ಶಾಸಕ ಪ್ರಿಯಾಂಕ್ ಖರ್ಗೆ ಅಗ್ನಿಪಥ್ ಯೋಜನೆ ವಾಪಾಸ್ ಪಡೆಯಲು ಆಗ್ರಹ

0
36
  • ಅಗ್ನಿಪಥ್ ಯೋಜನೆ ಕುರಿತು ಸುದೀರ್ಘ ಚರ್ಚೆ ನಡೆಸಲಿ- ಖರ್ಗೆ ಒತ್ತಾಯ.
  • ಡಿಫೆನ್ಸ್ ಎಕ್ಸಪರ್ಟ್ ಅವರನ್ನ ನೇಮಿಸಲು ಖರ್ಗೆ ಆಗ್ರಹ.

ಕಲಬುರಗಿ: ಪ್ರಧಾನಿ ನರೇಂದ್ರ ಅವರ ಮೋದಿ ಅವರ ಆಡಳಿತದ ಎಂಟು ವರ್ಷದ ಸಾಧನೆಗಳ ಬಗ್ಗೆ ಬಹಳ ವಿಜೃಂಭಣೆಯಿಂದ ಉತ್ಸವವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಡುತ್ತಿದ್ದಾರೆ. ಸಂವಿಧಾನದ ಎಲ್ಲಾ ಆಶಯಗಳನ್ನ ಈಡೇರಿಸಿದ್ದೇವೆ ಎಂಬ ಭ್ರಮೆಯಲ್ಲಿದ್ದಾರೆ. ಆದರೆ, ಈ ಸಂದರ್ಭದಲ್ಲಿ ಮೋದಿಯವರ ಮಾಸ್ಟರ್ ಸ್ಟ್ರೋಕ್ ಗಳನ್ನು ಕೂಡಾ ಪರಿಶೀಲನೆ ಮಾಡಿಕೊಳ್ಳಬೇಕು ಎಂದು ಮಾಜಿ‌ಸಚಿವರಾದ, ಶಾಸಕರಾದ ಹಾಗೂ ಕಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.

ಕಲಬುರಗಿ ಯಲ್ಲಿ ಅವರು ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡುತ್ತಿದ್ದರು.

Contact Your\'s Advertisement; 9902492681

ಅವರ ಯಾವ ಯೋಜನೆಗಳು ಉದ್ದೇಶ ಗುರಿ ಮುಟ್ಟಲಿಲ್ಲ. ಡಿ ಮಾನಿಟೈಸೆಜನ್, ಸಿಎಎ, ರೈತರ ಪರ ಕಾಯ್ದೆಗಳ ಯಾವುವೂ ಜಾರಿಯಾಗಲಿಲ್ಲ. ರೈತರೇ ಹೋರಾಟ ಮಾಡಿ ಕಾಯದೆಗಳನ್ನು ವಾಪಸ್ ಪಡೆಯುವಂತೆ ಮಾಡಿದರು.

ಬಿಜೆಪಿ ಶಾಸಕರು, ಸಂಸದರು ವಕ್ತಾರರ ಸ್ಥಿತಿ ನೋಡಿದ್ರೆ ಅಯ್ಯೊ ಅನಿಸುತ್ತೆ ಕಾರಣ‌ ರಾತ್ರಿ ಮೋದಿ ಕನಸ್ಸಲ್ಲಿ ಕಂಡಿದ್ದನ್ನ ಇವರು ಮಾಧ್ಯಮದಲ್ಲಿ ಡಿಫೆಂಡ್ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ.

ಮೋದಿಯವರ ಹೊಸ ಕಾರ್ಯಕ್ರಮ ಅಗ್ನಿಪಥ್ ಕಾರ್ಯಕ್ರಮದಿಂದಾಗಿ ದೇಶ ಹೊತ್ತಿ‌ಉರಿಯುತ್ತಿದೆ. 200 ರೈಲುಗಳು ಬಂದ್ ಆಗಿವೆ.‌ಹಲವಾರು ರೇಲ್ವೆಗಳು ಬೆಂಕಿಗೆ ಆಹುತಿಯಾಗಿವೆ. ರಾಜ್ಯದಲ್ಲಿಯೂ ಕೂಡಾ ಪ್ರತಿಭಟನೆ‌ ನಡೆಯುತ್ತಿದೆ. ಯುವಕರು ರಸ್ತೆಗಿಳಿದು‌ ಹೋರಾಟ ನಡೆಸುತ್ತಿದ್ದಾರೆ.

