ಕಲಬುರಗಿ: ಸುಭಾಶ್ಚಂದ್ರ ಪಾಟೀಲ ಸ್ಮಾರಕ ಜನ ಕಲ್ಯಾಣ ಟ್ರಸ್ಟ್ ವತಿಯಿಂದ ಗುರುವಾರ ಸಂಜೆ ನಗರದ ಸತ್ಯಂ ಪಿಯು ಕಾಲೇಜಿನ ಆವರಣದಲ್ಲಿ ಸಂಗೀತ ಸಂಭ್ರಮ ಕಾರ್ಯ ಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಗಂಗಮ್ಮ ನಾಲವಾರ ಮಾತನಾಡಿ ಸಂಗೀತ ಪ್ರತಿಯೊಬ್ಬ ಮನುಷ್ಯನಿಗೆ ಪ್ರಿಯವಾದದ್ದು, ಸಂಗೀತ ಆಲಿಸುವುದರ ಮೂಲಕ ಮನುಷ್ಯನ ನೋವು ಹೊಗಲಾಡಿಸಲು ಸಾಧ್ಯತೆ ಇದೆ ಎಂದು ಹೇಳಿದರು.
ಇದನ್ನೂ ಓದಿ: ಶಾಸಕ ಪ್ರಿಯಾಂಕ್ ಖರ್ಗೆ ಸರ್ಕಾರಕ್ಕೆ ಪತ್ರ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶರಣಗೌಡ ಪಾಟೀಲ ಪಾಳಾ ಟ್ರಸ್ಟ್ ವತಿಯಿಂದ ವಿಭಿನ್ನ ಹಾಗೂ ವಿಶೀಷ್ಟ ಕಾರ್ಯಕ್ರಮ ಮಾಡುತ್ತಿದ್ದೇವೆ. ಇನ್ನೂ ಹೆಚ್ಚು ಹೆಚ್ಚು ಕಾರ್ಯಕ್ರಮ ಆಯೋಜಿಸುವ ಆಲೋಚನೆ ಇದೆ ಎಂದು ಹೇಳಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀನಿವಾಸ್ ಕಮಲಾಪುರ, ಮಂಜುನಾಥ ಕೊಟ್ರೆ ಇದ್ದರು.
ಸಂಗೀತ ಕಾರ್ಯಕ್ರಮದಲ್ಲಿ ಖ್ಯಾತ ಕಲಾವಿದರಾದ ಗುರುಶಾಂತಯ್ಯ ಸ್ಥಾವರಮಠ, ಕಲ್ಲಿನಾತಸ್ವಾಮಿ, ಇರಯ್ಯಸ್ವಾಮಿ, ಪವಿತ್ರ ಜಿ, ಎಸ್., ವೀರಭದ್ರಯ್ಯಾ ಸ್ಥಾವರಮಠ, ಕುಮಾರಿ ನಾಗೇಶ್ವರಿ ಕೋಣೆ, ತೋಟಯ್ಯ ಸ್ವಾಮಿ ಮುಂತಾದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಇದನ್ನೂ ಓದಿ: ಕ್ರಾಸ್ ವೋಟಿಂಗ್ ಮಾಡಿಸಿದರೂ ಕಾಂಗ್ರೆಸ್ ಗೆಲ್ಲಲ್ಲ: ಹೆಚ್.ಡಿ.ಕುಮಾರಸ್ವಾಮಿ
ಪಾಳಾ ಗ್ರಾಮದ ಶಿವಯೋಗಿ ಬಜಂತ್ರಿ, ಹಾಗೂ ಶಿವಾನಂದ ಬಜಂತ್ರಿ ಶಹನಾಯಿ ನುಡಿಸಿದರು. ಕಾರ್ಯಕ್ರಮದಲ್ಲಿ ಸಾಹಿತಿ ಬಿ ಎಚ್ ನಿರಗುಡಿ, ಮಂಗಲಾ ಕಪರೆ, ಗಂಗಾಧರ ಪೂಜಾರಿ, ಚಂದ್ರಕಾಂತ ಟೇಲರ್, ಅಂಬಾರಾಯ ಕೊಣೆ, ಉಮೇಶ್ ಚೌದರಿ, ಡಾ. ಶರಣಬಸಪ್ಪ ವಡ್ಡಣಕೇರಿ, ನಾಗರಾಜ ಪಾಟೀಲ ಮುಂತಾದವರು ಇದ್ದರು.
ಇದನ್ನೂ ಓದಿ: ರೈತರ ಗಮನಕ್ಕೆ: ಪಿ.ಎಮ್. ಕಿಸಾನ್ ಯೋಜನೆ ಇ-ಕೆವೈಸಿಗೆ 31 ರವರೆಗೆ ಗಡುವು