ಸಂಸ್ಕೃತಿಯ ಅರಿವು ಮೂಡಿಸಿದ ಮಕ್ಕಳ ಬೇಸಿಗೆ ಶಿಬಿರ

0
22

ಕಲಬುರಗಿ: ಮಕ್ಕಳು ಪಠ್ಯದ ಹೊರಗು ನೋಡಬೇಕಾದ ಅವಶ್ಯಕತೆಯಿದೆ. ಪಠ್ಯದ ಜತೆ ಸಂಸ್ಕೃತಿ ಕಲೆಸುವುದು ಇಂದಿನ ಅಗತ್ಯವಾಗಿದೆ ಎಂದು ಸಮಾಜ ಸೇವಕಿ ಜಯಶ್ರೀ ಮತ್ತಿಮಡು ತಿಳಿಸಿದರು.

ನಗರದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಕಲಬುರಗಿ ರಂಗಾಯಣ ಆಯೋಜಿಸಿದ್ದ ಮಕ್ಕಳ ಬೇಸಿಗೆ ಶಿಬಿರ ಚಿಣ್ಣರ ಮೇಳ-೨೦೨೨ ರಂಗ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಒಂದು ತಿಂಗಳಿಂದ ಮಕ್ಕಳಿಗೆ ನಮ್ಮ ಸಂಸ್ಕೃತಿಯ ಅರಿವು ಮೂಡಿಸುವ ಕೆಲಸ ಮನಮುಟ್ಟುವಂತೆ ನಡೆದಿದೆ. ಶಿಬಿರದಲ್ಲಿ ಪಾಲ್ಗೊಂಡಿರುವ ಮಕ್ಕಳು ಖುಷಿಯಿಂದ ತಮ್ಮ ನಟನಾ ಕೌಶಲ ಪ್ರದರ್ಶಿಸುವ ಮೂಲಕ ತಮ್ಮ ಪ್ರತಿಭೆಯನ್ನು ಹೊರ ಜಗತ್ತಿಗೆ ತೋರಿದ್ದಾರೆ. ಇದರಿಂದ ಅವರ ಪಾಲಕರಿಗೂ ಖುಷಿಯಾಗಿದೆ ಎಂದು ಹೇಳಿದರು.

Contact Your\'s Advertisement; 9902492681

ಇದನ್ನೂ ಓದಿ: ಕಲಬುರಗಿ ಪೇಟೆ ಧಾರಣೆ

ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಮಾತನಾಡಿ, ಕಲಬುರಗಿ ರಂಗಾಯಣದಿಂದ ಬೇಸಿಗೆ ಮಕ್ಕಳ ರಂಗ ತರಬೇತಿ ವಿಶೇಷ ಶಿಬಿರ ಮುಂದಿನ ವರ್ಷದಿಂದ ರಂಗಾಯಣ ವ್ಯಾಪ್ತಿಯ ೭ ಜಿಲ್ಲೆಗಳಲ್ಲಿ ಆಯೋಜಿಸುವಂತೆ ಸgಸರ್ಕಾರಕ್ಕೆ ಪತ್ರದ ಮೂಲಕ ಮನವಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿಸರಕಾರದಿಂದ ಸಕಾರಾತ್ಮಕ ಉತ್ತರ ನಿರೀಕ್ಷೆ ಇದೆ ಎಂದು ಹೇಳಿದರು.

ಖ್ಯಾತ ನಟಿ ಹೆಲೆನ್ ಮೈಸೂರು ಮುಖ್ಯ ಅತಿಥಿಯಾಗಿದ್ದರು. ಪಾಲಕರಾದ ಆಜಾದ್ ತಾಜುದ್ದೀನ್ ಹಾಗೂ ಸಾಕ್ಷಿ ಶಿವರಂಜನ ಸತ್ಯಂಪೇಟೆ ಅವರು ಶಿಬಿರದ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ರಂಗಾಯಣ ಆಡಳಿತಾಧಿಕಾರಿ ಜಗದೀಶ್ವರಿ ನಾಸಿ ಸ್ವಾಗತಿಸಿದರು. ಅಕ್ಷತಾ ಕುಲಕರ್ಣಿ ನಿರೂಪಿಸಿದರು. ಡಾ.ಸಂದೀಪ್ ಬಿ. ವಂದಿಸಿದರು. ನಂತರ ಜರುಗಿದ ಮಕ್ಕಳು ಪ್ರದರ್ಶಿಸಿದ ಮೂಕಾಭಿನಯ ಹಾಗೂ ಎರಡು ನಾಟಕಗಳು ಪ್ರೇಕ್ಷರ ಮನಸೂರೆಗೊಂಡವು.

ಇದನ್ನೂ ಓದಿ: ಸಿಐಡಿ ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆಸಬೇಕು: ಶಾಸಕ ಪ್ರಿಯಾಂಕ್ ಖರ್ಗೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here