ಸುರಪುರ: ತಾಲ್ಲೂಕಿನ ಅನೇಕ ಗ್ರಾಮಗಳಿಗೆ ಬಸ್ಸಿನ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳಿಗೆ ಬರಲು ತೀವ್ರ ತೊಂದರೆಯಾಗುತ್ತಿದೆ,ಆದ್ದರಿಂದ ಎಲ್ಲಾ ಗ್ರಾಮಗಳಿಗೆ ಬಸ್ಸಿನ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರು ನಗರದ ಬಸ್ ಡಿಪೋ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.
ತಾಲ್ಲೂಕಿನ ಮಂಗಿಹಾಳ ಗ್ರಾಮಕ್ಕೆ ಕಳೇದ ಹತ್ತು ವರ್ಷದಿಂದ ಬಸ್ಸಿನ ಓಡಾಟವಿಲ್ಲ.ಇನ್ನು ದೇವರಗೋನಾಲಕ್ಕೆ ಸಮಯಕ್ಕೆ ಸರಿಯಾಗಿ ಬಸ್ಸುಗಳಿಲ್ಲ ಅಲ್ಲದೆ ಗುಡಿಹಾಳ ಗ್ರಾಮಕ್ಕು ಕೂಡ ಬಸ್ಸಿನ ವ್ಯವಸ್ಥೆಯಿಲ್ಲ.ಈ ರೀತಿಯಾಗಿ ತಾಲ್ಲೂಕಿನ ಅನೇಕ ಗ್ರಾಮಗಳಿಗೆ ಬಸ್ಸುಗಳಿಲ್ಲದೆ ಶಾಲಾ ಕಾಲೇಜುಗಳಿಗೆ ಬರುವ ಮತ್ತು ಮರಳಿ ಊರಿಗೆ ಹೋಗಲು ಬಸ್ಸಿನ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ತೀವ್ರ ತೊಂದರೆ ಪಡುವಂತಾಗಿದೆ.ಆದ್ದರಿಂದ ಕೂಡಲೆ ತಾಲ್ಲೂಕಿನ ಎಲ್ಲಾ ಗ್ರಾಮಗಳಿಗೆ ಬಸ್ಸಿನ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದ ಮನವಿಯನ್ನು ಬಸ್ ಡಿಪೋ ವ್ಯವಸ್ಥಾಪಕರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಬಿವಿಪಿ ಜಿಲ್ಲಾ ಸಂಚಾಲಕ ಕ್ಯಾತಪ್ಪ ಮೇದಾ,ನಗರ ಕಾರ್ಯದರ್ಶಿ ರಮೇಶ ಯಾದವ, ಶಂಕರಲಿಂಗ ಚೌಡೇಶ್ವರಿಹಾಳ, ಗೋಪಾಳ ಗುಡಿಹಾಳ,ನಿಂಗು ಮಂಗಿಹಾಳ,ಸೋಮಶೇಖರ ಮಂಗಿಹಾಳ, ಧರ್ಮರಾಜ ಶೆಳ್ಳಿಗಿ, ಅಯ್ಯಣ್ಣ ಮಂಗಿಹಾಳ,ಶರಣಪ್ಪ ಮಂಗಿಹಾಳ,ಗುರುನಾಥರೆಡ್ಡಿ ಮಂಗಿಹಾಳ,ಗ್ಯಾನಪ್ಪ ಮಂಗಿಹಾಳ ಸೇರಿದಂತೆ ಅನೇಕರಿದ್ದರು.