೧೦೮ನೇ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ

0
16

ಕಲಬುರಗಿ: ಆಳಂದ ರಸ್ತೆಯ ಸ್ವಾಮಿ ವಿವೇಕಾನಂದ ನಗರದಲ್ಲಿರುವ ಆದರ್ಶ ಶಿಕ್ಷಣ ಸಂಸ್ಥೆಯ ಪ್ರೊ. ಪಿ. ಎಸ್. ಚೌಧರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಉತ್ತರ ವಲಯ ವತಿಯಿಂದ ೧೦೮ನೇ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಯುವಕರಲ್ಲಿ ನಾಡು-ನುಡಿ ಅಭಿಯಾನ ಕುರಿತು ವಿಚಾರ ಸಂಕಿರಣವನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ್ ಅವರು ಉದ್ಘಾಟಿಸಿದರು.

ನಂತರ ಉದ್ಘಾಟನಾ ಭಾಷಣ ಮಾಡಿದ ಪಾಟೀಲ್, ನಾಡು-ನುಡಿ. ನೆಲ-ಜಲದ ಬಗ್ಗೆ ಯುವಕರಲ್ಲಿ ಆಸಕ್ತಿ ಮಾಡಬೇಕೆಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ವೀರಣ್ಣ ಬೊಮ್ಮನಹಳ್ಳಿ ಭಾಗವಹಿಸಿದರು. ಗುಲಬರ್ಗಾ ವಿಶ್ವವಿದ್ಯಾಲಯ ಎಂ.ಎಸ್.ಡಬ್ಲ್ಯೂ ಮುಖ್ಯಸ್ಥ ಕೆ.ಎಸ್.ಮಾಲಿಪಾಟೀಲ್ ಮಾತನಾಡಿ, ಯುವಕರಲ್ಲಿ ನಾಡು-ನುಡಿ ಅಭಿಯಾನ ಬಗ್ಗೆ ಜಾಗೃತಿ ಮೂಡಿಸಿದರು. ಸೇಡಂ ಸಂಶೋಧನಾ ಸಾಹಿತಿ ಮೂಡಬಿ ಗುಂಡೇರಾವ ಮಾತನಾಡಿ, ಯುವಕರು ಕನ್ನಡ ನಾಡು-ನುಡಿಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.

Contact Your\'s Advertisement; 9902492681

ಇದನ್ನೂ ಒದಿ: ವಿಶ್ವಗುರು ಬಸವಣ್ಣನವರ ೮೮೯ನೇ ಜಯಂತಿ ಅಂಗವಾಗಿ ತೋಟಿಲು ತೂಗುವ ಕಾರ್ಯಕ್ರಮ

ಬಸವರಾಜ್ ಎಲೇರಿ ಅಧ್ಯಕ್ಷತೆವಹಿಸಿದ್ದರು. ವೇದಿಕೆಯ ಮೇಲೆ ಕಾಲೇಜಿನ ಪ್ರಾಚಾರ್ಯ ಜಿತೆಂದ್ರ ಭಟ್ ಹಾಗೂ ಗೌರವ ಅಧ್ಯಕ್ಷ ಶಿವಯೋಗೆಪ್ಪ ಬಿರಾದಾರ್ ಇದ್ದರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಬುರಗಿ ಉತ್ತರ ವಲಯದ ಅಧ್ಯಕ್ಷ ಪ್ರಭುಲಿಂಗ ಮೂಲಗೆ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಅಂದಿನಿಂದ ಇಂದಿನವರೆಗೆ ಬೆಳೆದು ಬಂದ ದಾರಿ ಕುರಿತು ಮಾತನಾಡಿದರು.

ಗೌರವ ಕಾರ್ಯದರ್ಶಿಗಳಾದ ಹಣಮಂತ ದಿಂಡೂರ ಹಾಗೂ ನಾಗೇಶ್ ತಿಮ್ಮಾಜಿ, ಕೋಶಾಧ್ಯಕ್ಷ ಶ್ರೀಕಾಂತ್ ಪಾಟೀಲ್, ಪದಾಧಿಕಾರಿಗಳಾದ ವಿಜಯಕುಮಾರ ಬಂಗಾರಿ, ಹೇಮಂತ ಸರದಾರ, ನಾಗರಾಜ ಕ್ಯಾಶರ, ಚಂದ್ರಕಾಂತ ಬಿರಾದಾರ, ಸಂಜೀವ ಪಾಟೀಲ್, ಲಕ್ಷ್ಮಿಕಾಂತ ರೇವಣಿ ಹಂಗರಗಿ, ನವಾಬ ನಿರ್ವಹಿಸಿದರು. ನಾಗೇಶ್ ತಿಮ್ಮಾಜಿ ವಂದಿಸಿದರು.

ಇದನ್ನೂ ಒದಿ: ಸಂಸದ ಡಾ.ಉಮೇಶ ಜಾಧವ್‌ಗೆ ಗಡುವು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here