ಲೇಸೆನಿಸಿಕೊಂಡು ನಾಲ್ಕು ದಿನ ಬದುಕಿದರೇನು ? ಲೇಸೆನಿಸಿಕೊಂಡು ಮೂರು ದಿನ ಬದುಕಿದರೇನು ?ಲೇಸೆನಿಸಿಕೊಂಡು ಎರಡು ದಿನ ಬದುಕಿದರೇನು ?ಲೇಸೆನಿಸಿಕೊಂಡು ಒಂದು ದಿನ ಬದುಕಿದರೇನು ?ಕೂಡಲಸಂಗನ ಶರಣರ ವಚನದಲ್ಲಿ ಲೇಸೆನಿಸಿಕೊಂಡು ಒಂದು ದಿನ ಬದುಕಿದರೆ ಸಾಕು. ಎಂಬ ಬಸವಣ್ಣನವರ ವಚನದಂತೆ ಬದುಕಿ ಬಾಳಿದವರು ಸಿದ್ದಣ್ಣ ರಾಜವಾಳ ಅವರು.
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ರಾಜವಾಳ ಗ್ರಾಮದಲ್ಲಿ ಹಿಂದುಳಿದ ವರ್ಗವಾದ ಕೋಲಿ ಸಮುದಾಯದಲ್ಲಿ ಹುಟ್ಟಿ, ಜೇವರ್ಗಿ ಪಟ್ಟಣದ ಅಡತ ದಲ್ಲಿ ಕಾಯಕ ಆರಂಭಿಸಿ, ಮುಂದೆ ಕಮ್ಯುನಿಸ್ಟ್ ಪಕ್ಷ (CPI )ಸೇರಿ,ರಾಜಕೀಯ ಅಂದ್ರೆ ಕೇವಲ ಮೇಲ್ವರ್ಗದ ಜನರು, ಸಿರಿವಂತರು ಮಾತ್ರ ಮಾಡುತ್ತಾರೆ ಅನ್ನೋ ಕಾಲ ದಲ್ಲಿ ತಾಲೂಕಿನಲ್ಲಿರುವ ಪ್ರಬಲ ಸಮುದಾಯದ ಪ್ರಬಲ Mla ಅಭ್ಯರ್ಥಿಯೊಬ್ಬರನ್ನು ಎದುರುಹಾಕಿಕೊಂಡು, ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿ, ಅವಿರೋಧವಾಗಿ ಆಯ್ಕೆಯಾದವರು.
ರಾಜಕೀಯ ರಾಜಕೀಯ ಅಂದರೆ, ಚುನಾಯಿತ ಜನಪ್ರತಿನಿಧಿ ಎಂದ್ರೆ ತಾವು, ತಮ್ಮ ಕುಟುಂಬ, ನೆಂಟರು, ಜ್ಯಾತ್ಯಸ್ಥರು ಮಾತ್ರ ಅಧಿಕಾರ ಅನುಭೋಗಿಸಿ, ಸಾರ್ವಜನಿಕ ಹಣ ಲೂಟಿ ಮಾಡಿ ವೈಭೋಗದಲ್ಲಿ ಮೆರೆಯುವುದು ಅನ್ನೋ ಮನಸ್ಥಿತಿಯ ಸಂಧರ್ಭದಲ್ಲಿ ಕೈಯನ್ನು ಸ್ವಚ್ಛವಾಗಿಟ್ಟುಕೊಂಡು, ಜೀವನದ ಉದ್ದಕ್ಕೂ ಅದೆಷ್ಟೇ, ಕಷ್ಟ, ಕಾರ್ಪಣ್ಯ ಬಂದರೂ ಅದಾವುದನ್ನು ಹೊರಗೆ ತೋರುಗಡದೆ,ಸದಾ ಗಂಭೀರವಾಗಿ ಇರುವ ವ್ಯಕ್ತಿತ್ವ ಸಿದ್ದಣ್ಣ ರಾಜವಾಳ ಅವರದ್ದು.
