ಶಹಾಬಾದ:ದೇಶದ ಆಹಾರ ಕೊರತೆ ನೀಗಿಸುವಲ್ಲಿ ರೈತರಿಗೆ ಹಸಿರು ಕ್ರಾಂತಿ ಮಂತ್ರ ಹೇಳಿಕೊಡುವ ಮೂಲಕ ದಲಿತ ಕುಟುಂಬದಲ್ಲಿ ಜನಿಸಿದ ಡಾ.ಬಾಬು ಜಗಜೀವನ ರಾಮ ದೇಶದ ಬಹು ದೊಡ್ಡ ಶಕ್ತಿಯಾಗಿದ್ದರು ಎಂದು ಬಿಜೆಪಿ ಹಿರಿಯ ಮುಖಂಡ ಅರುಣ ಪಟ್ಟಣಕರ್ ಹೇಳಿದರು.
ಅವರು ಮಂಗಳವಾರ ನಗರದ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಡಾ.ಬಾಬು ಜಗಜೀವನರಾಮ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ಹಾಗೂ ಬಡವರ ಪರವಾಗಿ ಕೆಲಸ ಮಾಡಿದ ಬಾಬು ಜಗಜೀವನ್‌ರಾಮ ಅವರು ದೇಶದ ಉಪಪ್ರಧಾನಿಗಳಾಗಿದ್ದ ಸಂದರ್ಭದಲ್ಲಿ ಜಾರಿಗೆ ತಂದ ಹಲವಾರು ಕಾರ್ಯಕ್ರಮಗಳು ಇಂದಿಗೂ ಜನಪರವಾಗಿವೆ. ಇಂತಹ ನಾಯಕರ ಜನ್ಮದಿನಾಚರಣೆ ನಡೆಸುವುದು ಸಾರ್ಥಕ ಎಂದು ಹೇಳಿದರು.
ಕನಕಪ್ಪ ದಂಡಗುಲಕರ, ಮಹಾದೇವ ಗೋಬ್ಬೂರಕರ, ಸದಾನಂದ ಕುಂಬಾರ, ಸಿದ್ರಾಮ ಕುಸಾಳೆ, ನಿಂಗಣ್ಣ ಹುಳಗೋಳಕರ, ಸಂಜಯ ಕೋರೆ, ಸಂಜಯ ವಿಟಕರ, ಅಮರ ಕೋರೆ, ರಾಜು ಕುಂಬಾರ, ಜಗದೇವ ಸುಬೆದಾರ, ರವಿ ರಾಠೋಡ, ಭೀಮಯ್ಯ ಗುತೆದಾರ, ದೇವಂದ್ರಪ್ಪ ಯಲಗೋಡಕರ, ನಾರಾಯಣ ಕಂದಕೂರ, ಸಂತೋ? ಹುಲಿ, ಯಲ್ಲಪ್ಪ ಜಾಲಹಳ್ಳಿ, ಶರಣು ಜಾಲಹಳ್ಳಿ, ದತ್ತು ಘಂಟೆ, ಯಲ್ಲಪ್ಪ ದಂಡಗುಲಕರ, ಮಂಜುನಾಥ ದೊಡ್ಡಮನಿ, ಶ್ರೀ ನಿವಾಸ ನೇದಲಗಿ, ಶ್ರೀನಿವಾಸ ದೇವಕರ, ಲತಾ ಸಂಜೀವ, ಸುರೇಶ ಹಳ್ಳಿ, ಅನೀಲದತ್ತ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.