ಕಲಬುರಗಿ: ಪರಂಪರೆಯಿಂದಲೂ ಎಸ್.ಬಿ.ಪಾಟೀಲ ಮನೆತನವು ಸಮಾಜ ಸೇವೆಯ ಮೂಲಕ ಹೆಸರುವಾಸಿಯಾಗಿದ್ದು, ಇದೀಗ ಅವರ ಕುಡಿಯಾಗಿರುವ ಚಂದು ಪಾಟೀಲ ಸಮಾಜ ಸೇವೆಯ ಮುಖಾಂತರ ಧರ್ಮದ ಕಾರ್ಯ ಮಾಡುತ್ತಿದ್ದು, ಈ ಕಾರ್ಯವು ನಿರಂತರವಾಗಿ ನಡೆಯಲಿ, ನಿಮ್ಮ ಮನೆತನಕ್ಕೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವಧಿ ಹೇಳಿದರು.
ಅವರು ಕರ್ನಾಟಕ ನವಿಕರೀಸಬಹುದಾದ ಇಂಧನ ಅಭಿವೃದ್ದಿ ನಿಗಮ ಅಧ್ಯಕ್ಷರು ಬೆಂಗಳೂರ ಹಾಗೂ ಯುವ ಮುಖಂಡ ಚಂದು ಪಾಟೀಲ ಅವರ ೪೨ನೇ ಹುಟ್ಟು ಹಬ್ಬದ ಅಂಗವಾಗಿ ಎಸ್.ಬಿ.ಪಾಟೀಲ ಫ್ಯಾಕ್ಟರಿ ಕಪನೂರ ಏರಿಯಾದಲ್ಲಿ ನಡೆದ ೫೦೦೧ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿ, ಸಮಾಜಿಕ ಕಳಕಳಿಯಿರುವ ಕಾರ್ಯಕ್ರಮ ಮಾಡುವುದು ಅತಿ ದೊಡ್ಡ ವಿಷಯ ಎಂದರು. ಮನುಷ್ಯನ ಜೀವನ ಸಾರ್ಥಕವಾಗಬೇಕಾದರೆ ಮೂರು ವಿಷಯಗಳನ್ನು ಅರ್ಥಮಾಡಿಕೊಳ್ಳಬೇಕು. ಹುಟ್ಟು-ಸಾವು-ಬದುಕು ಈ ಮೂರು ಸಂಗತಿಗಳನ್ನು ಅರ್ತೈಸಿಕೊಂಡ ವ್ಯಕ್ತಿಯ ಜೀವನದಲ್ಲಿ ಕಷ್ಟ ಕಾರ್ಪಣ್ಯಗಳು ಎಂದಿಗೂ ಬರುವುದಿಲ್ಲ ಎಂದರು. ಯಾರು ಇತರರ ಕಣ್ಣಲಿ ನೀರು ಬರಿಸುತ್ತಾರೆ ಅದು ಅಧರ್ಮ ಇನ್ಯಾರ ಕಣ್ಣಲಿಯೂ ಸಹ ನೀರು ಬರದೇ ಹಾಗೇ ನೋಡಿಕೊಂಡು ಕಷ್ಟ ಕಾಲಕ್ಕೆ ಸಹಾಯವನ್ನು ಮಾಡುವುದೇ ನಿಜವಾದ ಧರ್ಮ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಕ್ರಾಸ್ ವೋಟಿಂಗ್ ಮಾಡಿಸಿದರೂ ಕಾಂಗ್ರೆಸ್ ಗೆಲ್ಲಲ್ಲ: ಹೆಚ್.ಡಿ.ಕುಮಾರಸ್ವಾಮಿ
