ಆಳಂದ: ಇತ್ತೀಚಿಗೆ ಆಳಂದ ತಾಲೂಕಿನ ತೆಲ್ಲೂರ ಗ್ರಾಮದಲ್ಲಿ ೨೦೨೧-೨೨ನೆ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಯೋಜನೆಯಡಿಯಲ್ಲಿ ಅನುಮೋದನೆಗೊಂಡ ರೂ. ೧೫ ಲಕ್ಷಗಳ ಸಿ ಸಿ ರಸ್ತೆ, ರೂ. ೧೦ ಲಕ್ಷಗಳ ಸರ್ಕಾರಿ ಪ್ರಾಥಮಿಕ ಶಾಲೆಗೆ ಕಾಂಪೌಂಡ್ ಗೋಡೆ ಹಾಗೂ ಲೋಕೋಪಯೋಗಿ ಇಲಾಖೆಯಡಿ ಅನುಮೋದನೆಗೊಂಡ ರೂ. ೧೦೦ ಲಕ್ಷಗಳ ತೆಲ್ಲೂರ ದಿಂದ ದಣ್ಣೂರ ಗ್ರಾಮದವರೆಗಿನ ಸಿ.ಸಿ ರಸ್ತೆ ಕಾಮಗಾರಿಗಳ ಅಡಿಗಲ್ಲು ಸಮಾರಂಭವನ್ನು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ನೆರವೇರಿಸಿದರು.
ಇದನ್ನೂ ಓದಿ: ಇಂದಿನ ಕಲಬುರಗಿ ಪೇಟೆ ಧಾರಣೆ
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಅವಧಿಯಲ್ಲಿ ತೆಲ್ಲೂರ ಗ್ರಾಮಕ್ಕೆ ವಿಶೇಷ ಕಾಳಜಿ ವಹಿಸಿ ಅನುದಾನ ಮಂಜೂರಿ ಮಾಡಲಾಗಿದೆ ನನ್ನ ಶಾಸಕತ್ವದ ಅವಧಿಯಲ್ಲಿ ಯಾವುದೇ ಗ್ರಾಮಕ್ಕೆ ತಾರತಮ್ಯ ಮಾಡಿಲ್ಲ ಜನಹಿತದ ದೃಷ್ಟಿಯಿಂದ ಲೋಕಕಲ್ಯಾಣದ ಕಾರ್ಯಗಳನ್ನು ಜನತೆಯ ಆದ್ಯತೆಯ ಮೇಲೆ ತೆಗೆದುಕೊಳ್ಳಲಾಗಿದೆ ಮುಂದಿನ ಒಂದು ವರ್ಷದಲ್ಲಿ ಇನ್ನೂ ಅನೇಕ ಯೋಜನೆಗಳನ್ನು ಮತಕ್ಷೇತ್ರಕ್ಕೆ ಬರಲಿವೆ ಎಂದು ಹೇಳಿದರು.
ಇದನ್ನೂ ಓದಿ: ಪ್ರಜಾಪ್ರಭುತ್ವದ ಆಧಾರಸ್ತಂಭ ಸಂವಿಧಾನ ಇಂದು ಅಪಾಯದಲ್ಲಿದೆ: ಸನತ್ ಕುಮಾರ್ ಬೆಳಗಲಿ
ಇದೇ ಸಂದರ್ಭದಲ್ಲಿ ಕೆ.ಎಂ.ಎಫ್ ನಿರ್ದೇಶಕರಾದ ಚಂದ್ರಕಾಂತ ಭೂಸನೂರ, ಬಿಜೆಪಿ ಮುಖಂಡರಾದ ಜಗನ್ನಾಥ ಹೊಸಕುರುಬ್, ಭೀಮಾಶಂಕರ ಪಟ್ಟಣ, ಶಾಂತಪ್ಪ, ಶರಣು ಕುಮಸಿ, ವೈಜನಾಥ್ ಪಾಟೀಲ್, ಪಿಡಬ್ಲ್ಯೂಡಿ ಇಲಾಖೆಯ ಶರಣಯ್ಯ ಹಿರೇಮಠ (ಕಿ. ಅ) ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.