ಸೇವ್ ಮಾಯ ಹಾರ್ಟ್ ಹೆಲ್ತ್ ಕಾರ್ಡ್ ಮಿಷನ್ ಗೆ ಚಾಲನೆ

0
30

ಬೆಂಗಳೂರು: ಮಾಧವಬಾಗ ಆಯುವೇದಿಕ್ ಕಾರ್ಡಿಯಾಕ್ ಕೇರ್ ಕ್ಲಿನಿಕ್ SAVE MY HEART ಎಂಬ ಅಭಿಯಾನವನ್ನು ಕರ್ನಾಟಕದಲ್ಲಿ ಆರಂಭ ಮಾಡಿದೆ. ಜನಸಾಮಾನ್ಯರಲ್ಲಿ ಹೃದಯ ಸಂಬಂಧಿ ಸಮಸ್ಯೆಗಳ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ.

ಸೇವ್ ಮೈ ಹಾರ್ಟ್ ಎನ್ನುವುದು ರೋಗವನ್ನು ತಡೆಗಟ್ಟುವ ಮತ್ತು ಗುಣಪಡಿಸುವ ಹೃದಯ ಆರೋಗ್ಯ ಕಾರ್ಯಕ್ರಮವಾಗಿದೆ. ಇದರಡಿಯಲ್ಲಿ ಆರಂಭಿಕ ಹಂತದಲ್ಲಿಯೇ ರೋಗವನ್ನು ಪತ್ತೆ ಮಾಡುವುದು ಮತ್ತು ಹೃದಯ ರೋಗಗಳಿಗೆ ಕಾರಣವಾಗುವ ಅಪಾಯಕಾರಿ ಅಂಶಗಳ ವಿರುದ್ಧ ಸೂಕ್ತ ಚಿಕಿತ್ಸೆ ಹಾಗೂ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ರಾಜ್ಯಾದ್ಯಂತ ವ್ಯಾಪಕವಾದ ಜಾಗೃತಿ ಅಭಿಯಾನವನ್ನು ನಡೆಸಲಾಗುತ್ತದೆ.

Contact Your\'s Advertisement; 9902492681

ಬಸವೇಶ್ವರನಗರದಲ್ಲಿ ಮಾಧವಬಾಗ್ ಕ್ಲಿನಿಕನ ಅದ್ಧೂರಿ ಉದ್ಘಾಟನಾ ಕಾರ್ಯಕ್ರಮದ ಸಂದರ್ಭದಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ RSS ಮುಖಂಡರಾದ ಶ್ರೀ ಅರವಿಂದರಾವ್ ದೇಶಪಾಂಡೆಯವರು, “ಜಡತ್ವದ ಜೀವನಶೈಲಿ, ಅನಾರೋಗ್ಯಕರವಾದ ಆಹಾರ ಪದ್ಧತಿ ಮತ್ತು ಕೆಲಸ ಸಂಬಂಧಿತ ಒತ್ತಡದಿಂದ ಚಿಕ್ಕ ವಯಸ್ಸಿನಲ್ಲೇ ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತಿರುವುದನ್ನು ನಾವು ನೋಡಿದ್ದೇವೆ.

ಮಾಧವಬಾಗ ಸೇವ್ ಮೈ ಹಾರ್ಟ್ ಅಭಿಯಾನದಂತಹ ಉಪಕ್ರಮಗಳು ಖಂಡಿತವಾಗಿಯೂ ಹೃದಯ ಸಂಬಂಧಿತ ರೋಗಗಳನ್ನು ತಡೆಗಟ್ಟುವ ಮತ್ತು ಗುಣಪಡಿಸುವ ಅಂಶಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಈ ಸವಾಲನ್ನು ಎದುರಿಸಲು ಸಹಾಯ ಮಾಡುತ್ತದೆ’ಎಂದರು.

ಅರವಿಂದರಾವ್ ದೇಶಪಾಂಡೆ, ತೇಜಸ್ವಿನಿ ಅನಂತುಮಾರ್, ಚಿತ್ರನಟ ಪ್ರೇಮ್ ಅವರು ಈ ಸಂದರ್ಭದಲ್ಲಿ `ಲೀವಿಂಗ್ ವಿಥೌಟ್ ಡಯಾಬಿಟಿಸ್’’ ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದರು. ಇದೇ ವೇಳೆ ಮಾತನಾಡಿದ ಖ್ಯಾತ ಚಿತ್ರ ನಟ ಶ್ರೀ ಪ್ರೇಮ್ ಕುಮಾರ್ ಅವರು, `ಮಾಧವಬಾಗ್ ನ `ಸೇವ್ ಮೈ ಹಾರ್ಟ್’ ಅಭಿಯಾನದ ಉಪಕ್ರಮವು ಗ್ರಾಮೀಣ ಮತ್ತು ನಗರಪ್ರದೇಶಗಳನ್ನ ಒಳಗೊಂಡಿದೆ. ನಮ್ಮ ರಾಜ್ಯದ ಜನರ ಆರೋಗ್ಯ ಸುಧಾರಣಾ ಕ್ರಮಗಳನ್ನು ತೆಗೆದುಕೊಂಡಿರುವುದಕ್ಕಾಗಿ ನಾನು ಮಾಧವಬಾಗ್ ಸಂಸ್ಥೆಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ತಿಳಿಸಿದರು.

