ಸುರಪುರ: ರಾಜ್ಯದಲ್ಲಿನ ಗುತ್ತಿಗೆದಾರರು ಇಂದು ಅನೇಕ ರೀತಿಯ ಸಮಸ್ಯೆಗಳನ್ನು ಹೆದುರಿಸುವಂತಾಗಿದೆ.ಅದಕ್ಕೆ ಬೆಳಗಾವಿಯ ಸಂತೋಷ ಪಾಟೀಲ್ ಆತ್ಮಹತ್ಯೆ ನಿದರ್ಶನವಾಗಿದ್ದು ಸರಕಾರ ಗುತ್ತಿಗೆದಾರರ ಸಮಸ್ಯೆಗಳನ್ನು ಸರಕಾರ ಪರಿಹರಿಸಬೇಕು ಎಂದು ತಾಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ರಾಜಾ ಮುಕುಂದ ನಾಯಕ ಮಾತನಾಡಿದರು.
ನಗರದ ರಿಕ್ರಿಯೇಷನ್ ಕ್ಲಬ್ ಆವರಣದಲ್ಲಿ ತಾಲೂಕು ಗುತ್ತಿಗೆದಾರರ ಸಂಘದಿಂದ ಹಮ್ಮಿಕೊಂಡಿದ್ದ ಆತ್ಮಹತ್ಯೆಗೆ ಶರಣಾಗಿದ್ದ ಬೆಳಗಾವಿಯ ಗುತ್ತಿಗೆದಾರ ಸಂತೋಷ ಪಾಟೀಲ್‌ಗೆ ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ರಾಜ್ಯದಲ್ಲಿ ಪರ್ಸೆಂಟೇಜ್ ದಂಧೆಯಿಂದಾಗಿ ಇಂದು ಅನೇಕ ಜನ ಗುತ್ತಿಗೆದಾರರು ಈ ವ್ಯವಸ್ಥೆಗೆ ನಲುಗಿದ್ದಾರೆ.
ಇದನ್ನೂ ಓದಿ: ಗೋಲ್ಡನ್ ಕೇವ್ ಬುದ್ಧ ವಿಹಾರ:ಡಿವೈಎಸ್ಪಿ ಡಾ:ದೇವರಾಜಗೆ ಸನ್ಮಾನ
ಸಂತೋಷ ಪಾಟೀಲ್ ನಾಲ್ಕು ಕೋಟಿ ರೂಪಾಯಿಗಳ ಕಾಮಗಾರಿ ಮಾಡಿ ಪರ್ಸೆಂಟೇಜ್ ನೀಡಲು ಹಣವಿಲ್ಲದ್ದಕ್ಕೆ ಸಾವನ್ನಪ್ಪಿರುವುದು ತುಂಬಾ ನೋವಿನ ಸಂಗತಿಯಾಗಿದೆ.ಇದೇ ರೀತಿ ಮುಂದುವರೆದರೆ ಮುಂದೆ ಗುತ್ತಿಗೆದಾರರು ಬೀದಿಗಿಳಿದು ಹೋರಾಟ ನಡೆಸುವ ಅನಿವಾರ್ಯತೆ ಎದುರಾಗಲಿದೆ ಎಂದರು.ಅಲ್ಲದೆ ಮೃತ ಸಂತೋಷ ಪಾಟೀಲ್ ಕುಟುಂಬಕ್ಕೆ ಸರಕಾರ ನೆರವಾಗಬೇಕು ಮತ್ತು ಅವರ ಎಲ್ಲಾ ಬಿಲ್‌ಗಳನ್ನು ಸರಕಾರ ಬಿಡುಗಡೆ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ಗುತ್ತಿಗೆದಾರ ಅಸ್ಲಾಂ ಮಾಸ್ಟರ್ ಸೇರಿದಂತೆ ಅನೇಕರು ಮಾತನಾಡಿದರು.ಇದಕ್ಕೂ ಮುನ್ನ ಸಂತೋಷ ಪಾಟೀಲ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಎರಡು ನಿಮಿಷಗಳ ಮೌನಾಚರಣೆಯೊಂದಿಗೆ ಆತ್ಮಕ್ಕೆ ಶಾಂತಿ ಕೋರಿದರು.ನಂತರ ಗುತ್ತಿಗೆದಾರರ ಸಮಸ್ಯೆ ನಿವಾರಣೆ ಕುರಿತು ಗ್ರೇಡ-೨ ತಹಸೀಲ್ದಾರ್ ಮಲ್ಲಯ್ಯ ದಂಡು ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಕೆ.ಎಮ್ ಕವಾತಿ,ಪ್ರ.ಕಾರ್ಯದರ್ಶಿ ದೇವರಾಜ ನಾಯಕ,ಕಾರ್ಯದರ್ಶಿ ಕಾಳಪ್ಪ ಬಡಿಗೇರ,ಪ್ರಕಾಶ ಯಾದವ,ಪ್ರಕಾಶ ಸಜ್ಜನ್,ನದೀಮ ಮುಲ್ಲಾ,ಮಾರ್ಥಂಡಪ್ಪ ದೊರೆ,ವೆಂಕಟೇಶ ಬೇಟೆಗಾರ, ವೆಂಕಟೇಶ ಯಾದವ್,ಅಬ್ದುಲಗಫೂರ ನಗನೂರಿ,ಅಜಯ್ ಪಾಟೀಲ್,ಮೈನೊದ್ದಿನ್ ಅಮ್ಮಾಪುರ,ಮಂಜುನಾಥ ಗುಳಗಿ,ಜಗದೀಶ ಪಾಟೀಲ್,ಪರಶುರಾಮ ಗುಡ್ಡಕಾಯಿ,ಅರವಿಂದ ಬಿಲ್ಲವ್,ವೀರಭದ್ರಪ್ಪ ಕುಂಬಾರ,ಖಾದರ್ ಬಾಷಾ ಹಾಗೂ ಮಹ್ಮದ್ ಹುಸೇನ್ ಸೇರಿದಂತೆ ಅನೇಕರಿದ್ದರು.
ಇದನ್ನೂ ಓದಿ: ಹಿಂದೂ ಕಾರ್ಯಕರ್ತೆ ದಿವ್ಯ ಹಾಗರಗಿ ಮನೆ ಮೇಲೆ ಸಿಐಡಿ ದಾಳಿ