ಗೌರಿಗಧ್ಯೆ ದತ್ತಾಶ್ರಮದ ಅವಧೂತ ಶ್ರೀ ವಿನಯ್ ಗುರುಜೀ ಮಾತನಾಡಿ, ೫೦೦೧ ಮುತೈದೆಯರಿಗೆ ಉಡಿ ತುಂಬುವ ಕಾಯಕ ನಿಜಕ್ಕೂ ಒಳ್ಳೆಯದ್ದು. ಇಂದಿನ ಬದಲಾದ ಕಾಲಘಟ್ಟದಲ್ಲಿ ಹುಟು ಹಬ್ಬಗಳನ್ನು ಜನರು ಕೇಕ ಕತ್ತರಿಸುವ ಮೂಲಕ ಪಾಶ್ಚಾತ್ಯ ಸಂಸ್ಕೃತಿ ಪದ್ದತೀಯಂತೆ ಆಚರಿಸಿಕೊಳ್ಳುತ್ತಾರೆ. ಆದರೆ ಚಂದು ಪಾಟೀಲ ಅವರು ೫೦೦೧ ತಾಯಂದಿರ ಉಡಿ ತುಂಬುವ ಮೂಲಕ ಆಚರಣೆ ಮಾಡಿದ್ದು, ಮಹಾನ್ ಕಾರ್ಯವೆಂದರು. ತಾಯಿ ಪೂಜೆ ಆಗಬೇಕೆ ವಿನಹ: ನಾಯಿ ಪೂಜೆ ಯಾಗಬಾರದು ಎಂದು ಹಿತನುಡಿ ಹೇಳಿದರು. ಗುರು ಪರಂಪರೆಯಿರುವ ಮನೆತನದಲ್ಲಿ ಸಂಸ್ಕ್ರತಿವಿರುತ್ತದೆ. ಹಣ ಇದ್ದ ಮನೆಯಲ್ಲಿ ಮದವಿರಬಾರದು ಎಂದ ಅವರು, ಕಲ್ಲು ದೇವರಿಗೆ ಆಹಾರ ನೀಡುವ ಬದಲು ಕಣ್ಣಿರು ಒರೆಸುವ ಕೆಲಸ ಈ ಪರಿವಾರದಿಂದಾಗಲಿ ಎಂದು ಹೇಳಿದರು. ಮಾತೋಶ್ರಿ ಡಾ. ದಾಕ್ಷಾಯಿಣಿ ಅಮ್ಮನವರು ಉಡಿ ತುಂಬುವ ಕಾರ್ಯಕ್ಕೆ ಚಾಲನೆ ನೀಡಿದರು.
ಇದನ್ನೂ ಓದಿ: ಅಲೆಮಾರಿ, ಅರೆ ಅಲೆಮಾರಿ ಜನರು ಸ್ವಾಭಿಮಾನದಿಂದ ಬದುಕಬೇಕು: ಕೆ.ರವೀಂದ್ರ ಶೆಟ್ಟಿ
ಪರಮ ಪೂಜ್ಯ ಜಗದ್ಗುರು ಶ್ರೀ. ಡಾ ಸಾರಂಗದರ ದೇಶಿಕೇಂದ್ರ ಮಗಳು ಅಂಬೈಲ್, ಶ್ರೀ ಜಗದ್ಗುರು ಶಿವಅಂಗೇಶ್ವರ ಸಂಸ್ಥಾನ ಮಠ, ಹಿರೇಸಾವಳಗಿ, ಡಾ. ಚನ್ನವೀರ ಶಿವಾಚಾರ್ಯರು ಸಂಸ್ಥಾನ ಹಿರೇಮಠ, ಹಾರಕೂಡ, ಶ್ರೀ ಮ. ನಿ. ಪ್ರ. ಸ್ವ. ಗುರುನಾಥ ಮಹಾಸ್ವಾಮಿಗಳು,ಡಾ. ಗುರುಪಾದಲಿಂಗ ಮಹಾಶಿವಯೋಗಿಗಳು ಬಬಲಾದ,ಶ್ರೀ ಷ. ಬ್ರ. ಡಾ. ಚನ್ನಮಲ್ಲ ಶಿವಾಚಾರ್ಯರು ಚನ್ನಮಲ್ಲೇಶ್ವರ ಮಠ ಬಡದಾಳ,ಶ್ರೀ ಷ. ಬ್ರ. ಸಿದ್ದರಾಮ ಶಿವಾಚಾರ್ಯರು ಸುಕ್ಷೇತ್ರ ಚಿಮಣಗೇರಾ, ತಾ. ಅಫಜಲಪೂರ,ಶ್ರೀ ಮ. ನಿ. ಪ್ರ. ಸ್ವ ಗುರುನಂಜೇಶ್ವರ ಮಹಾಸ್ವಾಮಿಗಳು, ಶ್ರೀ ಪ. ಪೂ ಅಪ್ಪಾರಾವ ದೇವಿ ಮುತ್ಯಾ ಕೊಲ್ಲಾಪುರ ಮಹಾಲಕ್ಷ್ಮೀ ಶಕ್ತಿಪೀಠ ಶ್ರೀನಿವಾಸ ಸರಡಗಿ,ವೀರಕ್ತಮಠ ಭರತನೂರ,ಶ್ರೀ ಷ. ಬ್ರ.