ಕಲಬುರಗಿ: ಪಿಡಿಎ ತಾಂತ್ರಿಕ ಮಹಾವಿದ್ಯಾಲಯದ ಸೆರಾಮಿಕ್ ಮತ್ತು ಸಿಮೆಂಟ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಯಾದ ವಿಶಾಲ ಆಚಾರ್ಯ ಒಬ್ಬನೇ ಜೆಎಸ್‌ಡಬ್ಲ್ಯು,(ಜಿಂದಾಲ್ ಸ್ಟೀಲ್) ಪ್ರಿಸಮ್ ಸಿಮೆಂಟ್, ಗೋಲ್ಡ ಪ್ಲಸ್ ಗ್ಲಾಸ್ ಕಂಪನಿ ಈ ಮೂರು ಕಂಪನಿಗೆ ಆಯ್ಕೆಯಾಗಿದ್ದಾನೆ. ಇವರ ಜೊತೆಗೆ ದುಬೈ ಮೂಲದ ಆರ್.ಎ.ಕೆ ಸೆರಾಮಿಕ್ಸ ಕಂಪನಿಗೆ ಚನ್ನವೀರ ಮಚೆಟ್ಟಿ, ಬಿ.ಆರ್. ನಂಜುಂಡ ಸ್ವಾಮಿ, ವರುಣ ನಂದಿಕೋಲ್, ವಿಜಯಕುಮಾರ ಕಣ್ಣಿ ಮತ್ತು ಕೇಶವ ಎಲ್ ನಾಯಕರೊಂದಿಗೆ, ಐದು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಗೋಲ್ಡ್ ಪ್ಲಸ್ ಗ್ಲಾಸ್ ಕಂಪನಿಗೆ ಹರ್ಷಿತ ಮ್ಯಾಗೋಟಿ ಅಯ್ಕೆಯಾಗಿದ್ದಾನೆ. ಒಟ್ಟು ಏಳು ಸೆರಾಮಿಕ್ ವಿದ್ಯಾರ್ಥಿಗಳು ವಿವಿಧ ಕಂಪನಿಗಳಿಗೆ ಆಯ್ಕೆಯಾಗಿರುತ್ತಾರೆ.
ವಿದ್ಯಾರ್ಥಿಗಳ ಆಯ್ಕೆಗೆ ಹೈ.ಶಿ.ಸಂಸ್ಥೆಯ ಅಧ್ಯಕ್ಷರಾದ ಡಾ. ಭೀಮಾಶಂಕರ.ಸಿ.ಬಿಲಗುಂದಿ, ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಜಂಟಿಕಾರ್ಯದರ್ಶಿಗಳು, ಆಡಳಿತ ಮಂಡಳಿಯ ಸದಸ್ಯರು, ಹಾಗೂ ಕಾಲೇಜಿನ ಪ್ರಾಚಾರ್ಯರು, ಉಪ ಪ್ರಾಚಾರ್ಯರು, ತರಬೇತಿ & ನೇಮಕಾತಿ ವಿಭಾಗದ ಅಧಿಕಾರಿಗಳು, ಸೆರಾಮಿಕ್ ವಿಭಾಗದ ಮುಖ್ಯಸ್ಥರು ಮತ್ತು ಪ್ರಾಧ್ಯಾಪಕರು ಹರ್ಷ ವ್ಯಕ್ತಪಡಿಸಿದ್ದಾರೆ.