ಪರಿಷ್ಕೃತ ಪಠ್ಯಗಳನ್ನು ವಾಪಸ್ ಗೆ ಒತ್ತಾಯಿಸಿ ಪ್ರತಿಭಟನೆ ಚುರುಕು: ಖರ್ಗೆ

0
18
  • ಪರಿಷ್ಕೃತ ಪಠ್ಯಗಳನ್ನು ವಾಪಸ್ ಪಡೆಯಬೇಕು: ಶಾಸಕ ಪ್ರಿಯಾಂಕ್ ಖರ್ಗೆ ಆಗ್ರಹ
  • ಪ್ರತಿಭಟನೆ ಮತ್ತಷ್ಟು ಚುರುಕುಗೊಳಿಸಲು ನಿರ್ಧಾರ, ಬೆಂಗಳೂರಿನಲ್ಲಿಯೂ ಇದೇ ತರ ಧರಣಿ ನಡೆಸಲು ನಿರ್ಧಾರ- ಖರ್ಗೆ.

ಕಲಬುರಗಿ: ಸರ್ಕಾರದ ಪಠ್ಯಪುಸ್ತಕದಲ್ಲಿ ಆಗಿರುವ ಲೋಪದೋಷಗಳಿಂದಾಗಿ ನಾಡನ ಅಸ್ಮತೆಗೆ ಧಕ್ಕೆಯಾಗಿದೆ. ಈ ಕ್ರಮದ ವಿರುದ್ದ ಹಿರಿಯರು,‌ಚಿಂತಕರು, ವಿವಿಧ ಸಂಘಟನೆಗಳ ಮುಖಂಡರು ಪಕ್ಷಾತೀತವಾಗಿ ಧರಣಿಗೆ ಬೆಂಬಲ ಸೂಚಿಸಿದ್ದಾರೆ‌.‌ ಸರ್ಕಾರ ಎಚ್ಚೆತ್ತುಕೊಂಡು‌ ಪರಿಷ್ಕೃತ ಪಠ್ಯಗಳನ್ನು ವಾಪಸ್ ಪಡೆಯುವವರೆಗೆ ಹೋರಾಟ‌ ನಿಲ್ಲುವುದಿಲ್ಲ ಎಂದು ಶಾಸಕರಾದ ಪ್ರಿಯಾಂಕ್ ಖರ್ಗೆ ಹೇಳಿದರು.

ಕರ್ನಾಟಕ ಅಸ್ಮಿತೆ ಆಂದೋಲನ ಸಮಿತಿ ವತಿಯಿಂದ ಕೈಗೊಂಡ 24 ಗಂಟೆಗಳ ಅಹೋರಾತ್ರಿ ಧರಣಿಯಲ್ಲಿ‌ ಭಾಗವಹಿಸಿ‌ ಅವರು ಮಾತಮಾಡುತ್ತಿದ್ದರು.

Contact Your\'s Advertisement; 9902492681

ಮನುವಾದಿ ಸಿದ್ದಾಂತವನ್ನು ಸರ್ಕಾರ ಪಠ್ಯದಲ್ಲಿ ತಂದು ಮಕ್ಕಳ ಬದುಕಿಗೆ ಮಾರಕವಾಗುವ ಕೆಲಸ ಮಾಡುತ್ತಿದೆ. ಹಡಗೆವಾರ್ ಅವರ ಭಾಷಣವನ್ನು ತಿರುಚಿ ಪಠ್ಯದಲ್ಲಿ ಸೇರಿಸಲಾಗಿದೆ. ನಮ್ಮ ಅಭಿಮಾನ ರಾಷ್ಟ್ರಧ್ವಜಕ್ಕಿಂತ ಭಾಗವಾ ಧ್ವಜದ ಮೇಲಿರಬೇಕು ಎಂದಿದ್ದಾರೆ ಆದರೆ ಅದನ್ನು ಕೇವಲ ಧ್ವಜದ ಮೇಲಿರಬೇಕು ಎಂದು ಮಾತ್ರ ಪಠ್ಯದಲ್ಲಿ‌ ಸೇರಿಸಲಾಗಿದೆ. ಇದು ಸಂವಿಧಾನ ವಿರೋಧಿ ಕೃತ್ಯ ಇದನ್ನು ನಾವು ಖಂಡಿಸುತ್ತೇವೆ ಎಂದರು.

ಆರ್ ಎಸ್ ಎಸ್ ಸಂಘಟನೆ ಸ್ವಾತಂತ್ರ್ಯ ‌ಸಂಗ್ರಾಮದಲ್ಲಿ ಭಾಗವಹಿಸಿಲ್ಲ ಎಂದ ಖರ್ಗೆ, ದಂಡಿ‌ ಸತ್ಯಾಗ್ರಹ ನಡೆದಾಗ ಇವರು ಎಲ್ಲಿದ್ದರು,? ಭಾರತ ಚೀನಾ‌ ಯುದ್ದ ನಡೆದಾಗ ಎಲ್ಲಿದ್ದರು? ಆರ್ ಎಸ್ ಎಸ್ ದ ನಿಜವಾದ ಕಾರ್ಯಗಳ ಬಗ್ಗೆ ಪಠ್ಯ ಪುಸ್ತಕ ಪ್ರಕಟಿಸಲಿ ಅದನ್ನು ನಾನು ಸ್ವಾಗತಿಸುತ್ತೇನೆ ಎಂದು ಸವಾಲಾಕಿದರು.

