ಕಲಬುರಗಿ: ಮುಂಗಾರು ಹಂಗಾಮಿಗೆ ಬೇಕಾಗುವ ಅಗತ್ಯ ರಸಗೊಬ್ಬರ ಪೂರೈಸಲು ಕ್ರಮ ಕೈಗೊಳ್ಳುವಂತೆ ಮಾಜಿ ಸಚಿವರಾದ, ಶಾಸಕರಾದ ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಅವರು ಆಗ್ರಹಿಸಿದ್ದಾರೆ.
ಈ ಕುರಿತು ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವರಿಗೆ ಪತ್ರ ಬರೆದಿರುವ ಅವರು ಮುಂಗಾರು ಹಂಗಾಮಿನಗಲ್ಲಿ ಚಿತ್ತಾಪುರ ತಾಲೂಕಿನಲ್ಲಿ ಸುಮಾರು 1.20 ಲಕ್ಷ ಹೆಕ್ಟೇರ್ ಬಿತ್ತನೆಯಾಗುತ್ತಿದ್ದು, ಇದರಲ್ಲಿ 89,000 ಹೆಕ್ಟೇರ್ ತೊಗರಿ, 7000 ಹೆಕ್ಟೇರ್ ಉದ್ದಿನಬೇಳೆ ಹಾಗೂ 13,000 ಹೆಕ್ಟೇರ್ ಹೆಸರು ಬಿತ್ತನೆಯಾಗುತ್ತದೆ.
ಇದನ್ನೂ ಓದಿ: ಕ್ರಾಸ್ ವೋಟಿಂಗ್ ಮಾಡಿಸಿದರೂ ಕಾಂಗ್ರೆಸ್ ಗೆಲ್ಲಲ್ಲ: ಹೆಚ್.ಡಿ.ಕುಮಾರಸ್ವಾಮಿ
ಅದರಂತೆ ಇಡೀ ಕಲಬುರಗಿ ಜಿಲ್ಲೆಯಲ್ಲಿ 7.84 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗುತ್ತದೆ. ಇದರಲ್ಲಿ 5.81 ಲಕ್ಷ ಹೆಕ್ಟೇರ್ ತೊಗರಿ, 27,000 ಹೆಕ್ಟೇರ್ ಉದ್ದಿನ ಬೇಳೆ ಹಾಗೂ 85,000 ಹೆಕ್ಟೇರ್ ಹೆಸರು ಬಿತ್ತನೆಯಾಗುತ್ತದೆ. ಸದರಿ ಬಿತ್ತನೆಗಾಗಿ ಜಿಲ್ಲಾದ್ಯಂತ ಸುಮಾರು 65,000 ಮೆಟ್ರಿಕ್ ಟನ್ ಗಳಷ್ಟು ಡಿಎಪಿ ರಸಗೊಬ್ಬರದ ಅವಶ್ಯಕತೆ ಇದೆ.ಆದರೆ, ಸಧ್ಯ ಜಿಲ್ಲೆಯಲ್ಲಿ ಸಮರ್ಪಕ ರಸಗೊಬ್ಬರ ಪೂರೈಕೆಯಾಗದಿರುವ ಕಾರಣ ರೈತರು ಪರದಾಡುವಂತೆ ಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ: ರೈತರ ಗಮನಕ್ಕೆ: ಪಿ.ಎಮ್. ಕಿಸಾನ್ ಯೋಜನೆ ಇ-ಕೆವೈಸಿಗೆ 31 ರವರೆಗೆ ಗಡುವು
ಅಲ್ಲದೇ, ಚಿತ್ತಾಪುರ ತಾಲೂಕಿನಲ್ಲಿ ರಸಗೊಬ್ಬರ ಸಿಗದಿರುವ ಕಾರಣ, ರೈತರು ಹೊರಗಿನ ಜಿಲ್ಲೆಗಳಿಗೆ ತೆರಳಿ ಅಧಿಕ ಹಣ ತೆತ್ತು ರಸಗೊಬ್ಬರ ಖರೀದಿಸುತ್ತಿದ್ದು ಇದರಿಂದ ರೈತರು ತುಂಬಾ ಅನಾನುಕೂಲ ಎದುರಿಸುವಂತಾಗಿದೆ. ಆದ್ದರಿಂದ ಚಿತ್ತಾಪುರ ತಾಲೂಕಿಗೆ ಹಾಗೂ ಇಡೀ ಕಲಬುರಗಿ ಜಿಲ್ಲೆಯ ರೈತರಿಗೆ ಸಮರ್ಪಕವಾಗಿ ಡಿಎಪಿ ರಸಗೊಬ್ಬರ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಅವರು ಪತ್ರದಲ್ಲಿ ಕೋರಿದ್ದಾರೆ.
ಇದನ್ನೂ ಓದಿ: ಅಲೆಮಾರಿ, ಅರೆ ಅಲೆಮಾರಿ ಜನರು ಸ್ವಾಭಿಮಾನದಿಂದ ಬದುಕಬೇಕು: ಕೆ.ರವೀಂದ್ರ ಶೆಟ್ಟಿ