ಪರಿಸರದ ಸಮತೋಲನ ಕಾಪಾಡುವುದು ನಮ್ಮ ಕರ್ತವ್ಯ: ಶರಣು ವಸ್ತ್ರದ್

0
39

ಶಹಾಬಾದ: ನಮ್ಮ ಪರಿಸರವನ್ನು ರಕ್ಷಿಸುವ, ಸಂರಕ್ಷಿಸುವ ಕರ್ತವ್ಯ ಪ್ರತಿಯೊಬ್ಬರದೂ ಆಗಿದ್ದರೂ ನಾವು ಅದನ್ನು ನಗಣ್ಯ ಎಂಬಂತೆ ವರ್ತಿಸುತ್ತಿರುವುದು ಮಾತ್ರ ದುರಂತದ ಸಂಗತಿ ಎಂದು ಬಿಜೆಪಿ ಮುಖಂಡ ಶರಣು ವಸ್ತ್ರದ್ ಹೇಳಿದರು.

ಅವರು ಪರಿಸರ ದಿನದ ಅಂಗವಾಗಿ ನಗರದ ನಾಡಕಚೇರಿಯ ಆವರಣದಲ್ಲಿ ಬಿಜೆಪಿ ಹಾಗೂ ಬಿಜೆಪಿ ಯುವ ಮೋರ್ಚಾ ವತಿಯಿಂದ ಆಯೋಜಿಸಲಾದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ಇದನ್ನೂ ಓದಿ: ಜೀವ ಸಂಕುಲಗಳಿಗೆ ಪರಿಸರವೇ ಮುಖ್ಯ ಆಧಾರ: ವಾಲಿ

ಮಾನವನು ಸಮಾಜಜೀವಿ ಎನ್ನುವ? ಸಹಜವಾದದ್ದು ಆತನು ಪರಿಸರದ ಶಿಶು ಎನ್ನುವುದು. ಅವನ ಸುತ್ತಮುತ್ತಲು ವೈವಿದ್ಯಮಯವಾದ ನಿಸರ್ಗದ ಸೊಬಗಿದೆ, ಹಲವಾರು ಮರಗಿಡಗಳಿವೆ. ವಿವಿಧ ಪ್ರಕಾರದ ಪ್ರಾಣಿಪಕ್ಷಿಗಳಿವೆ. ವೈವಿಧ್ಯಮಯವಾದ ಕೀಟ ಪ್ರಪಂಚವಿದೆ. ಅನೇಕ ಸೂಕ್ಷ್ಮ ಜೀವಿಗಳಿವೆ. ಅ? ಅಲ್ಲ. ಹಲವಾರು ಚಿಕ್ಕ ದೊಡ್ಡ ನದಿ, ಸಾಗರ ಸರೋವರಗಳಿವೆ. ಸಣ್ಣಪುಟ್ಟ ಗುಡ್ಡ ಬೆಟ್ಟಗಳಿವೆ, ದೊಡ್ಡ ದೊಡ್ಡ ಪರ್ವತ ಶಿಖರಗಳಿವೆ. ಗಾಳಿ, ಬೆಳಕು ಹಾಗು ಅಪರಿಮಿತ ಖನಿಜ ಸಂಪತ್ತಿದೆ.ನಾವು ನಮ್ಮ ಸ್ವಾರ್ಥಕ್ಕಾಗಿ ಮರಗಿಡಗಳನ್ನು ಕಡಿದುಹಾಕುತ್ತೇವೆ. ಇದರಿಂದಾಗಿ ಹಸಿರು ವಿರಳವಾಗುತ್ತಹೋಗುತ್ತಿದೆ. ಈಗಲೆ ಎಚ್ಚೆತ್ತುಕೊಳ್ಳದೆಹೋದರೆ ಈಗಾಗಲೇ ಸುನಾಮಿ, ಬರ, ಮಹಾಪೂರದಂಥ ಪ್ರಕೃತಿ ವಿಕೋಪಗಳಿಗೆ ತುತ್ತಾಗುತ್ತಿರುವುದರ ಜೊತೆಗೆ ಇನ್ನೂ ಅತ್ಯಂತ ದಾರುಣವಾದ ಆಮ್ಲಜನಕದ ಕೊರತೆಯನ್ನು ಕೂಡ ಅನುಭವಿಸಬೇಕಾದ ಪರಿಸ್ಥಿತಿ ಬರುತ್ತದೆ.ಆದ್ದರಿಂದ ಪರಿಸರದ ಸಮತೋಲನ ಕಾಪಾಡುವುದು ನಮ್ಮ ಕರ್ತವ್ಯ ಎಂದು ಹೇಳಿದರು.