ಈ‌ ಯೋಜನೆ ಪ್ರಕಾರ ಹೊಸ ಸೈನಿಕರನ್ನ ಆರು‌ ತಿಂಗಳ‌ ತರಬೇತಿ‌ ನೀಡಿ ಅಗ್ನಿವೀರರ ಹೆಸರನಲ್ಲಿ‌ಅವರನ್ನು‌ ನೌಕಾದಳ, ಭೂದಳ ಹಾಗೂ‌ ವಾಯುದಳದ ಸೈನಿಕರನ್ನಾಗಿ‌ 64,000 ಸೈನಿಕರನ್ನ ನೇಮಕ ಮಾಡಿ‌ ನಾಲ್ಕು ವರ್ಷದ ನಂತರ ಅವರನ್ನು ಸೇವೆಯಿಂದ‌ ಬಿಡುಗಡೆ ಮಾಡುತ್ತಾರೆ. ಆಗ 75% ಸೇವಾ ಕಮಿಷನ್ ನೀಡುತ್ತಾರೆ. ಇದಕ್ಕೆ ಮಾಜಿ ಸೈನಿಕರು‌ ವಿರೋಧಿಸಿದ್ದಾರೆ. ಈ ಯೋಜನೆ ತರುವ ಮುನ್ನ ಪೈಲೆಟ್ ಪ್ರೋಜೆಕ್ಟ್ ಮಾಡಬೇಕಿತ್ತು. ಯಾಕೆದಂತೆ ಪಾಕಿಸ್ಥಾನ ಹಾಗೂ‌ ಚೀನಾ ಹಾಗೂ ನೇಪಾಳದಂತ ದೇಶಗಳ ಗಡಿ ಭಾರತ ಹಂಚಿಕೊಂಡಿದೆ. ಚೀನಾ ಈಗಾಗಲೇ ಭಾರದದ ಗಡಿ ಒಳಗೆ ಬಂದು ಗ್ರಾಮಗಳನ್ನೇ ನಿರ್ಮಿಸಿಕೊಂಡಿದ್ದಾರೆ. ಹೀಗಿರುವಾಗ ಒಪ್ಪಂದ‌ದಮೇಲೆ ಸೈನಿಕರನ್ನು ನೇಮಿಸುವುರು ಹೇಗೆ ಸೂಕ್ತ ಎನ್ನುವ ಪ್ರಶ್ನೆ ಎದ್ದಿದೆ.

ಜೊತೆಗೆ ಕೇವಲ ಆರು ತಿಂಗಳು ತರಬೇತಿ ಸಾಕಾಗುತ್ತದೆಯೇ? ತಜ್ಞರ ಪ್ರಕಾರ 6-7 ವರ್ಷದ ತರಬೇತಿ ನಂತರ ಒಬ್ಬ ಸೈನಿಕ‌ ಯುದ್ದ‌ಭೂಮಿಗೆ ಹೋಗಲು ಯೋಗ್ಯ ನಾಗುತ್ತಾನೆ. ಹೀಗಿರುವಾಗ ಕೇವಲ ಅರು ತಿಂಗಳ ತರಬೇತಿ‌ ಹೊಂದಿ ಕೇವಲ ನಾಲ್ಕು ವರ್ಷ ಮಾತ್ರ ಸೈನ್ಯದಲ್ಲಿ‌ ಇರಬೇಕಾದರೆ ಸೈನಿಕ‌ ಹೋರಾಟದ ಮನೋಭಾವನೆಯಿಂದ‌ ಕೆಲಸ ಮಾಡಲು ಆಗುತ್ತದೆಯೇ? ಇಂತವರು ಯುದ್ದದಲ್ಲಿ ನಾಯಕತ್ವದ ಗುಣ ತೋರಿಸುವುದು ಅಸಾಧ್ಯ.‌ಇಂತಹ ಸೈನಿಕರು ಟೂರಿಸ್ಟ್ ಸೈನಿಕರಾಗಿಬಿಡುತ್ತಾರೆ ಎಂದು ತಜ್ಞರು ಹೇಳಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಮೋದಿ‌ ಸಿಎಂ ಆಗಿದ್ದಾಗ ಒನ್ ರ್ಯಾಂಕ್ ಒನ್ ಪೆನ್ಶನ್ ಜಾರಿಗೆ ತರುವುದಾಗಿ ಹೇಳಿದ್ದರು ಈಗ ಪಿಎಂ ಆಗಿದ್ದಾಗ ಮರೆತಿದ್ದಾರೆ. ಈಗ ನೋ ರ್ಯಾಂಕ್ ನೋ ಪೆನ್ಶನ್. ಅಗ್ನಿವೀರರು ನಾಲ್ಕು ವರ್ಷದ ನಂತರ ಬಿಡುಗಡೆಯಾಗುವ 75% ಸೈನಿಕರಿಗೆ ಸೇವಾನಿಧಿಯಾಗಿ ರೂ 7.71 ಲಕ್ಷ ಕೊಡುತ್ತಾರೆ. ಅದೂ ಕೂಡಾ ಸೈನಿಕರ ಸಂಬಳದಲ್ಲಿ ಶೇ 50 ಕಡಿತಗೊಳಿಸಲಾಗುತ್ತದೆ.

