ಉರುಸ್ ಮೆರವಣಿಗೆ ವೀಕ್ಷಿಸುತ್ತಿದ್ದಾಗ ಸುಲಿಗೆಃ ಹೈದ್ರಾಬಾದ್ ಮೂಲದ ವ್ಯಕ್ತಿ ಸೆರೆ

0
97

ಕಲಬುರಗಿ: ನಗರದ ಐತಿಹಾಸಿಕ, ಪ್ರಸಿದ್ಧ ಖಾಜಾ ಬಂದೇ ನವಾಜ್ ದರ್ಗಾ ಉರುಸ್ ಸಂದಾಲ್ ಸಂದರ್ಭದಲ್ಲಿ ವ್ಯಕ್ತಿಯೊಬ್ಬರಿಗೆ ಹೆದರಿಸಿ ಸುಲಿಗೆ ಮಾಡಿ ಪರಾರಿಯಾಗಿದ್ದ ಹೈದ್ರಾಬಾದ್ ಮೂಲದ ವ್ಯಕ್ತಿಯನ್ನು ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತನಿಗೆ ಹೈದ್ರಾಬಾದ್‌ನ ಮೊಹ್ಮದ್ ರಜಾ ಅಲಿ ತಂದೆ ಮೊಹ್ಮದ್ ಹಬೀಬ್ (೪೩) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಯಿಂದ ೩೪೩೦ರೂ.ಗಳನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ.

Contact Your\'s Advertisement; 9902492681

ಕಳೆದ ೧೯ರಂದು ಸಂಜೆ ೬-೩೦ಕ್ಕೆ ಖಾಜಾ ಬಂದೇ ನವಾಜ್ ದರ್ಗಾ ಉರುಸ್ ನಿಮಿತ್ಯ ನಗರದ ಸಾರ್ವಜನಿಕ ಉದ್ಯಾನವನದ ಡೈನೋಸಾರ್ ಗಾರ್ಡನ್ ಬಳಿ ಸಂದಾಲ್ ಮೆರವಣಿಗೆಯನ್ನು ವೀಕ್ಷಿಸಲು ಹೋಗಿದ್ದ ಹೈದ್ರಾಬಾದ್ ಮೂಲದ ಮೊಹ್ಮದ್ ಹುಸೇನ್ ತಂದೆ ಅಹ್ಮದ್ ಸಿರಾಜ್ (೩೧) ಎಂಬಾತನಿಗೆ ಹೆದರಿಸಿ ಆತನ ಬಳಿ ಇದ್ದ ೩೪೩೦ರೂ.ಗಳನ್ನು ಸುಲಿಗೆ ಮಾಡಿಕೊಂಡು ಹೋದ ಕುರಿತು ಬ್ರಹ್ಮಪೂರ್ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದ. ಮೊಹ್ಮದ್ ಹುಸೇನ್ ತನ್ನ ಅಣ್ಣ ಮೊಹ್ಮದ್ ನವೀದ್ ಜತೆ ಹೈದ್ರಾಬಾದ್‌ನಿಂದ ಉರುಸ್‌ಗಾಗಿ ನಗರಕ್ಕೆ ಬಂದಾಗ ಈ ಘಟನೆ ಸಂಭವಿಸಿದೆ.

ಪ್ರಕರಣ ದಾಖಲಿಸಿಕೊಂಡ ಬ್ರಹ್ಮಪೂರ್ ಪೋಲಿಸ್ ಠಾಣೆಯ ಪಿಐ ಶ್ರೀಮಂತ್ ಇಲ್ಲಾಳ್, ಎಎಸ್‌ಐ ಸಲಿಮೋದ್ದೀನ್, ಸಿಬ್ಬಂದಿಗಳಾದ ಪಂಡಿತ್, ವೆಂಕಟ್ ಅವರು ಕಾರ್ಯಾಚರಣೆಯನ್ನು ಕೈಗೊಂಡು ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here