ಜನವಾದಿ ಮಹಿಳಾ ಸಂಘಟನೆ ತಾಲೂಕು ಸಮ್ಮೇಳನ

0
25

ಕಲಬುರಗಿ: ಅಖಿಲ ಭಾರತ ಜನವಾದಿ ಮಹಿಳಾ ಸಂಘದ ಮೂರನೇ ತಾಲ್ಲೂಕು ಸಮ್ಮೇಳನ ಗುರುವಾರ ಇಲ್ಲಿನ ಆಳಂದ ತಾಲೂಕು ಜಿಡಗಾದಲ್ಲಿ ನಡೆಯಿತು.

ಸಮ್ಮೇಳನ ಉದ್ಘಾಟಿಸಿದ ಡಾ ಪ್ರಭು ಖಾನಪುರೆ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಹಿಳೆಯರಿಗೆ ರಕ್ಷಣೆ ಕೊಡುವಲ್ಲಿ ವಿಫಲವಾಗಿವೆ.  ಮಹಿಳೆಯರು ತಮ್ಮ ರಕ್ಷಣೆ ಜತೆಗೆ ಸುತ್ತಮುತ್ತಲಿನ ಪ್ರದೇಶದಲ್ಲಿ ನಡೆಯುವ ದೌರ್ಜನ್ಯಗಳ ವಿರುದ್ಧ ಹೋರಾಟ ನಡೆಸಬೇಕು.ಜನವಾದಿ ಮಹಿಳಾ ಸಂಘಟನೆ ನೇತೃತ್ವದಲ್ಲಿ ಸಂಘಟಿತರಾಗಬೇಕು ಎಂದು ಹೇಳಿದರು.

Contact Your\'s Advertisement; 9902492681

ಇದನ್ನೂ ಓದಿ: ಆಪ್ ಗೆ ಸೇರ್ಪಡೆಗೊಂಡ ಸಯ್ಯದ್ ಖಾಜಿ

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಮೇಶ ಮಾಡ್ಯಾಳ ಕರ ಮಾತನಾಡಿ ಇಂದಿನ ದಿನದಲ್ಲಿ ಮಹಿಳೆಯರ ಮೇಲೆ ವರದಕ್ಷಿಣೆ ಮತ್ತಿತರೆ ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಚಾಗಿ ಮಹಿಳೆಯ ಮೇಲೆ ನಡೆಯುತ್ತಿವೆ. ಅಪ್ರಾಪ್ತ ವಯಸ್ಸಿನ ಯುವತಿಯರ ಮೇಲೆ ಶೇ. 84 ರಷ್ಟು ಅತ್ಯಾಚಾರಗಳು ನಡೆಯುತ್ತಿವೆ. ಆದರೆ ಅದರಲ್ಲಿ ಶೇ.16 ರಷ್ಟು ಮಾತ್ರ ಮಹಿಳೆಯರು ಠಾಣೆಯಲ್ಲಿ ದೂರು ದಾಖಲಿಸುತ್ತಾರೆ ಎಂದರು.ಸ್ಥಳೀಯ ಸಮಸ್ಯೆಗಳನ್ನಿಟ್ಟುಕೊಂಡು ಹೋರಾಟ ಮಾಡಬೇಕು.

