ಕಲಬುರಗಿ: ಮಾದಿಗ ಸಮಾಜದ ಮುಖಂಡ ರಾಜು ವಾಡೇಕರ ಅವರನ್ನು ಎಂಎಲ್ಸಿಯನ್ನಾಗಿ ಆಯ್ಕೆ ಮಾಡಬೇಕು ಎಂದು ಜಿಲ್ಲಾ ಮಾದಿಗ ಸಮಾಜ ಮುಖಂಡರು ಬಿಜೆಪಿ ಹೈಕಮಾಂಡಗೆ ಒತ್ತಾಯಿಸಿದರು.
ಈ ವೇಳೆ ನಗರದ ಪತ್ರಿಕಾ ಭವನದಲ್ಲಿ ಜಿಲ್ಲಾ ಮಾದಿಗ ಸಮಾಜ ಮುಖಂಡ ಮಂಜುನಾಥ ನಾಲವಾರಕರ್ ಮಾತನಾಡಿ, ಮಾದಿಗ ಸಮಾಜದ ಮುಖಂಡ ರಾಜು ವಾಡೇಕಾರ್ ಅವರು ಸುಮಾರು ೨೮ ರಿಂದ ೩೦ ವರ್ಷಗಳಿಂದ ಭಾರತೀಯ ಜನತಾ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ಕೆಲಸ ಮಾಡಿದ್ದಾರೆ. ಹೀಗಾಗಿ ಮಾದಿಗ ಸಮುದಾಯದಲ್ಲಿ ಬಿಜೆಪಿ ಪಕ್ಷದದಿಂದ ಅವರಿಗೆ ಎಂಎಲ್ಸಿಯನ್ನಾಗಿ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
ಈಗಾಗಲೇ ಪಕ್ಷದ ನೀಡಿದ ಜವಾಬ್ದಾರಿಗಳಾದ ಎಸ್.ಸಿ.ಮೋರ್ಚಾ ಅಧ್ಯಕ್ಷರಾಗಿ, ೨ ಬಾರಿ ಉಪಾಧ್ಯಕ್ಷರಾಗಿ, ೨ ಬಾರಿ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷ ಸಂಘಟನೆ ಮಾಡಿದ್ದಾರೆ. ಹಾಗೇ ವಿಧಾನ ಸಭೆ, ಲೋಕಸಭೆ ಉಪ ಚುನಾವಣೆಗಳಲ್ಲಿ ಪಕ್ಷ ನೀಡಿದ ಜವಾಬ್ದಾರಿಯನ್ನು ನಿಭಾಯಿಸುತ್ತಾ ಮೆಚ್ಚುಗೆಯನ್ನು ಪಡೆದಿದ್ದಾರೆ ಎಂದು ತಿಳಿಸಿದರು.
ಗ್ರಾಮೀಣ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಬಸವರಾಜ ಮತ್ತಿಮೂಡ್ ಅವರ ಗೆಲುವಿಗಾಗಿ ಶ್ರಮಿಸಿದ್ದಾರೆ. ಹೀಗಾಗಿ ಪಕ್ಷ ನಿಷ್ಠೆಯನ್ನು ಗುರುತಿಸಿ ಅವರುನ್ನು ವಿಧಾನ ಪರಿಷತ್ ನಾಮ ನಿರ್ದೇಶನ ಸದಸ್ಯರನ್ನಾಗಿ ಆಯ್ಕೆ ಮಾಡಬೇಕು ಎಂದು ರಾಜ್ಯದ ಮುಖ್ಯ ಮಂತ್ರಿಗಳಲ್ಲಿ, ರಾಜ್ಯಾಧ್ಯಕ್ಷ ಮತ್ತು ಪಕ್ಷದ ವರಿಷ್ಠರಲ್ಲಿ ಒತ್ತಾಯಿಸಿದರು.