ಕಲಬುರಗಿ: ಕಳೆದ ವರ್ಷ ಮೇ 26 2021 ರಂದು ಕೋವಿಡ್ ಮಾಹಮಾರಿಗೆ ಸಿಲುಕಿ ಸಾವನಪ್ಪಿದ ಜನಪರ ಹೋರಾಟಗಾರರು ಕಾಂಗ್ರೆಸ್ ಪಕ್ಷದ ಮುಖಂಡರಾದ ದಿ ಸಿದ್ದಣ್ಣ ರಾಜವಾಳ ಅವರ ಪ್ರಥಮ ವರ್ಷದ ಸ್ಮರಣೆಯ ಅಂಗವಾಗಿ ಜೇವರ್ಗಿ ತಾಲ್ಲೂಕಿನ ಕಟ್ಟಿಸಂಗಾವಿ ಗ್ರಾಮದಲ್ಲಿ ಊರಿನ ನಾಗರಿಕರು ಮತ್ತು ರಾಜವಾಳ ಅವರ ಸ್ನೇಹಿತರು ನಾಳೆ ಸಂಜೆ 5 ಗಂಟೆಗೆ ನುಡಿ ನಮನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ವಿಧಾನ ಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಡಾ ಅಜಯ್ ಸಿಂಗ್ . ವಿಧಾನ ಪರಿಷತ್ ಮಾಜಿ ಸದಸ್ಯರಾದ ಅಲ್ಲಮ ಪ್ರಭು ಪಾಟೀಲ ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ ನರಿಬೋಳ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ರಾಜ್ಯ ಸಂಚಾಲಕರಾದ ಶೌಕತ್ ಅಲಿ ಆಲೂರು. ಮಾಜಿ ಜಿ ಪಂ ಸದಸ್ಯರಾದ ಶೋಭಾ ಬಾಣಿ. ಜೆಡಿಎಸ್ ಮುಖಂಡರಾದ ಶಂಕರ ಕಟ್ಟಿಸಂಗಾವಿ. ಡಾ ಪದ್ಮರಾಜ ರಾಸಣಗಿ ಯಾದಗಿರಿ ಪಿ ಎಸ್ ಐ ಕೃಷ್ಣಾ ಸಬೇದಾರ. ಮಲ್ಲಿಕಾರ್ಜುನ ದಿನ್ನಿ.ಬಿಜೆಪಿ ಮುಖಂಡರಾದ ಬಾಬು ಬಿ ಪಾಟೀಲ ಕಾಂಗ್ರೆಸ್ ಹಿರಿಯ ಮುಖಂಡರಾದ ತಿಪ್ಪಣ್ಣ ನಾಯಕೋಡಿ. ಶ್ರೀಶೈಲ್ ಸಜ್ಜನ. ಬೀಮಾಶಂಕರ ಪಾಟೀಲ ಸೇರಿದಂತೆ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ವಿದ್ಯಾರ್ಥಿ ಸಂಘ ಜಿಲ್ಲಾ ಸಂಚಾಲಕ ರಾಜೇಂದ್ರ ಸಿ ರಾಜವಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.