಯ ಪ್ರಕಟಣೆಯ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here