ಕೊರೋನಾ‌ ನೆಪದಿಂದ ಈ ಸರ್ಕಾರ ಸೈನಿಕರ‌ ಹುದ್ದೆಗೆ ನೇಮಕ‌ಮಾಡಿಕೊಂಡಿಲ್ಲ. ದೇಶದಲ್ಲಿ ಖಾಲಿ‌ ಇರುವ ಒಟ್ಟು 8.72 ಲಕ್ಷ ಹುದ್ದೆಗಳಲ್ಲಿ 2.50 ಲಕ್ಷ ಹುದ್ದೆಗಳು ಸೈನ್ಯದಲ್ಲಿ ಖಾಲಿ ಇವೆ ಇವು ಎಲ್ಲ ಖಾಯಂ ನೇಮಕಾತಿಗಳಾಗುವೆ.ಈ ಹಂತದಲ್ಲಿ ಕಾಂಟ್ಯಾಕ್ಟ್ ಸೈನಿಕರ ನೇಮಕ ಮಾಡಲು ಹೋಗುವಾಗ ಖಾಯಂ ಸೈನಿಕರ ನೇಮಕ ಯಾವಾಗ ಮಾಡುತ್ತಾರೆ. ? ಕಳೆದ ಎಂಟು ವರ್ಷದಲ್ಲಿ 14 ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಕಳೆದ 45 ವರ್ಷದಲ್ಲಿ ಕಾಣದಂತ ನಿರುದ್ಯೋಗ ಸಮಸ್ಯೆ ತಲೆದೋರಿದೆ. 45 ಕೋಟಿ ಯುವಕರು ಉದ್ಯೋಗ ಹುಡುಕುವುದನ್ನೇ ಬಿಟ್ಟಿದ್ದಾರೆ ಎಂದು‌ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ವರದಿ ಹೇಳಿದೆ.

ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಠಿ ಮಾಡುವುದಾಗಿ ಹೇಳಿದ್ದರು. ಎಲ್ಲಿವೆ ಉದ್ಯೋಗಗಳು. ಇದೇನಾ ಅಚ್ಚೇ ದಿನ್ ? ನೂತನ‌ ಯೋಜನೆ ಅಗ್ನಿಪಥ್ ಬಗ್ಗೆ ನಿಖರವಾದ ಉತ್ತರ ನೀಡಿ ಎಂದು ಅವರು ಒತ್ತಾಯಿಸಿದರು. ದೇಶದ ಭದ್ರತೆ ವಿಚಾರದಲ್ಲಿ ನಿಮಗೆ ಇಷ್ಟೊಂದು ಅಸಡ್ಡೆತನವೇ? ಈ ಅಗ್ನಿಪಥ್ ಯುವಕರ ಪಾಲಿನ ಅಗ್ನಿಕುಂಡವಾಗಿ ಪರಿಣಮಿಸಿದೆ. ಅತಿ ಹೆಚ್ಚಿನ ಭದ್ರತೆ ಇರುವ ಜಾಗ ಪುಲ್ವಾಮದಲ್ಲಿ‌ ಆರ್ ಡಿಎಕ್ಸ್ ಹೇಗೆ ಬಂತು ? ವರದಿ‌ ಎಲ್ಲಿದೆ ? ಎಂದು ಪ್ರಶ್ನಿಸಿದರು.

