ಆಪ್ ಗೆ ಸೇರ್ಪಡೆಗೊಂಡ ಸಯ್ಯದ್ ಖಾಜಿ

0
34

ಕಲಬುರಗಿ: ಆಳಂದ ತಾಲೂಕಿನ ಮಾಜಿ ಪುರಸಭೆ ಸದಸ್ಯ ಹಾಗೂ ಬಿಜೆಪಿಯ ಅಲ್ಪಸಂಖ್ಯಾತ ಘಟಕದ ತಾಲೂಕಾಧ್ಯಕ್ಷ ಸಯ್ಯದ್ ಖಾಜಿ ಅವರು ಗುರುವಾರ ಬಿಜೆಪಿ ತೊರೆದು ಆಮ್ ಆದ್ಮಿಗೆ ಪಕ್ಷದ ನಾಯಕ ಚಂದ್ರಶೇಖರ ಎಸ್. ಹಿರೇಮಠ ಅವರ ನೇತೃತ್ವದಲ್ಲಿ ಸೇರ್ಪಡೆಗೊಂಡರು.

ಇಲ್ಲಿನ ಪತ್ರಿಕಾ ಭವನದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಿರೇಮಠ್ ಅವರು, ಆಳಂದ ತಾಲೂಕಿನಲ್ಲಿ ಆಪ್ ಪಕ್ಷಕ್ಕೆ ಸೇರ್ಪಡೆಯಾಗುವವರ ಸಂಖ್ಯೆ ಅಧಿಕವಾಗಿದೆ. ಈ ಭಾಗದ ಹಲವು ಕಾಂಗ್ರೆಸ್, ಬಿಜೆಪಿ ಮಾಜಿ ಶಾಸಕರು ಮತ್ತು ಸಚಿವರು ಪಕ್ಷದ ಸಂಪರ್ಕದಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ. ಮುಂಬರುವ 2023ರ ಚುನಾವಣೆಯಲ್ಲಿ ಆಮ ಆದಿ ಪಕ್ಷ ಪ್ರಬಲ ಪೈಪೋಟಿ ನೀಡಿ ಜಯಬೇರಿ ಬಾರಿಸುವ ಗುರಿ ಹೊಂದಲಾಗಿದೆ ಎಂದು ತಳಿಸಿದರು.

Contact Your\'s Advertisement; 9902492681

ಇದನ್ನೂ ಓದಿ: ಕಲಬುರಗಿ ಪೇಟೆ ಧಾರಣೆ

ಆಮ್ ಆದ್ಮ ಪಕ್ಷ ಈಗಾಗಲೇ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಅರವಿಂದ ಕೇಜ್ರಿವಾಲ ಅವರು ಕರ್ನಾಟಕವನ್ನು ಗೆಲ್ಲುವ ದೃಷ್ಠಿಕೋನ ಹಿನ್ನಲೆ ರಾಜ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಕರ್ನಾಟಕ ರಾಜ್ಯ ಆಮ ಆದ್ಮ ಪಕ್ಷ ಕರ್ನಾಟಕ ಉಸ್ತುವಾರಿಗಳಾದ ದಿಲೀಪ ಪಾಂಡೆ ಹಾಗೂ ಉಪೇಂದ್ರ ಗಾಂವಕರ ಈಗಾಗಲೇ ಸಾಕಷ್ಟು ಚುನಾವಣೆ ಕುರಿತ ಸಭೆಗಳನ್ನು ನಡೆಸಿ ಮುಂದಿನ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಗೆ ಪ್ರಬಲ ಪೈಪೋಟಿ ಅನೇಕ ಕ್ಷೇತ್ರಗಳಲ್ಲಿ ಗೆಲ್ಲುವ ಯೋಜನೆಯಾಗಿದೆ ಎಂದು ಹಿರೇಮಠ ತಿಳಿಸಿದರು.

ಈಗಾಗಲೇ ಜಿಲ್ಲೆಯಾದ್ಯಂತ ಆಮ ಆದ್ಮ ಪಕ್ಷ ಸದಸ್ಯತ್ವ ನೋಂದಣಿ ಕಾರ್ಯಕ್ರಮ ನಿರಂತರವಾಗಿ ಸಾಗಿದೆ. ಶ್ರೀ ಸಾಮಾನ್ಯರು ಆಮ್ ಆದ್ಮ ಪಕ್ಷಕ್ಕೆ ಸೇರುವಂತೆ ಸಂದೇಶ ನೀಡಲಾಗುತ್ತಿದ್ದು, ಹೀಗಾಗಿ ಪಕ್ಷ ಸೇರ್ಪಡೆಗೆ ಹೆಚ್ಚಿನ ಸಂಖ್ಯೆಯಲ್ಲಿ ಒಲವು ತೋರುತ್ತಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: ರಂಗಲಿಂಗ ಶರಣರ ಪ್ರವಚನ

ಇದೆ ಮೇ 20 ರಂದು ಸಾಯಂಕಾಲ 5 ಗಂಟೆಗೆ ಆಳಂದ ತಾಲೂಕಿನ ಶ್ರೀ ರಾಮ ಮಾರ್ಕೆಟ್‌ನಲ್ಲಿ ಜನಸ್ಪಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತಾಲೂಕಿನ ಆಮ್ ಆದ್ಮ ಪಕ್ಷದ ಕಚೇರಿ ಉದ್ಘಾಟಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಜನಸಾಮಾನ್ಯರು ಆಳಂದ ಪ್ರಗತಿ ಬಗ್ಗೆ, ಆಳಂದ ಅಭಿವೃದ್ಧಿ ಬಗ್ಗೆ ತಮ್ಮ ಸಲಹೆ ಸೂಚನೆಗಳನ್ನು ನೀಡಬಹುದಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಜೀವ ಕರೆಕಲ್, ಶರಣ ಪಾಟೀಲ ಐಟಿ, ಸಾಹೇಬಗೌಡ ಪಾಟೀಲ, ರಫಿಕ ಇನಾಮದಾರ ಸೇರಿ ಅನೇಕರು ಉಪಸ್ಥಿತರಿದ್ದರು.

ಇದನ್ನೂ ಓದಿ: ದಿ ಸಿದ್ದಣ್ಣ ರಾಜವಾಳ ಆದರ್ಶ ವ್ಯಕ್ತಿ ಯಾಗಿದ್ದರು: ಡಾ. ಅಜಯ್ ಸಿಂಗ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here