ಸುರಪುರ: ತಾಲೂಕಿನ ಶಾಖಾಪೂರ ಎಸ್ ಎಚ್ ಗ್ರಾಮದ ಪ್ರತಿಭಾನ್ವಿತ ವಿದ್ಯಾರ್ಥಿ ರಂಗಪ್ಪ ಇವರಿಗೆ ಡಾ. ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ವತಿಯಿಂದ ಪಿಎಚ್.ಡಿ ಪದವಿಯನ್ನು ನೀಡಿ ಗೌರವಿಸಿದೆ. ರಂಗಪ್ಪ ಅವರು ಕನ್ನಡ ಸಾಹಿತ್ಯಕ್ಕೆ ಪಿ.ಬಿ. ದೇಸಾಯಿಯವರ ಕೊಡುಗೆ ಎಂಬ ವಿಷಯದ ಕುರಿತು ಸಂಶೋಧನಾ ಮಹಾಪ್ರಬಂಧವನ್ನು ಮಂಡಿಸಿದ್ದರು.
ಇವರಿಗೆ ಡಾ. ಆರ್ ಸಿ ಹಿರೇಮಠ ಕನ್ನಡ ಅಧ್ಯಯನ ಪೀಠದ ಸಹಾಯಕ ಪ್ರಾಧ್ಯಾಪಕರಾದ ಡಾ. ಪಂಡಿತ್ ಕೆ ರಾಠೋಡ್ ಮಾರ್ಗದರ್ಶಕರಾಗಿದ್ದರು.
ರಂಗಪ್ಪಗೆ ಪಿಎಚ್.ಡಿ ಪದವಿ ಲಭಿಸಿದ್ದಕ್ಕೆ ಕುಟುಂಬಸ್ಥರು ಹಾಗು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ನೀಡಿದ ಎಲ್ಲಾ ಶಿಕ್ಷಕರು ಹಾಗು ಸ್ನೇಹಿತರು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ರಾಜ್ಯದ ಎಲ್ಲಾ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳ ತನಿಖೆ ಮಾಡಿ: ವೆಂಕೋಬದೊರೆ