ಕಲಬುರಗಿ; ಬ್ಯಾಕ್ಟೀರಿಯಾ ಸೋಂಕಿನಿಂದ ಮೆದುಳಿನಲ್ಲಿ ಕಿವು ತುಂಬಿಕೊಂಡು ಅರೆ ಪ್ರಜ್ಞೆ ಸ್ಥಿತಿಯಲ್ಲಿದ ೧೮ ತಿಂಗಳ ಮಗುವಿನ ಯಶಸ್ವಿ ಮೆದುಳಿನ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಮಗುವಿನ ಪ್ರಾಣ ಉಳಿಸಿದ ಅದ್ಭುತ ಕಾರ್ಯ ಮಣೂರು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಮಾಡಿದ್ದಾರೆ.
ಇಲ್ಲಿನ ಹುಮಾನಾಬಾದ್ ರಿಂಗ್ ರಸ್ತೆಯ ಗಣೇಶ ನಗರದಲ್ಲಿರುವ ಮಣ್ಣೂರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ, ಆಸ್ಪತ್ರೆಯ ವೈದ್ಯರಾದ ಡಾ. ಫಾರೂಕ್ ಮಣ್ಣೂರ, ನ್ಯೂರೋ ಸರ್ಜನ್ ಡಾ. ಶಶಾಂಕ್ ಸಂಗೊಳ್ಳಿ ಈ ಕುರಿತು ಮಾಹಿತಿ ನೀಡಿದರು.
ಬಸವಕಲ್ಯಾಣ ತಾಲೂಕಿನ ನಾರಾಯಣ ಪೂರ್ ತಾಂಡಾ, ರಾಮು ಜಾಧವ್ ಅವರ ೧೮ ತಿಂಗಳ ಮಗಳಾದ ರಿಯಾ ಜಾಧವ್ ಅವರನ್ನು ಮೇ. ೧೯ರಂದು ಮಣೂರು ಆಸ್ಪತ್ರೆಗೆ ಸೇರಿಸಿದ್ದಾಗ ಮಗು ಅರೆ ಪ್ರಜ್ಞೆ ಸ್ಥಿತಿಯಲ್ಲಿ ಇತ್ತು. ಮಗುವಿಗೆ ಸ್ಕ್ಯಾನಿಂಗ್ ಮಾಡಿಸಿದಾಗ ಮೆದುಳಿನಲ್ಲಿ ಕಿವು ತುಂಬಿಕೊಂಡಿರುವುದು ಪತ್ತೆಯಾಯಿತು. ಈ ಸಂದರ್ಭದಲ್ಲಿ ಮಗುವಿನ ಸ್ಥಿತಿ ಗಂಭೀರವಾಗಿತ್ತು. ಆದರೂ ನಮ್ಮ ವೈದ್ಯರ ತಂಡದ ಸತತ ಆರು ಗಂಟೆಗಳ ಕಾಲ ನಿರಂತರ ಶಸ್ತ್ರ ಚಿಕಿತ್ಸೆ ಮೂಲಕ ಮಗುವನ್ನು ಗುಣಪಡಿಸಲಾಗಿದೆ ಎಂದು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯ, ಡಾ. ಶಶಾಂಕ ಸಂಗೊಳ್ಳಿ ತಿಳಿಸಿದರು.
ಮಗು ಆಸ್ಪತ್ರೆಗೆ ದಾಖಲಾದ ಕೇವಲ ಎರಡು ಗಂಟೆಯಲ್ಲಿ ಶಸ್ತ್ರ ಚಿಕಿತ್ಸೆ ಕೋಣೆಗೆ ಕೊಂಡೊಯಲಾಯಿತು, ಈ ವೇಳೆ ಮಗುವಿಗೆ ಎರಡು ಬಾರಿ ಪಿಟ್ಸ್ ಸಹ ಆಗಿತು. ಆದರೂ ನಮ್ಮ ತಂಡ ನಿರಂತರ ಪ್ರಯತ್ನ ದಿಂದ ಮಗುವಿನ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮಾಡಲಾಯಿತು. ಕೇವಲ ೨೪ ಗಂಟೆಯಲೇ ಕೋಮಾ ಸ್ಥಿತಿ ಯಿಂದ ಹೊರ ತರಲಾಯಿತು. ಈಗ ೫ ದಿನಗಳಲ್ಲೆ ಸಂಪೂರ್ಣ ಗುಣ ಮುಖರಾಗಿ ಇಂದು ಆಸ್ಪತ್ರೆ ಯಿಂದ ಬಿಡುಗಡೆ ಮಾಡಲಾಗುತ್ತಿದೆ ಎಂದು ಹೇಳಿದರು.
ಈ ಮಗುವಿನದು ಅಪರೂಪದ ಪ್ರಕರಣವಾಗಿತ್ತು. ಮಗುವಿನ ಸ್ಥಿತಿ ಗಂಭೀರವಾಗಿರುವುದರಿಂದ ಇಂತಹ ಸ್ಥಿತಿಯಲ್ಲಿ ತುಂಬ ಕಮ್ಮಿ ಯಶಸ್ವಿ ಚಿಕಿತ್ಸೆ ಕಾಣಬಹುದು. ಇಂತಹ ಚಿಕಿತ್ಸೆ ದೊಡ್ಡ ದೊಡ್ಡ ಆಸ್ಪತ್ರೆಯಲ್ಲಿ ನಡೆಯುತ್ತವೆ. ಆದರೆ ನಮ್ಮ ವೈದ್ಯರ ತಂಡ ಈ ಸನ್ನಿವೇಶವನ್ನು ಸವಾಲಾಗಿ ಸ್ವೀಕರಿಸಿ, ನಿರಂತರ ಪ್ರಯತ್ನ ದಿಂದ ಯಶಸ್ವಿ ಚಿಕಿತ್ಸೆ ನೀಡಿದ್ದಾರೆ ಎಂದು ಆಸ್ಪತ್ರೆ ಸಂಸ್ಥಾಪಕ ವೈದ್ಯರಾದ ಡಾ. ಫಾರುಕ್ ಮಣೂರ ಹೇಳಿದರು.
ಈ ಸಂದರ್ಭದಲ್ಲಿ ಅರವಳಿಕೆ ತಜ್ಞರಾದ ಡಾ. ಅನಿಲ ಎಸ್.ಕೆ, ಡಾ. ಸಾಫಿಯಾ ತರನ್ನುಮ್, ಮಕ್ಕಳ ತಜ್ಞರಾದ ಡಾ. ಜುಬೇರ್ ಬೇಗ್ ಸೇರಿದಂತೆ ಆಸ್ಪತ್ರೆ ಸಿಬ್ಬಂದಿಗಳು ಇದ್ದರು.