ಚಿತ್ತಾಪುರ ಶರಣ ಬಸವೇಶ್ವರ ನಾಟ್ಯ ಸಂಘದಿಂದ ನಾಟಕ: ನಾಗರಾಜ್ ಸಾಹು ಭಂಕಲಗಿ

0
59

ಚಿತ್ತಾಪುರ:ಪಟ್ಟಣದ ಹೊರವಲಯದಲ್ಲಿ ಇರುವ ಶ್ರೀ ಶರಣ ಬಸವೇಶ್ವರ ದೇವಸ್ಥಾನ ಹತ್ತಿರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯಿಂದ ನಾಟಕ ಏರ್ಪಾಡು ಮಾಡಲಾಗಿದೆ ಎಂದು ಸಮಿತಿಯ ಅಧ್ಯಕ್ಷ ನಾಗರಾಜ್ ಸಾಹು ಭಂಕಲಗಿ ತಿಳಿಸಿದ್ದಾರೆ.

ಸೋಮವಾರ ಶ್ರೀ ಶರಣ ಬಸವೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಅನೇಕ ವರ್ಷಗಳಿಂದ ಪಟ್ಟಣದಲ್ಲಿ ನಾಟಕ ಆಗಿರುವುದಿಲ್ಲಾ.ಕಳೆದೆರಡು ವರ್ಷಗಳಿಂದ ಕರೋನಾ ಮಹಾಮಾರಿ ಬಂದು ಯಾವುದೇ ನಾಟಕ ಇಲ್ಲದೆ ಕಲಾವಿದರನ್ನು ಕಂಗಾಲಾಗಿ ಮಾಡಿತ್ತು.

Contact Your\'s Advertisement; 9902492681

ನಮ್ಮ ಸಮಿತಿಯ ವತಿಯಿಂದ ಮೂರು ದಿನಗಳ ಕಾಲ ದಿನಾಂಕ:11 ,12 ಮತ್ತು 13 ರಂದು ಯಲ್ಲೇಶ ಯಾಳಗಿ ಅವರ “ಮಗ ಹೋದರು ಮಾಂಗಲ್ಯ ಬೇಕು”ಎಂಬ ಸುಂದರ ಸಾಮಾಜಿಕ ನಾಟಕ ಏರ್ಪಾಟು ಮಾಡಲಾಗಿದೆ.ಪಟ್ಟಣದ ಸಾರ್ವಜನಿಕರು,ಕಲಾರಸಿಕರು ಆಗಮಿಸಿದ ಯಶಸ್ವಿಮಾಡಬೇಕು ಎಂದು ತಿಳಿಸಿದರು.

ನಾಟಕವು 3 ದಿನಗಳ ಕಾಲ ಪ್ರತಿ ದಿನ 9:30ಕ್ಕೆ ಶ್ರೀ ಶರಣ ಬಸವೇಶ್ವರ ದೇವಸ್ಥಾನ ಹತ್ತಿರ ರಂಗ ಸಜ್ಜಿಕೆಯಲ್ಲಿ ನಡೆಯುತ್ತದೆ ಈ ನಾಟಕದಲ್ಲಿ ವಿವಿಧ ಸ್ವಾಮೀಜಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಿದ್ದಣಗೌಡ ಮಾಲಿ ಪಾಟೀಲ್ ದಿಗ್ಗಾಂವ,ಮಹಾದೇವಪ್ಪಾ ಪಾಲಪ್,ಹನಮಂತ ಸಂಕನೂರ, ಮಲ್ಲಿಕಾರ್ಜುನ ಪೂಜಾರಿ,ಆನಂದ ಪಾಟೀಲ್ ನರಬೋಳಿ, ಪ್ರಭಾಕರ್ ತುರೆ,ಬಸವರಾಜ ಹೂಗಾರ್, ಸಿದ್ದು ರಾಜಾಪೂರ್, ಬಸವರಾಜ ಸುಲಗಿ,ಕಿಟ್ಟು ಸ್ವಾಮಿ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here