ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ನೂತನ ಅಧ್ಯಕ್ಷರಾಗಿ ಸಿರಗಾಪೂರ ಆಯ್ಕೆ

0
25

ಕಲಬುರಗಿ: ನಗರದ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ನ ನೂತನ ಅಧ್ಯಕ್ಷರಾಗಿ ಹೋರಾಟಗಾರ ಲಿಂಗರಾಜ ಸಿರಗಾಪೂರ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಬಾಲಕೊಂದೆ ಅವರು ತಿಳಿಸಿದ್ದಾರೆ.

ಜಯನಗರ ಶಿವಮಂದಿರದಲ್ಲಿ ಟ್ರಸ್ಟ್ ಉಪಾಧ್ಯಕ್ಷ ವಿರೇಶ ದಂಡೋತಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಇತ್ತೀಚೆಗೆ ವಿಜಯಕುಮಾರ ಬಮ್ಮಣ್ಣ ಅವರ ನಿಧನದಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಲಿಂಗರಾಜ ಸಿರಗಾಪೂರ ಅವರ ಹೆಸರನ್ನು ಟ್ರಸ್ಟ್ ಹಿರಿಯ ಸದಸ್ಯ ಎಂ.ಡಿ.ಮಠಪತಿ ಅವರು ಸೂಚಿಸಿದರು.ಬಸವರಾಜ ಅನ್ವರಕರ ಅವರು ಅನುಮೋದಿಸಿದರು.ಸಭೆಯಲ್ಲಿ ಸುನೀಲ್ ಬಿಡಪ್, ಶಿವಪುತ್ರಪ್ಪ ಮರಡಿ,ಜಿ.ಎಸ್.ಕಾಂತಾ, ಶ್ರೀಮತಿ ಅನುರಾಧ ಕುಮಾರಸ್ವಾಮಿ, ಮಲ್ಲಿಕಾರ್ಜುನ ಕಲ್ಲಾ ,ಎಸ್.ಡಿ.ಸೇಡಂಕರ, ವಾಸುದೇವ ಮಾಲಿಬೀರಾದಾರ ಇತರರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಅವರು ತಿಳಿಸಿದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here