ಕಲಬುರಗಿ : ಹಿರಿಯ ಸಾಹಿತಿ ಲೇಖಕ ಅಂಕಣಕಾರರಾದ ಮಲ್ಲಿಕಾರ್ಜುನ ಕಡಕೋಳ ಅವರು ರಚಿತ ಕಡಕೋಳ ನೆಲದ ನೆನಪುಗಳು ಪುಸ್ತಕ ಲೋಕಾರ್ಪಣೆ ಸಮಾರಂಭವು ಮೇ 14 ರಂದು ಬೆಳಗ್ಗೆ 10:30 ಗಂಟೆಗೆ ನಗರದ ಕನ್ನಡ ಭವನದ ಸುವರ್ಣ ಸಭಾಭವನದಲ್ಲಿ ಜರುಗಲಿದೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆಯಲಿರುವ ಸಮಾರಂಭದ ಸಾನಿಧ್ಯವನ್ನು ಕಡಕೋಳದ ಪೂಜ್ಯ ಡಾ ರುದ್ರಮುನಿ ಶಿವಾಚಾರ್ಯ ಮಾಹಾಸ್ವಾಮಿಗಳು ವಹಿಸಲಿದ್ದಾರೆ. ಕೇಂದ್ರಿಯ ವಿವಿ ಯ ಪ್ರಾಧ್ಯಾಪಕ ಡಾ. ಬಸವರಾಜ ಕೋಡಗುಂಟಿ ಅವರು ಕಡಕೋಳ ನೆಲದ ನೆನಪುಗಳು ಪುಸ್ತಕ ಲೋಕಾರ್ಪಣೆ ಗೋಳಿಸುವರು.
ಮಕ್ಕಳ ಹಿರಿಯ ಸಾಹಿತಿ ಎ.ಕೆ. ರಾಮೇಶ್ವರ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕೃತಿಯ ಕುರಿತು ಖ್ಯಾತ ಕತೆಗಾರ ಮಹಾಂತೇಶ ನವಲಕಲ್ ಅವರು ಮಾತನಾಡಲಿದ್ದಾರೆ, ಕೃತಿಕಾರರಾದ ದಾವಣಗೆರೆಯ ಮಲ್ಲಿಕಾರ್ಜುನ ಕಡಕೋಳ ರವರ ಉಪಸ್ಥಿತಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಕಡಕೋಳ ಮಡಿವಾಳಪ್ಪನವರ ತತ್ವ ಪದಗಳ ಗಝಲ್ ಗಾಯನವನ್ನು ಎದೆತುಂಬಿ ಹಾಡುವೆನು ಖ್ಯಾತಿಯ ಗಝಲ್ ಗಾಯಕ ಸೂರ್ಯಕಾಂತ ಗಡಿಲಿಂಗದಳ್ಳಿ ಅವರು ಪ್ರಸ್ತುತ ಪಡಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ , ಯಶವಂತರಾಯ ಅಷ್ಠಗಿ , ಗೌರವ ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ ಸೇರಿದಂತೆ ಜಿಲ್ಲೆಯ ಹಿರಿಯ ಕಿರಿಯ ಸಾಹಿತಿಗಳು, ಗಣ್ಯರು, ಚಿಂತಕರು ಉಪಸ್ಥಿತರಿರಲಿದ್ದಾರೆ.