ಲೇಖಕಿ ಸಹನಾ ಕಾಂತಬೈಲು ಅವರು ಕೊಡಗು ಮತ್ತು ದಕ್ಷಿಣ ಕನ್ನಡದ ಗಡಿಭಾಗವಾದ ಸಂಪಾಜೆಯ ದಬ್ಬಡ್ಕ ಎನ್ನುವ ಕುಗ್ರಾಮದವರು.ಕೇವಲ ಪಿ.ಯು.ಸಿ ವರೆಗೆ ಓದಿದ ಸಹನಾ ಕಾಂತಬೈಲು ಅವರು ತಮ್ಮ 17 ನೇ ವಯಸ್ಸಿಗೇ ಮದುವೆಯಾದವರು.
20 ನೇ ಹರೆಯದಲ್ಲೇ ಮಂಗಳ, ಸುಧಾ, ತುಷಾರ, ಮಯೂರ, ಕರ್ಮವೀರ ಪತ್ರಿಕೆಗಳಲ್ಲಿ ಅವರ ಹಲವಾರು ಹನಿಗವಿತೆಗಳು ಪ್ರಕಟವಾಗಿವೆ.
ಚುಟುಕುಗಳ ರಚನೆಗಾಗಿ ಕೇರಳದಲ್ಲಿ ನಡೆದ ಅಂತರಾಜ್ಯ ಮಟ್ಟದ ಪ್ರತಿಷ್ಟಿತ ಚುಟುಕುಶ್ರೀ ಪ್ರಶಸ್ತಿ ದೊರಕಿತು. ಅಲ್ಲದೇ ಮಡಿಕೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ ಹಿಂದೆಯೇ ಶಿವಮೊಗ್ಗೆಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದವರು.
ಕೃಷಿಯನ್ನೇ ನೆಚ್ಚಿಕೊಂಡ ಮನೆ ಅವರದ್ದಾಗಿದ್ದರಿಂದ ಸಹಜವಾಗಿಯೇ ಅದರ ಬಗ್ಗೆ ಒಲವಿತ್ತು. ಮುಂದೆ ಕೃಷಿ ಕುರಿತ ಬರಹಗಳನ್ನು ಬರೆಯಲು ಆರಂಭಿಸಿದ ಅವರು ಸುಮಾರು 60ಕ್ಕೂ ಹೆಚ್ಚು ಕೃಷಿಕ ಮಹಿಳೆಯರ ಯಶೋಗಾಥೆಯನ್ನು ಪ್ರಜಾವಾಣಿಯಲ್ಲಿ ಬರೆದವರು. ಇನ್ನೂ ಬರೆಯತ್ತಲೇ ಇರುವ ಇವರು ನಾಡು ಕಂಡತಹ ಕೆಲವೇ ಕೆಲವು ಕೃಷಿ ಬರಹಗಾರ್ತಿಯಲ್ಲಿ ಒಬ್ಬರು.
ಪುಟ್ಟ ಹಳ್ಳಿಯಲ್ಲಿರುವ ಸಹನಾ ಕಾಂತಬೈಲು ಅವರು,
ಕರ್ನಾಟಕ ರಾಜ್ಯದಾದ್ಯಂತ ಹಲವಾರು ನೈಜ ಸಾಹಿತ್ಯ ಅಭಿಮಾನಿ ಬಳಗ ಹೊಂದಿದ್ದವರು. ಕವಿತೆಯ ಮೂಲಕ ಬರಹವನ್ನಾರಂಭಿಸಿದ ಸಹನಾ ಕಾಂತಬೈಲು ಅವರು ತಮ್ಮ, ಸ್ವಾನುಭವ, ಪ್ರಾಮಾಣಿಕ, ದಿಟ್ಟ ಬರೆಹಗಳ ಮೂಲಕ ನಾಡಿನಾದ್ಯಂತ ಚಿರಪರಿಚಿತರಾದವರು. ಇದೀಗ ಅವರ ‘ಆನೆ ಸಾಕಲು ಹೊರಟವಳು’ ಕೃತಿಗೆ ‘ಅಜೂರ ಪ್ರತಿಷ್ಠಾನ’ದ ರಾಜ್ಯ ಪ್ರಶಸ್ತಿ ದೊರಕಿದೆ. ಇವರ ಮತ್ತೊಂದು ಕೃತಿ ‘ಇದು ಬರೀ ಮಣ್ಣಲ್ಲ’ ಎಂಬ ಲಲಿತ ಪ್ರಬಂಧಗಳ ಸಂಕಲನ, ಅಹರ್ನಿಶಿ ಪ್ರಕಾಶನದಿಂದ ಪ್ರಕಟವಾಗುತ್ತಿದೆ.
ಇಂತಹ ಸಹನಾ ಕಾಂತಬೈಲು ಅವರ ಸಾಹಿತ್ಯ ಕೃಷಿಯು ನಡೆದೇ ಇದೆ. ಇವರ ಸಾಹಿತ್ಯ ಕೃಷಿ ಇನ್ನೂ ಹೆಚ್ಚಾಗಿ ಮುಂದುವರಿಯಲಿ..!
ಮುಂದೆ ಇವರ ಇತ್ತೀಚಿನ ‘ಆನೆ ಸಾಕಲು ಹೊರಟವಳು’ ಪುಸ್ತಕದ ಬಗೆಗೆ ಬರೆಯುತ್ತೇನೆ…
# ಕೆ.ಶಿವು.ಲಕ್ಕಣ್ಣವರ