ಡಾ.ಬಿ.ಆರ್.ಅಂಬೇಡ್ಕರ್ ದಮನಿತ ವರ್ಗಗಳ: ಶೋಷಿತರ ಆದರ್ಶ ಚೇತನ

0
60

ಶಹಾಬಾದ: ಡಾ.ಬಿ.ಆರ್.ಅಂಬೇಡ್ಕರ್ ಕೇವಲ ಒಂದು ಜನಾಂಗಕ್ಕೆ ಸಿಮೀತ ನಾಯಕರಲ್ಲ.ಅವರೊಬ್ಬ ದಮನಿತ ವರ್ಗಗಳ , ಶೋಷಿತರ ಹಾಗೂ ಸ್ತ್ರೀಕುಲದ ಪಾಲಿಗೆ ಆದರ್ಶ ಚೇತನರಾಗಿದ್ದಾರೆ ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಹೇಳಿದರು.

ಅವರು ಗುರುವಾರ ನಗರದ ಅಂಬೇಡ್ಕರ್ ವೃತ್ತದಲ್ಲಿ ತಾಲೂಕಾಡಳಿತ ಹಾಗೂ ನಗರಸಭೆಯಿಂದ ಆಯೋಜಿಸಲಾದ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಬದುಕು – ಸುದೀರ್ಘವಾಗಿರುವುದಕ್ಕಿಂತ ಶ್ರೇ?ವಾಗಿರಬೇಕು. ಬಾಬಾ ಸಾಹೇಬರ ಈ ಸಂದೇಶವು ವ್ಯಕ್ತಿಯ ಸಾರ್ಥಕ ಜೀವನದ ಮಟ್ಟದ ಬಗ್ಗೆ ತಿಳಿಸುತ್ತದೆ. ಶೋಷಿತನೊಬ್ಬ ಅವಕಾಶ ವಂಚಿತನಾಗಿ ಮುಂದೆ ಶಿಕ್ಷಣದ ಅವಕಾಶಗಳನ್ನು ಸೃಷ್ಟಿಸಿಕೊಂಡು.ವಿಧಿ ಹಣಿಬರಹ ಎಂದು ದೂರದೆ, ಸಮಾಜದ ಸವಾಲುಗಳನ್ನು , ಅಸಮಾನತೆ, ಸಾಮಾಜಿಕ ಸಮಸ್ಯೆ ,ಅವಮಾನ ಅನುಮಾನಗಳಿಗೆ ಶೈಕ್ಷಣಿಕ ಸಾಧನೆಯ ಮೂಲಕ ಉತ್ತರ ನೀಡಿದರು.ಶೋಷಿತರ ಸುಖ- ಶಾಂತಿಯ ಬದುಕಿಗಾಗಿ ಎಲ್ಲವನ್ನು ಕಳೆದುಕೊಂಡ ತ್ಯಾಗ ನಿಸ್ವಾರ್ಥ ಸೇವೆ ಬಹುದೊಡ್ಡದು ಎಂದರು.

ಇದನ್ನೂ ಓದಿ: ಸ್ಲಂ ಜನಾಂದೋಲನದಿಂದ ಸಂವಿಧಾನ ಪೀಠಿಕೆ ಅರಿವು ಅಭಿಯಾನ

ತಹಸೀಲ್ದಾರ ಸುರೇಶ ವರ್ಮಾ ಮಾತನಾಡಿ,ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ಅವಿರತವಾಗಿ ದುಡಿದು ದಣಿದರೂ ; ಶಿಕ್ಷಣ ಸಮಾನತೆಯ ಸಂವಿಧಾನ, ಮತ್ತು ಎಲ್ಲಾರಿಗೂ ಮತದಾನದ ಮಹತ್ವ ಅವಕಾಶಗಳನ್ನು ನೀಡುವಲ್ಲಿ ಶ್ರಮಿಸಿದ ಮಹಾತ್ಮ ಅಂಬೇಡ್ಕರ್. ಬಾಬಾಸಾಹೇಬರ ಜೀವನವೇ ಒಂದು ಆದರ್ಶ ಪಾಠ . ಬಾಬಾ ಸಾಹೇಬರ ಜೀವನ ಮತ್ತು ಆದರ್ಶಗಳು ಸರ್ವಕಾಲಕ್ಕೂ ಸ್ಮರಣೀಯವಾದದ್ದು ಎಂದರು.

ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ ಮಾತನಾಡಿ, ಶೈಕ್ಷಣಿಕ , ಸಾಮಾಜಿಕ ರಾಜಕೀಯ, ಆರ್ಥಿಕ ,ಧಾರ್ಮಿಕ ,ವೈಜ್ಞಾನಿಕ ,ವೈಚಾರಿಕ ಚಿಂತನೆಗಳನ್ನು ಆಳವಾಗಿ ಅಭ್ಯಾಸಿಸ ಹೊರಟರೆ ಬಾಬಾಸಾಹೇಬರ ವಿಶ್ಜ ಜ್ಞಾನ ಮತ್ತು ದೂರದೃಷ್ಟಿಯನ್ನು ಅರಿತುಕೊಂಡರೆ ಮಾತ್ರ ಅಂಬೇಡ್ಕರ್ ಅವರ ಚಿಂತನೆಗಳು ಅರ್ಥವಾಗಲು ಸಾಧ್ಯ. ಜಾತಿ ಮತ್ತು ಮೀಸಲಾತಿ ಎಂಬ ಪೊರೆಯನ್ನು ಕಳಚಿ ಅವರ ಚಿಂತನೆಗಳನ್ನು ಸಾಮಾಜಿಕ ನೆಲೆಯಲ್ಲಿ ಹಾಗೂ ಜ್ಞಾನದೃಷ್ಟಿಯಲ್ಲಿ ನೋಡಿದಾಗ ಡಾ.ಬಿ.ಆರ್. ಅಂಬೇಡ್ಕರ್ ಎಂದರೆ ಯಾರು? ಏನು ? ಯಾಕೆ ಅವರನ್ನು ಸ್ಮರಿಸಬೇಕೆಂಬ? ಪ್ರಶ್ನೆಗೆ ಉತ್ತರ ಸಿಗುತ್ತದೆ ಎಂದರು.

ತಾಪಂ ಇಓ ಬಸಲಿಂಗಪ್ಪ ಡಿಗ್ಗಿ, ನಗರಸಭೆಯ ಅಧ್ಯಕ್ಷೆ ಅಂಜಲಿ ಕಂಬಾನೂರ,ಮಾಜಿ ಅಧ್ಯಕ್ಷ ಗಿರೀಶ ಕಂಬಾಣೂರ, ಉಪಾಧ್ಯಕ್ಷೆ ಸಲೀಮಾ ಬೇಗಂ, ಡಾ.ರಶೀದ್ ಮರ್ಚಂಟ, ರಾಜೇಶ ಯನಗುಂಟಿಕರ್,ಮಲ್ಲೇಶಿ ಸಜ್ಜನ್, ಶರಣು ಪಗಲಾಪೂರ,ಶಿವರಾಜ ಕೋರೆ, ಕೃಷ್ಣಪ್ಪ ಕರಣಿಕ್,ಲೋಹಿತ್ ಕಟ್ಟಿ ಇತರರು ಇದ್ದರು.

ಇದನ್ನೂ ಓದಿ: ಡಾ.ರವಿ ಚವ್ಹಾಣ ಅವರ ನೇತೃತ್ವದಲ್ಲಿ ಬೈಕ್ ರ‍್ಯಾಲಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here