ಇದನ್ನೂ ಓದಿ: ಪರಿಸರ ಸಂರಕ್ಷಣೆ-ನಮ್ಮೆಲ್ಲರ ಹೊಣೆ

ಜ್ಯೋತಿ ಶರ್ಮ ಜಿಲ್ಲಾ ಕಾರ್ಯದರ್ಶಿ, ಮಂಡಲ ಉಪಾಧ್ಯಕ್ಷರಾದ ಮಹಾದೇವ ಗೊಬ್ಬೂರಕರ, ದುರ್ಗಪ್ಪ ಪವಾರ, ಶಶಿಕಲಾ ಸಜ್ಜನ, ಶ್ರೀಧರ ಜೋಶಿ, ಪ್ರಧಾನ ಕಾರ್ಯದರ್ಶಿಗಳಾದ ಸದಾನಂದ ಕುಂಬಾರ, ಸಿದ್ರಾಮ ಕುಸಾಳೆ, ಕಾರ್ಯದರ್ಶಿಗಳಾದ ಸಂದೀಪ್ ಹದನೂರ, ನೀಲಗಂಗಮ್ಮ ಘಂಟ್ಲಿ, ರತ್ನಾ ಬಿರಾದಾರ, ಪ್ರಮುಖರಾದ ಕನಕಪ್ಪ ದಂಡಗುಲಕರ, ಅರುಣಕುಮಾರ ಪಟ್ಟಣಕರ, ಸುಭಾ? ಜಾಪುರ, ರಹೀಮಸಾಹೆಬ ಯಲ್ಲಪ್ಪ ದಂಡಗುಲಕರ, ತಿಮ್ಮಣ್ಣ ಕುರ್ಡೆಕರ, ಭೀಮಯ್ಯ ಗುತೆದಾರ, ಚಂದ್ರಕಾಂತ ಸುಬೆದಾರ, ಬಸವರಾಜ ಬಿರಾದಾರ, ರಾಮು ಕುಸಾಳೆ, ಮಂಜುನಾಥ ದೊಡ್ಡಮನಿ, ಬಸವರಾಜ ಸಾತ್ಯಾಳ, ಶರಣು ವಸ್ತ್ರದ, ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ ಮಲ್ಲಿಕಾರ್ಜುನ ಗೊಳ್ಳೆದ, ಯುವ ಮೋರ್ಚಾ ಅಧ್ಯಕ್ಷ ದೀನೇಶ ಗೌಳಿ, ಪ್ರ. ಕಾರ್ಯದರ್ಶಿ ರಾಕೇಶ್ ಮಿಶ್ರ, ಮಹೇಶ್ ಯಲೆರಿ, ಶ್ರೀನೀವಾಸ ನೆದಲಗಿ, ಬಾಬು ಕೊಬಾಳ, ಕಿರಣ ದಂಡಗುಲಕರ, ದಾಮೋದರ ಭಟ್ಟ, ಅವಿನಾಶ ಸಾಳುಂಕೆ,ಸತಿಶ ರಾಫನೂರ, ಎಸ್. ಸಿ. ಮೋರ್ಚಾ ಅಧ್ಯಕ್ಷ ಸಂಜಯ ವಿಟಕರ, ಅಮರ ಕೋರೆ, ಅರುಣ ದೇವಕರ, ರೈತ ಮೋರ್ಚಾ ಅಧ್ಯಕ್ಷ ಸಂತೋ? ಪಾಟೀಲ, ಮಹಿಳಾ ಮೋರ್ಚಾದ ಅಧ್ಯಕ್ಷ ಜಯಶ್ರೀ ಸೂಡಿ, ಆರತಿ ಕುಡಿ, ಸುನೀತಾ, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಇದನ್ನೂ ಓದಿ: ಶಾಸಕ ಪ್ರಿಯಾಂಕ್ ಖರ್ಗೆ ಸರ್ಕಾರಕ್ಕೆ ಪತ್ರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here