ಕಲಬುರಗಿ: ಮಹಾನಗರದಲ್ಲಿ ಬಹುತೇಕ ಕಡೆ ಕಲುಷಿತ ನೀರು ಸರಬರಾಜು ಆಗುತ್ತಿದ್ದು, ಶುದ್ಧ ಹಾಗೂ ಸಮರ್ಪಕ ನೀರು ಪೂ ರೈಕೆಗೆ ಆಗ್ರಹಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲು ಹೋದ ಎಎಪಿ ಮುಖಂಡರನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಸ್ಲಂ ಜನಾಂದೋಲನ ಕಾರ್ಯಕರ್ತರಿಂದ ಸಿಎಂಗೆ ಮನವಿ
ವಾರಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಅದು ಕಲುಷಿತ ನೀರು, ಇದ ರಿಂದ ಸಾರ್ವಜನಿಕರು ತುಂಬ ತೊಂದರೆ ಅನುಭವಿಸುತ್ತಿದ್ದಾರೆ ಇಲ್ಲಿ ಸರಬರಾಜು ಆಗುವ ಕೊಳವೆ ಮಾರ್ಗದ ಭೀಮಾಬ್ಯಾರೇಜ ಮತ್ತು ಪಂಪಹೌಸ ಬದಲಾಯಿಸಿ ಶುದ್ಧ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಎಎಪಿ ಪಕ್ಷದಿಂದ ಈ ಮುಂಚೆ ಸಲ್ಲಿಸಲಾದ ಮನವಿಯ ಕುರಿತು ಮತ್ತೊಮ್ಮೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ಹೋದಾಗ ದಾರಿಮದ್ಯೆ ತಡೆದ ಪೊಲೀಸರು ತಮ್ಮನ್ನು ವಶಕ್ಕೆ ಪಡೆದಿದ್ದಾರೆ ಎಂದು ಎಎಪಿ ನಗರ ಅಧ್ಯಕ್ಷ ಸೈಯದ ಸಜ್ಜಾದ ಅಲಿ ಇನಾಮದಾರ ಅವರು ಹೇಳಿದ್ದಾರೆ.
ಇದನ್ನೂ ಓದಿ: ಪಿ.ಎಮ್. ಕಿಸಾನ್ ಫಲಾನುಭವಿಗಳು ಕೆಸಿಸಿ ಪಡೆಯಲು ಸೂಚನೆ
ಈ ಸಂದರ್ಭದಲ್ಲಿ ಶರಣಬಸವ ಐಟಿ, ಸಾಹೇಬಗೌಡ, ಸೈಯದ ಅಷ್ಟಾಕ ಅಲಿ ಇನಾಮದಾರ ಇತರರು ಇದ್ದರು.