ಕಲಬುರಗಿ: ಜಿಲ್ಲೆಯ ಜೇವರ್ಗಿ ತಾಲೂಕಿನ ನಾಗಪ್ಪ ಕಟ್ಟಿಮನಿ ಅತೀವ ಬಡತನದಲ್ಲಿಯೇ ಮೂರು ಗಂಡು ಮಕ್ಕಳು ಮೂರು ಹೆಣ್ಣು ಮಕ್ಕಳ ತಂದೆ. ಮನೆಯಲ್ಲಿ ಬಡತನವಿದ್ದರು ಮಕ್ಕಳನ್ನು ಓದಿಸಲೇಬೇಕು ಎಂಬ ಹಠದಿಂದ, ಅವರ ಕೊನೆಯ ಮಗಳಾದ ಕೀರ್ತಿಯನ್ನು ಓದಿಸಿ, ಇಂದು ಹತ್ತನೇಯ ತರಗತಿಯ ಫಲಿತಾಂಶದಲ್ಲಿ ಶೇ. ೮೭ ಪ್ರತಿಶತ ಪಾಸಾಗುವ ಮೂಲಕ ಮನೆಯ ಕೆಲಸಗಳನ್ನು ಮಾಡುತ್ತಲೇ ೧೦ನೇ ತರಗತಿಯಲ್ಲಿ ೮೭% ಪಾಸಾಗುವ ಮೂಲಕ ಬಡವನ ಮನೆಗೆ ಕೀರ್ತಿ ಶ್ರೇಯಸ್ಸು ತಂದಿದ್ದಾಳೆ.
ಹೆಣ್ಣು ಮಕ್ಕಳೇಕೆ ಶಾಲೆಯನ್ನು ಕಲಿಯಬೇಕು ಎಂಬ ಮಾತಿತ್ತು, ಇದೀಗ ಬದಲಾದ ಕಾಲಘಟ್ಟಕ್ಕೆ ತಕ್ಕಂತೆ, ನಾಗಪ್ಪ ಇವರು ಮಗಳಿಗೆ ಶಾಲೆ ಬಿಡಿಸದೆ ಓದಿಸಿದ್ದಾರೆ. ಮನೆಯು ದೊಡ್ಡ ಕುಟುಂಬ ಹೊಲ ಹಾಗೂ ಮನೆಯ ಎರಡೂ ಕೆಲಸಗಳನ್ನು ಮಾಡಲೇಬೇಕಾದ ಅನಿವಾರ್ಯತೆಯಿದೆ. ಕೀರ್ತಿ ಶಾಲೆಯ ಜೊತೆಗೆ ಮನೆಯಲ್ಲಿ ಕೆಲಸಗಳನ್ನು ಮಾಡುತ್ತಲೇ ಓದಿದವಳು, ಕೆಲವೊಮ್ಮೆ ಮನೆಯಲ್ಲಿ ಕರೆಂಟ್ ಇಲ್ಲವಾದಲ್ಲಿ ಮೇಣದ ಬತ್ತಿಯ ಬೆಳಕಿನಲ್ಲಿ ಓದಿದವಳು.
ಕೀರ್ತಿ ತಂದೆ ನಾಗಪ್ಪ ತಾಯಿ ಮಾಹಾದೇವಿ ಜೇವರ್ಗಿ ತಾಲೂಕಿನ ಕೋಳಕೂರು ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಓದಿ ಇಂದು ೮೭% ಪಡೆಯುವ ಮೂಲಕ ಗ್ರಾಮೀಣ ಭಾಗದಿಂದ ಉತ್ತಮ ಸಾಧನೆ ಮಾಡಿದ್ದಾಳೆ.
ಕೀರ್ತಿ ಮಾತಿನಲ್ಲಿ ಓದಿನಲ್ಲಿ ಚತುರೆ, ಜೀವನದಲ್ಲಿ ಹೆಣ್ಣು ಅಬಲೇಯಲ್ಲ ಎಂಬುವುದರ ಮೇಲೆ ಬಲವಾದ ನಂಬಿಕೆಯಿಟ್ಟ ಹುಡುಗಿ ಎಷ್ಟೇ ಕಷ್ಟಗಳು ಬಂದರು ಚನ್ನಾಗಿ ಓದಿ ಮುಂದೆ ವೈದ್ಯಳಾಗಬೇಕೆಂದು ಕನಸಿಟ್ಟುಕೊಂಡ ವಿದ್ಯಾರ್ಥಿ ಅವಳ ಕನಿಸಿಗೆ ಮೊದಲ ಮೆಟ್ಟಿಲು ಎನ್ನುವಂತೆ ತನ್ನ ಹತ್ತನೇಯ ತರಗತಿಯ ಫಲಿತಾಂಶದಲ್ಲಿ ಪಾಸಾಗಿದ್ದಾಳೆ.
ಅವಳ ಈ ಸಾಧನೆಗೆ ತಂದೆ ತಾಯಿ ಅಣ್ಣ ಅಕ್ಕಂದಿರು ಮಾವಂದಿರು ಹಾಗೂ ಶಾಲೆಯ ಮುಖ್ಯ ಗುರುಗಳು ಶಿಕ್ಷಕರು ಸಂತೋಷ ವ್ಯಕ್ತಪಡಿಸಿದ್ದಾರೆ.