ಮುಖ್ಯ ಅತಿಥಿ ಸ್ಥಾನ ವಹಿಸಿದ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ. ನೀಲಾ, ಮಾತನಾಡಿ ಒಬ್ಬರಿಂದ ಸಾಧ್ಯವಾಗದ ಕೆಲಸ ಸಂಘಟನೆ ಇಂದ ಮಾತ್ರ ಸಾಧ್ಯ ಮತ್ತು ಯುವಕರು ಕೂಡ ತಮ್ಮ ಒಂದು ಸಂಘಟನೆ ಮಾಡಿಕೊಂಡು ಸಂಘಟನೆ ಮೂಲಕ ಕೆಲಸ ಮಾಡಿ ಮತ್ತು ‘ಪಡಿತರ ಅಂಗಡಿಗಳಲ್ಲಿ ನೀಡುವ ಎರಡು ಕೆ.ಜಿ ಅಕ್ಕಿ, ಮೂರು ಕೆ.ಜಿ ಜೋಳದಿಂದ ಬದುಕಲಾದೀತೆ? ಉಳಿದ ದಿನ ಉಪವಾಸದಿಂದ ಸಾಯಬೇಕೆ ಎಂದರು. ಮಹಿಳೆಯರು ಒಂದಾಗಿ ಮುಂದೆ ಬನ್ನಿ, ದಿನಕ್ಕೆ 600 ರೂಪಾಯಿ ವೇತನ ನೀಡಬೇಕು ತಕ್ಕ ಶ್ರಮಕ್ಕೆ ತಕ್ಕ ವೇತನ ನೀಡಬೇಕು. ಹಾಗೆ ಮಹಿಳೆಯರ ಮೇಲೆ ಸರಣಿ ಅತ್ಯಾಚಾರ ನಡೆಯುತ್ತಿದ್ದರೂ ಸರಕಾರ ಕಣ್ಣು ಮುಚ್ಚಿ ಕುಳಿತಿದೆ. ಲೈಂಗಿಕ ದೌರ್ಜನ್ಯಗಳನ್ನು ತಡೆಯುವಲ್ಲಿ ಸರಕಾರ ವಿಫಲವಾಗಿದೆ ಎಂದರು.

ಇದನ್ನೂ ಓದಿ: ಕಲಬುರಗಿ ಪೇಟೆ ಧಾರಣೆ

ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳಾಗಿ ಮಲ್ಲಮ್ಮ ಜಿಡಾಗ (ಅಧ್ಯಕ್ಷೆ), ಸುಗಂಧ ಮಾವಿನಕರ (ಕಾರ್ಯದರ್ಶಿ), ಶಶಿಕಲಾ ಪಾಟೀಲ್ (ಖಜಾಂಚಿ) ಹಾಗೂ ಸದಸ್ಯರು ಸೇರಿದಂತೆ 22 ಜನರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷತೆಯನ್ನು ಸುಮಂಗಲ ವಹಿಸಿದ್ದರು. ಸಂಘಟನೆ ಕಾರ್ಯದರ್ಶಿ ಸುಗಂಧ ನಿರೂಪಿಸಿದರು. ಕಲ್ಯಾಣಿ ವಂದಿಸಿದರು.

ಮುಖ್ಯ ಅತಿಥಿ : ಡಾ ಪ್ರಭು ಖಾನಾಪುರೆ, ಕೆ. ನಿಲಾ, ಡಾ. ರಮೇಶ ಮಾಡ್ಯಾಳಕರ್, ರಾಜಮತಿ ಸಿ ಐ ಟಿ ಯು ಮುಖಂಡರು.ಸುಮಂಗಲ ಆಳಂದ ತಾಲೂಕು ಅಧ್ಯಕ್ಷರು, ಆಳಂದ ತಾಲೂಕು ಉಪಾಧ್ಯಕ್ಷರು ಮಲ್ಲಮ್ಮ, ಕೆ ಪಿ ಆರ್ ಎಸ್ ಪಾಂಡುರಂಗ ಮಾವಿನಕರ,ಶಶಿಕಲಾ ಕಡಗಂಚಿ, ಜಿಡಗಾದ ಗ್ರಾಮಸ್ಥರು ಭಾಗವಹಿಸಿದ್ದರು.

ಇದನ್ನೂ ಓದಿ: ದಿ ಸಿದ್ದಣ್ಣ ರಾಜವಾಳ ಆದರ್ಶ ವ್ಯಕ್ತಿ ಯಾಗಿದ್ದರು: ಡಾ. ಅಜಯ್ ಸಿಂಗ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here