ಉದ್ಯೋಗ ಖಾತ್ರೆ ಯೋಜನೆಯಡಿ ಕೆಲಸ ನೀಡಲು ಆಗ್ರಹಿಸಿ ಪ್ರತಿಭಟನೆ

0
120
  • ಮನವಿ ಪತ್ರ ಸ್ವೀಕರಿಸಲು ಬಾರದ ಅಧಿಕಾರಿ

ಕಲಬುರಗಿ: ಹನುಗುಂಟ ಗ್ರಾಮದ ಎಲ್ಲಾ ಜನಗಳಿಗೆ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಸಮರ್ಪಕವಾಗಿ ಉದ್ಯೋಗ ನೀಡಲು ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಂಡಿತ್ತು.  ಆದರೆ ಸುಮಾರು ೨ ಗಂಟೆಗಳ ಕಾಲ ಪಂಚಾಯತಿ ಎದುರುಗಡೆ ಜನಗಳು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಎ.ಐ.ಕೆ.ಕೆ.ಎಂ.ಎಸ್ ತಾಲೂಕ ಕಾರ್ಯದರ್ಶಿ ರಾಜೇಂದ್ರ ಅತನೂರ ಮಾತನಾಡಿಯಾವ ಒಬ್ಬ ಅಧಿಕಾರಿ ಕೂಡ ಬಂದು ವಿಚಾರಿಸದೆ ಇರುವುದು ನೋಡಿದರೆ ಅಧಿಕಾರಿಗಳ ಎಷ್ಟು ನೀರ್ಲಕ್ಷೆದಿಂದ್ದಾರೆ  ಎಂದು ಹೇಳಿದರು.`

Contact Your\'s Advertisement; 9902492681

ಗ್ರಾಮದಲ್ಲಿ ನೂರಾರು ಕುಟುಂಬಗಳು ವಾಸಿಸುತ್ತಿದ್ದು ಇಲ್ಲಿನ ಬಹುತೇಕ ಜನರು ಹೊಲಗಳಲ್ಲಿ ಕೂಲಿ ಮಾಡಿ ಜೀವನ ನಡೆಸುತ್ತಿದ್ದಾರೆ. ರಾಶಿ ಮುಗಿದ ನಂತರ ಹಳ್ಳಿಗಳಲ್ಲಿ ಯಾವುದೇ ಕೆಲಸ ಇರುವುದಿಲ್ಲ. ಹಳ್ಳಿಯ ಜನಗಳು ಜೀವನೋಪಾಯಕ್ಕೆ  ನಗರಗಳಿಗೆ ಗುಳೆ ಹೋಗುತ್ತಾರೆ . ಇದನ್ನು ತಪ್ಪಿಸಲೆಂದೇ ಕೇಂದ್ರ ಸರ್ಕಾರ ಹಳ್ಳಿಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಅಲ್ಲಿನ ಜನಗಳಿಗೆ ಕೆಲಸ ನೀಡಿ ಹಳ್ಳಿಗಳಲ್ಲಿ ಬದುಕಲು ಅನುಕೂಲ ಮಾಡಿದೆ ಎಂದು ತಿಳಿಸಿದರು.

ಹೊನಗುಂಟಾ ಗ್ರಾಮದಲಿ ಸಮರ್ಪಕವಾಗಿ ಎಲ್ಲಾ ಜನಗಳಿಗೆ ಕೆಲಸ ನೀಡುತ್ತಿಲ್ಲ. ಜನಗಳು ಹಲವಾರು ಬಾರಿ ಅಧಿಕಾರಿಗಳಿಗೆ ಭೇಟಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.  ಈ ಕೂಡಲೇ ಮೇಲಾಧಿಕಾರಿಗಳು ನಡೆಯುತ್ತಿರುವ ಅವ್ಯವಹಾರವನ್ನು ನಿಲ್ಲಿಸಿ, ಎಲ್ಲಾ ಜನರಿಗೆ ಸಮರ್ಪಕವಾಗಿ ಉದ್ಯೋಗಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ಒದಗಿಸಬೇಕು ಮತ್ತು ಸರಿಯಾಗಿ ವೇತನ ನೀಡಬೇಕು ಎಂದು ಅಖಿಲ ಭಾರತ ರೈತರ ಕೃಷಿ ಕಾರ್ಮಿಕ ಸಂಘಟನೆ ಆಗ್ರಹಿಸಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here