ಕಲಬುರಗಿ: ಕಳೆದ ೨೦ ರಿಂದ ೨೫ ವರ್ಷದವರೆಗೆ ನಿರಂತರವಾಗಿ ಸೇವೆಸಲ್ಲಿಸಿದ ವೃತ್ತಿ ಶಿಕ್ಷಣ ಇಲಾಖೆಯಿಂದ ವಿವಿಧ ಇಲಾಖೆಗಳಿಗೆ ವಿಲೀನಗೊಂಡ ಸಿಬ್ಬಂದಿಯವರಿಗೆ ಪಿಂಚಣಿ ಸೇರಿ ಇತರೆ ಸೌಲಭ್ಯ ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಕಲ್ಯಾಣ ಕರ್ನಾಟಕ ವೃತ್ತಿ ಶಿಕ್ಷಣ (ಜೆಓಸಿ) ಇಲಾಖೆಯಿಂದ ವಿವಿಧ ಇಲಾಖೆಗಳಲ್ಲಿ ವಿಲೀನಗೊಂಡ ನೌಕರರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸೇವೆಗೆ ಸೇರಿದ ದಿನಾಂಕವನ್ನು ಪರಿಗಣಿಸಿ ಪಿಂಚಣಿ ಸೇರಿ ಇತರೆ ಸೌಲಭ್ಯ ವಿಸ್ತರಿಸಲಿ, ಆದರೆ ವಯೋನಿವೃತ್ತಿ ಅಂಚಿನಲ್ಲಿರುವ ಕೆಲ ಸಿಬ್ಬಂದಿ ಸವಲತ್ತು ನೀಡುತ್ತಿಲ್ಲ. ಕೆಲ ಸಿಬ್ಬಂದಿ ಅವಧಿಯಲ್ಲಿಯೇ ಮರಣ ಹೊಂದಿದ ಕುಟುಂಬದವರ ಕಥೆ ಕೇಳಿದರೆ ಎಲ್ಲಾ ಸಿಬ್ಬಂದಿಯವರು ಭಯಪಡುವಂತಾಗಿದೆ. ಕಾಯಂ ಮಾಡಿದ ಸರಕಾರ ಸೇವೆಗೆ ಸೇರಿದ ದಿನಾಂಕ ಪರಿಗಣಿಸಿ ಪಿಂಚಣಿ ಆದರೂ ಅನುಕೂಲ ಕಲ್ಪಿಸಿಕೊಡಬೇಕು. ಸೇವಾವಧಿಯಲ್ಲಿ ಮರಣ ಹೊಂದಿದ ನಂತರ ಅವರಿಗೆ ಯಾವುದೇ ಸೌಲಭ್ಯ ಸಿಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಇದನ್ನೂ ಓದಿ: ವೃತಿ ಶಿಕ್ಷಣ ಇಲಾಖೇಯ ಸಿಬ್ಬಂದಿ ಬೇಡಿಕೆ ಈಡೇರಿಸುವಂತೆ ಜಿಲ್ಲಾಧಿಕಾರಿ ಮುಖಾಂತರ ಸಿಎಂಗೆ ಮನವಿ
ನಂತರ ದಿವಂಗತ ಸಾಯಿಬಣ್ ಎಂ. ಹುಲಿಮನಿ ಅವರ ಪತ್ನಿ ಹಾಗೂ ಎರಡು ಪುತ್ರರು, ಓರ್ವ ಪುತ್ರಿ ಸೇರಿಕೊಂಡು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಈ ಪ್ರತಿಭಟನೆಯಲ್ಲಿ ಮಲ್ಲಿನಾಥ ಕಳಸಕರ್, ಗುರುರಾಜ ಕುಲಕರ್ಣಿ, ಶರಣಪ್ಪ ಗುಡ್ಡ, ಗಂಗಾಧರ ಸ್ವಾಮಿ, ಪ್ರಮೋದ್ ಕುಲಕರ್ಣಿ ಬೀದರ್, ನೀಲಕಂಠಸ್ವಾಮಿ ಬೀದರ್, ಅಶೋಕ್ ಮೂಲಗೆ, ಜಗನ್ನಾಥ ಮೋದಿ, ಜಿವಾಜಿ, ಲಲಿತಾ, ಶಾಂತಕುಮಾರಿ ಮತ್ತಿತರರಿದ್ದರು.
ಇದನ್ನೂ ಓದಿ: ಕ್ಯಾಂಪಸ್ ಸಂದರ್ಶನದಲ್ಲಿ ಸೆರಾಮಿಕ್ ಮತ್ತು ಸಿಮೆಂಟ್ ವಿಭಾಗದ 7 ವಿದ್ಯಾರ್ಥಿಗಳು ಆಯ್ಕೆ