ವಿಶ್ವಾರಾದ್ಯರು ಅಷ್ಟಸಿದ್ಧಿಗಳನ್ನು ಕಟ್ಟಿ ಆಳಿದ ದಿಟ್ಟ ಯೋಗಿಯಾಗಿದ್ದರು: ಗಂಗಾಧರ ಶ್ರೀ

0
130

ಶಹಾಬಾದ: ಸುಮಾರು ಎಂಟು ದಶಕಗಳ ಹಿಂದೆ 70 ವರ್ಷ ಬದುಕಿ ಬಾಳಿದ್ದ ವಿಶ್ವಾರಾದ್ಯರು ಅಷ್ಟಸಿದ್ಧಿಗಳನ್ನು ಕಟ್ಟಿ ಆಳಿದ ದಿಟ್ಟ ಯೋಗಿಯಾಗಿದ್ದರು ಎಂದು ಅಬ್ಬೆ ತುಮಕೂರಿನ ವಿಶ್ವಾರಾಧ್ಯ ಮಠದ ಪೀಠಾಧಿಪತಿ ಡಾ.ಗಂಗಾಧರ ಸ್ವಾಮಿಗಳು ಹೇಳಿದರು.

ಅವರು ಹಳೆಶಹಾಬಾದನ ಕಲ್ಲಪ್ಪಗೌಡರ ತೋಟದಲ್ಲಿನ ವಿಶ್ವಾರಾಧ್ಯ ಮಂದಿರದಲ್ಲಿ ನಡೆದ 26ನೇ ಜಾತ್ರಾ ಮಹೋತ್ಸವದ ಧರ್ಮಸಭೆಯಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

Contact Your\'s Advertisement; 9902492681

ಇಲ್ಲಿನ ಕಲ್ಲಪ್ಪಗೌಡರ ತೋಟದಲ್ಲಿ ಅನುಷ್ಠಾನ ಮಾಡಿ ಹೋದ ಪರಿಣಾಮ ಈ ಸ್ಥಳ ವಿಶ್ವಾರಾಧ್ಯರ ಜಾತ್ರೆಗೆ ಕಾರಣವಾಗಿದೆ. ಕೆಲವು ತಿಂಗಳುಗಳ ಕಾಲ ಕಲ್ಲಪ್ಪಗೌಡರು ವಿಶ್ವಾರಾಧ್ಯರ ಸೇವೆ ಮಾಡಿದ್ದರು. ಅವರ ಆಶೀರ್ವಾದದಿಂದಲೇ ಇಂದು ಇದು ಜಾಗೃತಿ ತಾಣವಾಗಿದೆ . ವಿಶ್ವರಾಧ್ಯರು ಮನುಕುಲದ ಉದ್ಧಾರಕರು. ಆತನ ದಿವ್ಯ ಚೈತನ್ಯ ಕೈ ಹಿಡಿದು ನಡೆಸುತ್ತಿದೆ. ಎಲ್ಲ ಭಕ್ತ ಸಮೂಹದ ಸಹಕಾರದಿಂದ ಹಳೆಶಹಾಬಾದನ ಕಲ್ಲಪ್ಪಗೌಡರ ತೋಟದಲ್ಲಿ ನಿರಂತರ ಜಾತ್ರಾ ಕಾರ್ಯಗಳು ನಡೆಯಲು ಕಾರಣವಾಗಿದೆ ಎಂದರು.

ವಿಜಯಕುಮಾರಸ್ವಾಮಿ,ಬಿಜೆಪಿ ಮುಖಂಡ ಗೋರಖನಾಥ, ಪಿಐ ಸಂತೋಷ ಹಳ್ಳೂರ್,ಶಿವುಗೌಡ ಪಾಟೀಲ್,ಗುರುರಾಜ ಪಾಟೀಲ್, ಶ್ರೀಶೈಲಪ್ಪ ಬೆಳಮಗಿ, ಹಂಪಣ್ಣ ಪೋತನಕರ, ಮಲ್ಲಿಕಾರ್ಜುನ ಚಂದನಕೇರಿ, ಗಿರೀಶ ಕಂಬಾನೂರ, ಮಲ್ಲಿಕಾರ್ಜುನ ವಾಲಿ, ಇನಾಯತ ಖಾನ್ ಜಮಾದಾರ, ತಿಪ್ಪಣ ನಾಟೀಕರ, ನಿಂಗಣ್ಣ ಪೂಜಾರಿ, ಶಿವುಕುಮಾರ ನಾಟೀಕರ, ರಮೇಶ ಪವಾರ, ವೇಂಕಟೇಶ ಪವಾರ,ಗುಂಡುಗೌಡ ಪಾಟೀಲ್ ಇಂಗಳಗಿ, ಶಿವರಾಜ ಪಾರಾ, ವಿರೂಪಾಕ್ಷಿ ಹುಗ್ಗಿ, ಶರಣಗೌಡ ಪಾಟೀಲ, ಗಿರಿಮಲ್ಲಪ್ಪ ವಳಸಂಗ,ವಿಶ್ವನಾಥ ಹಡಪದ, ಗಣೇಶ ಜಾಯಿ, ರಮೇಶ ಜೋಗದನಕರ್, ಶಾಂತಪ್ಪ ಹಡಪದ,ಶರಣು ಕೊಡದೂರ, ಚನ್ನಮಲ್ಲಪ್ಪ ಸಿನ್ನೂರ್,ಕುಪೇಂದ್ರ ತುಪ್ಪದ್, ರಮೇಶ ಪಾಟೀಲ,ಸಿದ್ರಾಮ ಬುಗಶೆಟ್ಟಿ ಸೇರಿದಂತೆ ಅನೇಕರು ಇದ್ದರು.

ವಿಜೃಂಭಣೆಯಿಂದ ನಡೆದ ಜಾತ್ರೆ : ಹಳೆಶಹಾಬಾದನ ಕಲ್ಲಪ್ಪಗೌಡ ತೋಟದಲ್ಲಿನ ವಿಶ್ವರಾಧ್ಯರ 26 ನೇ ಜಾತ್ರಾ ಮಹೋತ್ಸವದ ರಥೋತ್ಸವ ಭಕ್ತಸಾಗರದ ಮಧ್ಯೆ ವೈಭವದಿಂದ ಜರುಗಿತು.

ಅಬ್ಬೆತುಮಕೂರಿನ ಪೀಠಾಧಿಪತಿ ಡಾ. ಗಂಗಾಧರ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು. ಮಂದಿರದ ಆವರಣದಲ್ಲಿ ನೆರೆದಿದ್ದ ಅಪಾರ ಸಂಖ್ಯೆಯ ಜನತೆ ರಥವನವನ್ನೆಳೆದು ಸಂಭ್ರಮಿಸಿದರು.ತೇರಿನ ಮೇಲೆ ಬಾಳೆಹಣ್ಣು, ಉತ್ತುತ್ತಿಗಳನ್ನು ಎಸೆದು ಭಕ್ತಿಯನ್ನು ಸಮರ್ಪಿಸಿದರು. ಬೇಡಿದ್ದನ್ನು ನೀಡುವ ಭಗವಂತ ವಿಶ್ವರಾಧ್ಯನಲ್ಲಿ ತಮ್ಮ ಬಯಕೆ ಭಾವನೆಗಳನ್ನು ಈಡೇರಿಸುವಂತೆ ಭಕ್ತಿಯಿಂದ ಶಿರಬಾಗಿ, ಕರ ಜೋಡಿಸಿ ನಮಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here