ಯಾದಗಿರ: ಸುರಪುರ ತಾಲೂಕಿನ ಯಾಳಗಿ ಗ್ರಾಮದ ಅಲೆಮಾರಿ ಹೆಳವ ಸಮುದಾಯದ ವಿದ್ಯಾರ್ಥಿನಿಯರಾದ ರಾಜಶ್ರೀ ಮಡಿವಾಳಪ್ಪ ಹೆಳವರ (93.44%), ಭಾಗ್ಯಶ್ರೀ ಯಲ್ಲಪ್ಪ ಹೆಳವರ (92.48%) ಹಾಗೂ ರಕ್ಷೀತಾ ದೇವಪ್ಪ ಹೆಳವರ (88.96%) ಅವರು ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಅಗ್ರ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಅಲೆಮಾರಿ ಹೆಳವ ಸಮುದಾಯದ ಕೀರ್ತಿ ಹೆಚ್ಚಿಸಿದ್ದಕ್ಕಾಗಿ ಅಖಿಲ ಕರ್ನಾಟಕ ಹೆಳವ ಸಮಾಜದ ರಾಜ್ಯ ನಿರ್ದೇಶಕ ಬಸವರಾಜ ಹೆಳವರ ಯಾಳಗಿ ಹಾಗೂ ಸಮಾಜದ ಮುಖಂಡರು ಅಭಿನಂದನೆಗಳನ್ನು ಸಲ್ಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.