ಸಿದ್ದಮಲ್ಲ ಶಿವಾಚಾರ್ಯರು ಚಿಕ್ಕಮಠ ಚಿಂಚನಸೂರು ಮತ್ತು ತೋಳನವಾಡಿ, ಶ್ರೀ ಷ. ಬ್ರ. ವೀರತಪ್ಪಸ್ವಿ ವೀರಭದ್ರ ಶಿವಾಚಾರ್ಯರು ಮಹಾಸ್ವಾಮಿಗಳು ಕಟ್ಟಮಠ, ಕಡಗಂಟೆ, ಶ್ರೀ ಷ. ಬ್ರ. ಡಾ. ರೇವಣಸಿದ್ದ ಶಿವಾಚಾರ್ಯರು ಚಿನ್ನದ ಕಂತಿ, ಚಿಕ್ಕವಿರೇಶ್ವರ ಮಠ ಶ್ರೀನಿವಾಸ ಸರಡಲ ತಾ.ಕಲಬುರಗಿ,ಶ್ರೀ ಷ. ಬ್ರ. ರೇಣುಕ ಶಿವಾಚಾರ್ಯರು ಸುಕ್ಷೇತ್ರ ದೇವಂತಣ ಸಂಸ್ಥಾನ ಹಿರೇಮಠ,ಶ್ರೀ ಪರಮ ಪೂಜ್ಯ ಶ್ರೀ ಷ. ಬ್ರ. ಅಭಿನವ ಸಿದ್ದಅಂಗ ಶಿವಾಚಾರ್ಯರು, ಶ್ರೀ ಮ. ನಿ. ಪ್ರ. ಅಭಿನವ ಶಿವಲಿಂಗ ಮಹಾಸ್ವಾಮಿಗಳು, ಶ್ರೀ ಷ. ಬ್ರ. ಸಿದ್ದಲಿಂಗ ಮಹಾಸ್ವಾಮಿಗಳು ಕರುಣೀಶ್ವರ ಮಠ, ಆಂದೋಲ, ಶ್ರೀ ಷ. ಬ್ರ.ಡಾ. ಗುರುಮೂರ್ತಿ ಶಿವಾಚಾರ್ಯರು ಪಾಳಾ, ಶ್ರೀ ಷ. ಬ್ರ. ಸುತ್ತೇಶ್ವರ ಶಿವಾಚಾರ್ಯರು ಹಿರೇಮಠ ಅಚಲೇರಾ, ಶ್ರೀ ಮ. ನಿ. ಪ್ರ. ಸ್ವ ಶಿವಾನಂದ ಮಹಾಸ್ವಾಮಿಗಳು, ಶಾಸಕ ರಾಜಕುಮಾರ ಪಾಟೀಲ ಸ್ವಾಗತಿಸಿದರು. ವೇದಿಕೆಯಲ್ಲಿ ಬಸವರಾಜ ಪಾಟೀಲ ಸೇಡಂ, ಮಾಲೀಕಯ್ಯಾ ಗುತ್ತೇದಾರ, ನಗರ ಬಿಜೆಪಿ ಅಧ್ಯಕ್ಷ ಸಿದ್ದಾಜೀ ಪಾಟೀಲ, ಶಿವರಾಜ ಪಾಟೀಲ ರದ್ದೆವಾಡಗಿ, ಉಮೇಶ ಪಾಟೀಲ, ಅಮರನಾಥ ಪಾಟೀಲ, ಶಶಿಕಲಾ ಟೆಂಗಳಿ,ದಯಾನಂದ ಧಾರವಾಡಕರ್, ಶರಣಪ್ಪಾ ತಳವಾರ,ಅಶೋಕ ಮಾನಕರ್, ಪಾಲಿಕೆ ಸದಸ್ಯರಾದ ಸಚಿನ ಕಡಗಂಚಿ, ಶಿವಾನಂದ ಪಿಸ್ತಿ, ಬಸವರಾಜ ಮುನ್ನೋಳ್ಳಿ, ಚನ್ನವೀರ ಲಿಂಗನವಾಡಿ, ಕೃಷ್ಣಾ ನಾಐಕ, ಸುನೀಲ ಬನಶೆಟ್ಟಿ,ಪ್ರಭುಲಿಂಗ ಹಾದಿಮನಿ, ಸುನೀಲ ಮಚ್ಚೆಟ್ಟಿ, ದಿಗಂಬರ ಮಾಗಣಗೇರಿ, ಪ್ರಿಯಾಂಕ ಭೋವಿ, ಮೇಘನಾ ಕಳಸಕರ್, ಶಾಂತಾಬಾಯಿ ಚನ್ನವೀರ ಛಪ್ಪರಬಂಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಇದನ್ನೂ ಓದಿ: ರೈತರ ಗಮನಕ್ಕೆ: ಪಿ.ಎಮ್. ಕಿಸಾನ್ ಯೋಜನೆ ಇ-ಕೆವೈಸಿಗೆ 31 ರವರೆಗೆ ಗಡುವು