ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ವಿವಿಧ ಸ್ಥಳಗಳಲ್ಲಿನ ಗ್ರಾಹಕರಿಗೆ ಉತ್ತಮ ಬ್ಯಾಂಕಿಂಗ್ ಸೇವೆಯನ್ನು ಒದಗಿಸುವ ಉದ್ದೇಶದಿಂದ ಆರಂಭವಾಗಿರುವ ಸ್ವರ್ಣಭಾರತಿ ಸಹಕಾರ ಬ್ಯಾಂಕ್, ದೇಶದಲ್ಲಿ ಸಾಂಕ್ರಾಮಿಕ ಮತ್ತು ವಿವಿಧ ಕಾರಣಗಳಿಂದಾಗಿ ಎದುರಾಗಿದ್ದ ಸಾಮಾಜಿಕ-ಆರ್ಥಿಕ ಸಂಕಷ್ಟದ ನಡುವೆಯೂ 2021-2022 ನೇ ಸಾಲಿನಲ್ಲಿ 1 ಕೋಟಿ 56 ಲಕ್ಷ ರೂಪಾಯಿಗಳ ನಿವ್ವಳ ಲಾಭಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷರಾದ ಡಾ. ಪಿ ಎಲ್ ವೆಂಕಟರಾಮರೆಡ್ಡಿ ತಿಳಿಸಿದ್ದಾರೆ.
ಸ್ವರ್ಣಭಾರತಿ ಸಹಕಾರಿ ಬ್ಯಾಂಕಿನ 24 ನೇ ವಾರ್ಷಿಕ ಮಹಾಸಭೆ ಯಲ್ಲಿ ಈ ಬಗ್ಗೆ ಬ್ಯಾಂಕಿನ ಅಧ್ಯಕ್ಷರಾದ ಡಾ. ಪಿ.ಎಲ್ ವೆಂಕಟರಾಮರೆಡ್ಡಿಯವರು ಮಾತನಾಡಿ, ಈ ಸಾಲಿನಲ್ಲಿ ಅತ್ಯುತ್ತಮ ಪ್ರಗತಿಯನ್ನು ಬ್ಯಾಂಕ್ ಸಾಧಿಸಿದೆ. ಕಳೆದ ಸಾಲಿನಲ್ಲಿ 103.63 ಲಕ್ಷ ರೂಪಾಯಿಗಳ ನಿವ್ವಳ ಲಾಭ ಗಳಿಸಿದ್ದ ಬ್ಯಾಂಕ್ 2021-2022 ನೇ ಸಾಲಿನಲ್ಲಿ 156.77 ಲಕ್ಷ ರೂಪಾಯಿಗಳ ಲಾಭ ಗಳಿಸುವ ಮೂಲಕ ವರ್ಷದಿಂದ ವರ್ಷಕ್ಕೆ ಪ್ರಗತಿಯತ್ತ ದಾಪುಗಾಲು ಇಡುತ್ತಿದೆ ಎಂದು ತಿಳಿಸಿದರು.
ಪ್ರಸ್ತುತ 10 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದುವ ಮೂಲಕ ಬೆಂಗಳೂರು ನಗರದಲ್ಲಿ ಗ್ರಾಹಕರ ಸ್ನೇಹಿಯಾದ ಸಹಕಾರಿ ಬ್ಯಾಂಕುಗಳಲ್ಲಿ ಒಂದು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ರೂ. 172.87 ಕೋಟಿಗೂ ಹೆಚ್ಚು ದುಡಿಯುವ ಬಂಡವಾಳ ಹೊಂದಿದೆ. ನೆಟ್ ಎನ್ಪಿಎ ಶೇಡಕಾ 1.59 ಕ್ಕೆ ಇಳಿಕೆಯಾಗಿದ್ದು, 1.56 ಕೋಟಿಗಳಷ್ಟು ಲಾಭವನ್ನು ಗಳಿಸಿದೆ. ಲೋಕ್ಕಪರಿಶೋಧನಾ ವರ್ಗೀಕರಣದಲ್ಲಿ ಬ್ಯಾಂಕು “ಏ” ಶ್ರೇಣಿಯನ್ನು ಪಡೆದು ಸಾರ್ವಜನಿಕರ ವಿಶ್ವಾಸಗಳಿಸಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಸಭೆಯಲ್ಲಿ ಸ್ವರ್ಣಭಾರತಿ ಸಹಕಾರ ಬ್ಯಾಂಕಿನ ಉಪಾಧ್ಯಕ್ಷ ತಿಬ್ಬೇಗೌಡ, ಮಾಜಿ ಅಧ್ಯಕ್ಷರಾದ ಟಿ ಎನ್ ಚೌಡಪ್ಪನವರು, ನಿರ್ದೇಶಕರುಗಳಾದ ಕೆ. ನರಸಿಂಹ ಮೂರ್ತಿ, ಟಿ ಸತೀಶ್ ಬಾಬು, ಆರ್ ಹರೀಶ್, ಶ್ರೀಮತಿ ಡಾ.ಲತಾ ನಾರಾಯಣ್, ಕೆ ನಾರಾಯಣಸ್ವಾಮಿ, ಬಿ ನಾಗರಾಜ, ಜಿ.ಎಂ ರವೀಂದ್ರ, ಡಿ.ಬಿ ಶರತ್ ಕುಮಾರ್, ಸಿ ವೆಂಕಟೇಶ್, ಎನ್. ನಾಗರಾಜ್, ಜೆ.ಕೆ ರಾಮಕೃಷ್ಣ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ ಮತ್ತು ಗ್ರಾಹಕರು ಉಪಸ್ಥಿತರಿದ್ದರು.