ಕೇವಲ ನಾಲ್ಕು ರೆಫೆಲ್ ವಿಮಾನ ತಂದಿರುವುದಕ್ಕೆ ಬೀಗುವ ಕೇಂದ್ರ ಸರ್ಕಾರ, ಅಗ್ನಿಪಥ್ ಯೋಜನೆಯ‌ ಸಾಧಕ‌ ಬಾಧಕಗಳ ಬಗ್ಗೆ ಚರ್ಚೆ ನಡೆಯಲಿ ಡಿಫೆನ್ಸ್ ಎಕ್ಸಪರ್ಟ್ ಅವರ ಇರುವ ಪ್ಯಾನೆಲ್ ರಚಿಸಿ‌ ಈ‌ ಯೋಜನೆ ಜಾರಿಗೆ ತರಬಹುದೇ ಎಂದು ಸುದೀರ್ಘ ಸಮಾಲೋಚನೆ‌ ನಡೆಸಲಿ ಇಲ್ಲದಿದ್ದರೆ ಸಾರ್ವಜನಕರ‌ ನೆಮ್ಮದಿಗೆ ಭಂಗ ಉಂಟಾಗಲಿದೆ.

ಮೋದಿಯವರ ಮಾಸ್ಟರ್ ಸ್ಟ್ಕ್ರೋಕ್‌ನಿಂದಾಗಿ ಯುವಕರ ಬದುಕು‌ ಬೀದಿಪಾಲಾಗಿದೆ. ಮೋದಿಯವರು ಹೇಗೂ ಕರ್ನಾಟಕಕ್ಕೆ ಬರುತ್ತಿದ್ದಾರೆ ಒಂದು ಪ್ರೆಸ್ ಕಾನ್ಫರೆನ್ಸ್ ಮಾಡಲಿ‌ ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲಿ. ಪಿಎಂ ಅವರು ಪ್ರೆಸ್ ಕಾನ್ಫರೆನ್ಸ್ ಮಾಡಲು ಸಿಎಂ ಬೊಮ್ಮಾಯಿ ಹಾಗೂ ಅಧ್ಯಕ್ಷ ಕಟೀಲ್ ಅವರು ವ್ಯವಸ್ಥೆ ಮಾಡಲಿ ಎಂದು ಆಗ್ರಹಿಸಿದರು.

ಅಗ್ನಿಪಥ್ ಯೋಜನೆಯನ್ನು ಈ ಕೂಡಲೇ ವಾಪಸ್ ಪಡೆದುಕೊಳ್ಳಬೇಕೆಂದು ಪ್ರಿಯಾಂಕ್ ಖರ್ಗೆ ಇದೇ ಸಂದರ್ಭದಲ್ಲಿ ಆಗ್ರಹಿಸಿದರು.

ರಾಜ್ಯದಲ್ಲಿ ಗಲಭೆಗಳಾದ ಗೃಹ ಸಚಿವರು ಗಾಯಬ್ ಆಗುತ್ತಾರೆ. ಇಷ್ಟೊಂದು ಗಲಾಟೆಗಳಾದರೂ ಒಂದೇ ಒಂದು ಹೇಳಿಕೆ ಇಲ್ಲ. ಸಚಿವ ರಾಮುಲು ಅವರಿಗೆ ಅಗ್ನಿಪಥ್ ಯೋಜನೆಯ ಬಗ್ಗೆ ಸಮಗ್ರ ಮಾಹಿತಿ ಇದ್ದರೆ ಅವರೇ ಹೇಳಲಿ. ಬೇಕಾದರೆ ನನ್ನೊಂದಿಗೆ ಪ್ರೆಸ್ ಕಾನ್ಫರೆನ್ಸ್ ನಲ್ಲಿ ಭಾಗವಹಿಸಲಿ ಎಂದರು

ಈ ಸಂದರ್ಭದಲ್ಲಿ ಜಗದೇವ ಗುತ್ತೇದಾರ, ಭೀಮಣ್ಣ ಸಾಲಿ, ಶಿವಾನಂದ ಪಾಟೀಲ ಸೇರಿದಂತೆ ಹಲವರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here