ಜೇವರ್ಗಿ: ಮಳೆ ಗಾಳಿಯಿಂದ ದೊಡ್ಡ ,ದೊಡ್ಡ ಗಿಡ-ಮರಗಳು ಹೊಲ ಗದ್ದೆಯಲ್ಲಿ ಬುಡ ಸಮೇತ ಕಿತ್ತು ಬಿದ್ದಿವೆ.
ಜೇವರ್ಗಿ ತಾಲೂಕ ಮಾವನೂರ ಗ್ರಾಮದಲ್ಲಿ ಭಾನುವಾರ 4:20 ರಿಂದ ಆರಂಭವಾದ ಗಾಳಿ ಮಳೆ 5ಗಂಟೆಯ ವರೆಗೆ ಅನಾಹುತ ಉಂಟುಮಾಡಿದೆ .ಸತತವಾಗಿ ಮಳೆಗಿಂತ ಗಾಳಿ ಹೆಚ್ಚು ಬಿಸಿದ ಪರಿಣಾಮವಾಗಿ ಗ್ರಾಮದ ಬಡ ಕುಟುಂಬಗಳ ಮನೆ ಮೇಲೆ ಬೃಹತ್ ಗಾತ್ರದ ಮರ ಅಪಾರ ನಷ್ಟ ಉಂಟುಮಾಡಿದೆ.
ಮನೆಗಳು ಮರ ಉರುಳಿ ಬಿದ್ದ ಪರಿಣಾಮ ಪೂರ್ತಿ ಬಿದ್ದು ಶೀತಲ ಗೊಂಡಿವೆ ,ಇದರಿಂದ ಮನೆ ಕಳೆದುಕೊಂಡ ಕುಟುಂಬ ಬೀದಿಗೆ ಬಿದ್ದಿದೆ. ಮತ್ತು ಬಹಳಷ್ಟು ಮನೆಗಳ ಮೇಲಿರುವ ಟೀನ್ (ಪತ್ರಾಸ್) ಗಳು ಗಾಳಿ ರಭಸಕ್ಕೆ ಹಾರಿಹೋಗಿವೆ.
ಮಾವನೂರು ಗ್ರಾಮದಲ್ಲಿ ಮಳೆಗಿಂತ ಗಾಳಿ ಅಬ್ಬರವೇ ಜೋರಾಗಿದ್ದರಿಂದ ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ. ಇದರಿಂದ ಮಾವನೂರ ಗ್ರಾಮಕ್ಕೆ ನಿನ್ನೆಯಿಂದ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಈ ಸಂದರ್ಭದಲ್ಲಿ ಮನೆ ಕಳೆದುಕೊಂಡ ಮಹಿಳೆಯರು ಕಣ್ಣೀರು ಹಾಕುತ್ತಾ ಸಹಾಯ ಮಾಡುವಂತೆ ಸಂಬಂಧ ಪಟ್ಟು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.