ಕಳೆದ ಎರಡು ವರ್ಷಗಳಲ್ಲಿ ಸಂಸ್ಥೆಯು ಕರ್ನಾಟಕದ ವಿವಿಧ ನಗರಗಳಲ್ಲಿ 250 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಿ 15,000 ಕ್ಕೂ ಹೆಚ್ಚು ಜನರನ್ನು ತಲುಪಿದೆ. ಈ ಪ್ರಗತಿಯ ಬಗ್ಗೆ ಮಾತನಾಡಿದ ಮಾಧವಬಾಗನ ಮುಖ್ಯಸ್ಥ (ಕರ್ನಾಟಕ) ಡಾ.ಪ್ರಸಾದ್ ದೇಶಪಾಂಡೆ ಅವರು, “ಮುಂದಿನ 12 ತಿಂಗಳಲ್ಲಿ ನಾವು ಇಂತಹ ಕಾರ್ಯಕ್ರಮಗಳ ಸಂಖ್ಯೆಯನ್ನು 500 ಕ್ಕೆ ಹೆಚ್ಚಿಸುವ ವಿಶ್ವಾಸ ಹೊಂದಿದ್ದೇವೆ. ಈ ಕಾರ್ಯಕ್ರಮಗಳಲ್ಲಿ ರೋಗಗಳ ಬಗ್ಗೆ ಜಾಗೃತಿ ಉಪನ್ಯಾಸಗಳು, ವೆಬಿನಾರ್, ಕಾರ್ಯಾಗಾರಗಳು ಮತ್ತು ರೋಗಮುಕ್ತ ಜೀವನದ ಬಗ್ಗೆ ಸಮಾಲೋಚನೆ ಮತ್ತು ಚಿಕಿತ್ಸೆಯನ್ನು ನೀಡುತ್ತಾರೆ’ಎಂದು ತಿಳಿಸಿದರು.

ಅವರು ಮಾತನಾಡಿ, `ಹೃದಯ ರೋಗ ಸಂಬಂಧಿಸಿದ ಸಾವುಗಳನ್ನು ಕಡಿಮೆ ಮಾಡಲು ಉತ್ತಮ ಚಿಕಿತ್ಸಾ ಪದ್ಧತಿಯ ಅವಶ್ಯಕತೆಯಿದೆ. ನಮ್ಮ ಸಂಸ್ಥೆಯು ಆರೋಗ್ಯ ಸಚಿವಾಲಯ, ಭಾರತ ಸರ್ಕಾರ ಮತ್ತು ಕರ್ನಾಟಕ ರಾಜ್ಯದ ಮಾರ್ಗಸೂಚಿಗಳನ್ನು ಆಧರಿಸಿ `ಸೇವ್ ಮೈ ಹಾರ್ಟ್’ ಎಂಬ ರೋಗಗಳನ್ನು ತಡೆಗಟ್ಟುವ ಹೃದಯ ಆರೋಗ್ಯ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಿದೆ’ಎಂದರು.

ಈ ಕಾರ್ಯಕ್ರಮದಲ್ಲಿ ಖ್ಯಾತ ಚಿತ್ರನಟರಾದ ಪ್ರೇಮ್, ಆರ್ಎಸ್ಎಸ್ನ ಉತ್ತರ ಕರ್ನಾಟಕ ಭಾಗದ ಸಹಸಂಘಚಾಲಕ್ ಅರವಿಂದ ದೇಶಪಾಂಡೆ, ಅದಮ್ಯ ಚೇತನ ಫೌಂಡೇಶನ್ನ ಸಂಸ್ಥಾಪಕಿ ಮತ್ತು ಸಾಮಾಜಿಕ ಕಾರ್ಯಕರ್ತೆ ತೇಜಸ್ವಿನಿ ಅನಂತಕುಮಾರ್, ಡಿ.ಎಸ್.ಮ್ಯಾಕ್ಸ್ ಪ್ರಾಪರ್ಟೀಸ್ನ ನಿರ್ದೇಶಕ ಡಾ.ಎಸ್.ಪಿ.ದಯಾನಂದ ಸೇರಿದಂತೆ ಮತ್ತಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here