ನಾವು ಸಚಿವನಾಗಿದ್ದಾಗ ಬಡವರ ಮಕ್ಕಳಿಗಾಗಿ,‌ದೀನ ದಲಿತರಿಗಾಗಿ‌ ಹಲವಾರು‌ ಯೋಜನೆ ಜಾರಿಗೆ ತಂದಿದ್ದೇನೆ‌. ಈಗ ಆ ಎಲ್ಲ ಯೋಜನೆಗಳು‌ ಏನಾಗಿವೆಯೋ‌ ಗೊತ್ತಿಲ್ಲ. ಬಡವರನ್ನು ಬಿಜೆಪಿ ತಮ್ಮ‌ಕೆಲಸಕ್ಕೆ‌ ಬಳಸಿಕೊಳ್ಳತ್ತದೆ. ಬಿಜೆಪಿಯ ಯಾವ ಶಾಸಕರ ಮಕ್ಕಳು ಹೆಗಲಿಗೆ ಕೇಸರಿ ಶಾಲ್ ಹಾಕಿಕೊಂಡು ಗೋ ರಕ್ಷಣೆ ಹಾಗೂ ಧರ್ಮ ರಕ್ಷಣೆ ಮಾಡುತ್ತಿದ್ದಾರೆ? ಆ ಕೆಲಸಕ್ಕಾಗಿ ಹಿಂದುಳಿದವರು ಮಾತ್ರ ಬಳಸಿಕೊಂಡು ತಮ್ಮ ಮಕ್ಕಳನ್ನು‌ ವಿದೇಶಗಳಿಗೆ ಓದಿಸಲು ಕಳಿಸುತ್ತಿದ್ದಾರೆ.

ರಾಜ್ಯ ಸರ್ಕಾರ ಈ ಕೂಡಲೇ ಪರಿಷ್ಕೃತ ಪಾಠಗಳನ್ನು ರದ್ದುಗೊಳಿಸಬೇಕು ಹಾಗೂ‌ ಬರಗೂರು ಸಮಿತಿಯ ಹಳೆ ಪಠ್ಯಗಳನ್ನೇ ಮತ್ತೆ ಜಾರಿಗೆ ತರಬೇಕು. ಈ ಹೋರಾಟ ಪ್ರತಿ ತಾಲೂಕು ಹಳ್ಳಿಗಳಿಗೆ ತಲುಪಬೇಕು. ಹಾಗೆ ಬೆಂಗಳೂರಿನ ಬಸವಣ್ಣನವರ ಪ್ರತಿಮೆ ಮುಂದೆ ಇದೇ ತರೆನಾದ ಧರಣಿ ಮಾಡುತ್ತೇವೆ. ನಮಗೆ ಕರ್ನಾಟದ ಅಸ್ಮಿತೆಯ ಪ್ರಶ್ನೆಯಾಗಿದೆ. ಹಾಗಾಗಿ,‌ಎಲ್ಲ ರೀತಿಯ ಹೋರಾಟಕ್ಕೆ ನಾವು ಸಜ್ಜಾಗಿದ್ದೇವೆ ಎಂದು‌ ಪ್ರಿಯಾಂಕ್ ಖರ್ಗೆ ಎಚ್ಚರಿಸಿದರು.

ವೇದಿಕೆಯ ಮೇಲೆ ಶಾಸಕರಾದ ಎಂ.ವೈ.ಪಾಟೀಲ, ಪ್ರಿಯಾಂಕ್ ಖರ್ಗೆ, ಶರಣಬಸಪ್ಪಗೌಡ ದರ್ಶನಾಪುರ, ಕನೀಜ್ ಫಾತೀಮಾ, ಜಗದೇವ ಗುತ್ತೇದಾರ, ಬಿ.ಆರ್.ಪಾಟೀಲ, ವೈಜನಾಥ ತಡಕಲ್, ಅಜಯಸಿಂಗ್, ಕೆ.ನೀಲಾ, ಸುಭಾಷ್ ರಾಠೋಡ, ಬಾಬುರಾವ್ ಚವ್ಹಾಣ್, ಆರ್.ಕೆ.ಹುಡಗಿ, ಅರುಣಕುಮಾರ ಪಾಟೀಲ, ವಿಜಯಕುಮಾರ, ಶಿವು ಹೊನಗುಂಟಿ, ಈರಣ್ಣ ಝಳಕಿ, ಭೀಮಣ್ಣ ಸಾಲಿ, ಶಿವಾನಂದ ಪಾಟೀಲ, ಮಲ್ಲಪ್ಪ ಹೊಸಮನಿ, ಸುನೀಲ ದೊಡ್ಡಮನಿ ಸೇರಿದಂತೆ ಹಲವರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here