ಕಲಬುರಗಿ: ನಗರದ ಫಿರದೋಸ್ ಕಾಲೋನಿಯಲ್ಲಿ ಎರಡು ವರ್ಷದ ಮಗು ಮುಜಮ್ಮಿಲ್ ನನ್ನು ಮರಳಿನಲ್ಲಿ ಮುಚ್ಚಿಹಾಕಿ ಬರ್ಬರವಾಗಿ ಕೊಲೆ ಮಾಡಿರುವ ಆರೋಪಿಗಳನ್ನು ಆರು ತಿಂಗಳು ಕಳೆದರು ಬಂಧಿಸಿಲ್ಲ ಎಂದು ಆರೋಪಿಸಿ ಮೃತ ಮಗುವಿನ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ಸೋಮವಾರ ಕಲಬುರಗಿ ಉತ್ತರ ಮತಕ್ಷೇತ್ರದ ಶಾಸಕಿ ಕನೀಜ್ ಫಾತೀಮಾ ಅವರ ಮನೆ ಮುಂದಿದೆ ಪ್ರತಿಭಟನೆ ನಡೆಸಿದರು.
ಜಿಲಾನಾಬಾದ್ ಇತ್ತೇಹಾದ್ ಕಮ್ಮಿಟಿಯ ನೌಶಾದ್ ಅಲಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ 6 ತಿಂಗಳು ಕಳೆದರು ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ. ಪ್ರಕರಣ ಉನ್ನತ ತನಿಖೆಗೆ ಒತ್ತಾಯಿಸುವಂತೆ ಶಾಸಕ ಮನೆಗೆ ಮುತ್ತಿಗೆ ಹಾಕಿ ಧರಣಿ ನಡೆಸಿದರು.
ಮೃತ ಬಾಲಕ ಮುಜಮ್ಮಿಲ್ ಸಾವಿಗೆ ಕಾರಣ ಮತ್ತು ಕೊಲೆ ಮಾಡಿರುವ ಆರೋಪಿಗಳ ಪತೆ ಹಚ್ಚಿ ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕೆಂದು ನೂರಾರು ಹೋರಾಟ ನಿರತರು ಆಗ್ರಹಿಸಿದರು.