ಜೇವರ್ಗಿ ಸೇರಿದಂತೆ ಕಲಬುರ್ಗಿ ಜಿಲ್ಲೆ ಮತ್ತು ವಿಭಾಗದಲ್ಲಿ ತನ್ನ ಸಮುದಾಯದ ಜನರ ಆರ್ಥಿಕ, ಸಾಮಾಜಿಕ , ಶೈಕ್ಷಣಿಕ ಮತ್ತು ರಾಜಕೀಯ ಸ್ಥಿತಿಗತಿ ಬಗ್ಗೆ ತುಂಬಾ ಮರುಕ ಉಂಟಾಗುತ್ತಿತ್ತು ಅದರ ಬಗ್ಗೆ ಏನಾದ್ರೂ ಮಾಡಬೇಕು ಎಂಬ ಭಾವನೆ ಅವರಲ್ಲಿ ಸದಾ ಕಾಡುತ್ತಿತ್ತು.ಆದರೆ, ಇ ವ್ಯವಸ್ಥೆಯಲ್ಲಿ ಅವರಿಗೆ ಸೂಕ್ತ ಸಹಕಾರ ಮತ್ತು ಸಿಗಲಿಲ್ಲ ಅಂಬೋದೇ ದೊಡ್ಡ ವಿಪರ್ಯಾಸ.
ಬೇಡವೊ ಇಲಿಚಯ್ಯಾ ! ಮೊನ್ನೆ ಬಂದು ನಮ್ಮ ಶಿವದಾರವ ಕಡಿದೆ ಇಂದು ಬಂದು ನಮ್ಮ ವಸ್ತ್ರವ ಕಡಿದೆ. ಬೇಡವೋ ಇಲಿಚಯ್ಯಾ ! ನಿನಗಂಜರು ನಿನ್ನ ಗಣಪತಿಗಂಜರು; ಕೂಡಲಚೆನ್ನಸಂಗನ ಶರಣರು ಕಂಡಡೆ ನಿನ್ನ ಹಲ್ಲ ಕಳೆವರು ಹಂ(ದಂ?)ತವ ಮುರಿವರು. ಎಂಬ 12ನೇಯ ಶತಮಾನದ ಶರಣರು, ವಚನಕಾರರು ಹಾಗೂ ಚಿನ್ಮಯಜ್ಞಾನಿ ಚೆನ್ನ ಬಸವಣ್ಣ ಅವರ ವಚನದಂತೆ, ಸಿದ್ದಣ್ಣ ರಾಜವಾಳ ಅವರು ಯಾರೇ ಇರಲಿ, ಏನೇ ಇರಲಿ ಹೇಳಬೇಕಾದದ್ದನ್ನು ನೇರ, ನಡೆ, ನಿರ್ಭಯದಿಂದ ಹೇಳುತ್ತಿದ್ದರು ಮತ್ತು ಪ್ರತಿಪಾಧಿಸುತ್ತಿದ್ದರು.
ಸಿದ್ದಣ್ಣ ರಾಜವಾಳ ಅವರ ಇ ಗುಣವನ್ನು ತಪ್ಪಾಗಿ ತಿಳಿದವರೇ ಬಹಳ ಮಂದಿ. ಇನ್ನು ಕೆಲವರು ಅವರಿಗೆ ತೋರಿಕೆಗೆ ಮುನ್ನೆಲೆಯ ನಾಯಕ ಎಂಬಂತೆ ತೋರಿಸಿ, ಏಣಿಯಾಗಿ ಬಳಸಿಕೊಂಡು ಮುಂದೆ ಬಂದರು.ಆದರೆ, ಸಿದ್ದಣ್ಣ ತಾನಿರುವ ಸ್ಥಿತಿಯಲ್ಲೇ ಇದ್ದು ಸರಳತೆಯಿಂದ, ಪ್ರಾಮಾಣಿಕತೆಯಿಂದ, ಆದರ್ಶದಿಂದ ಬದುಕಿದರು.
ನನ್ನ ಅವರ ಒಡನಾಟ ಆರಂಭ ಆದದ್ದು 2003ರಲ್ಲಿ ಆಗವರು ಜೇವರ್ಗಿ ತಾಲ್ಲೂಕು ಕೇಂದ್ರದಲ್ಲಿದ್ದರು. ಅವರ ಮಗ @ಹೋರಾಟಗಾರ ರಾಜೇಂದ್ರ ರಾಜವಾಳ ಕಲಬುರ್ಗಿ ಗೆ ಶಿಕ್ಷಣಕ್ಕಾಗಿ ಬಂದ. ಆಗಿನಿಂದ ಸಿದ್ದಣ್ಣ ಅವರ ಒಡನಾಟ, ಸಂಪರ್ಕ ಬೆಳೆಯಿತು.ಮುಂದೆ ಇನ್ನಷ್ಟು, ಮತ್ತಷ್ಟು ಗಾಡವಾಯಿತು.ಕಲಬುರ್ಗಿ ನಗರದ ಅವರ ಬಾಡಿಗೆ ಮನೆ ನನ್ನ ಮನೆಯೇ ಆಗಿತ್ತು.ಹಾಗಿತ್ತು ಅವರ ಕುಟುಂಬದ ಜೊತೆಗಿನ ಬಾಂಧವ್ಯ.
ನಾನು ವಿದ್ಯಾರ್ಥಿ ಸಂಘಟನೆಯಿಂದ,ಚಳುವಳಿ ಯಿಂದ ಕೆಲವು ದೊಡ್ಡವರು ಮತ್ತು ನನ್ನ ಮಧ್ಯ ಬಂದ ಭಿನ್ನಾಭಿಪ್ರಾಯದಿಂದ ಸ್ವಲ್ಪ,ಸ್ವಲ್ಪ ದೂರವಾಗಿ ಹೊರಗೆ ಬಂದು ಕಾಂಗ್ರೆಸ್ ಸೇರಿದೆ… ಅದಾದ 1ವರ್ಷದಲ್ಲೇ ಅವರು ಗೆಳೆಯ ಕೂಡಾ ಕಾಂಗ್ರೆಸ್ ಗೆ ಬಂದರು.. ಆಮೇಲೆ ಅವರು ಹಿರಿಯರಾದರು, ನಾನು ಕಿರಿಯರಾದರು ಅವರ ಮತ್ತು ನನ್ನ ಮಧ್ಯ ಸಂಬಂಧ ಅವಿನಾಭಾವ ಆಗಿಯೇ ಇತ್ತು. ಅದಾದ ಹಲವು ವರ್ಷಗಳ ತರುವಾಯ ನಾನು ವೈವಾಹಿಕ ಜೀವನಕ್ಕೆ ಕಾಲಿಟ್ಟು, ಕಲ್ಯಾಣ ಕರ್ನಾಟಕ ಎಂಬ ಕಲಬುರ್ಗಿ ಬಿಟ್ಟು, ಕಿತ್ತೂರು ಕರ್ನಾಟಕ ಎಂಬ ಬೆಳಗಾವಿ ಸೇರಿದೆ.
ಆಗ ಒಂದಷ್ಟು ಸಂಪರ್ಕ ತಪ್ಪಿತು..ಹಾಗೇ ಅದೇ ಅವಧಿಯಲ್ಲಿ ಕೊರೋಣಾ ಎಂಬ ಕಾಯಿಲೆ ಇಡಿ ವಿಶ್ವ ಆವರಿಸಿ, ಹಲವು ಜನರನ್ನು ತನ್ನ ತೆಕ್ಕೆಗೆ @ಮೃತ್ಯು ದವಡೆಗೆ ಕರೆದೋಯ್ಯಿತು. ಆದರಲ್ಲಿ ನಮ್ಮ ಸಿದ್ದಣ್ಣ ಒಬ್ಬರು. ಸಿದ್ದಣ್ಣ ಅವರು ನಮ್ಮಿಂದ ಕಣ್ಮರೆಯಾಗಿ ಹೋಗಿ 1 ವರ್ಷ ಆಗುತ್ತಿರುವ ಸಂಧರ್ಭದಲ್ಲಿ ಅವರನ್ನು ನೆನಪು ಮಾಡಿಕೊಳ್ಳುವುದೇ ಒಂದು ಮಹದಾನಂದ.
12ನೇಯ ಶತಮಾನದ ವಚನಕಾರ , ಶರಣ ಉರಿಲಿಂಗದೇವರ ಲೋಕದಂತೆ ಬಾರರು, ಲೋಕದಂತೆ ಇರರು, ಲೋಕದಂತೆ ಹೋಗರು, ನೋಡಯ್ಯ. ಪುಣ್ಯದಂತೆ ಬಪ್ಪರು, ಜ್ಞಾನದಂತೆ ಇಪ್ಪರು, ಮುಕ್ತಿಯಂತೆ ಹೋಹರು, ನೋಡಯ್ಯಾ. ಉರಿಲಿಂಗದೇವಾ, ನಿಮ್ಮ ಶರಣರು ಉಪಮಾತೀತರಾಗಿ ಉಪಮಿಸಬಾರದು. ಎಂಬುದು ಇಲ್ಲಿ ಅನ್ವಯಿಸುತ್ತೆ.
ಭೀಮನಗೌಡ ಪರಗೊಂಡ
ವಕೀಲರು,ಕಲಬುರ್ಗಿ