ಭೀಮಾ ನದಿಗೆ ನೀರು ಹರಿಸಲು ಮಹಾರಾಷ್ಟ್ರದೊಂದಿಗೆ ಒಪ್ಪಂದ ಮಾಡಿಕೊಳ್ಳಲು ಪ್ರಸ್ತಾವನೆ ನಿರ್ಧಾರ

0
72

ಕಲಬುರಗಿ: ಕಳೆದ ಕೆಲ ವರ್ಷಗಳಿಂದ ನಿರಂತರ ಬರಗಾಲಕ್ಕೆ ತುತ್ತಾಗುತ್ತಿರುವ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಮಳೆಗಾಲದಲ್ಲಿಯೂ ಕುಡಿಯುವ ನೀರಿಗೆ ಪರಿತಪಿಸುವಂತಾಗಿದೆ. ಈ ಜಿಲ್ಲೆಗಳ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಮಹಾರಾಷ್ಟದಿಂದ ಭೀಮಾ ನದಿಗೆ ೨ ಟಿ.ಎಂ.ಸಿ. ನೀರನ್ನು ಕೊಡುವಿಕೆ ಮತ್ತು ಪಡೆಯುವಿಕೆ ಒಪ್ಪಂದದ ಅಧಾರದ ಮೇಲೆ ಬಿಡುಗಡೆಗೊಳಿಸಲು ರಾಜ್ಯ ಸರ್ಕಾರವು ಮಹಾರಾಷ್ಟ್ರದೊಂದಿಗೆ ಒಪ್ಪಂದ ಮಾಡಿಕೊಳ್ಳುವಂತೆ ಪ್ರಸ್ತಾವನೆ ಸಲ್ಲಿಸಲು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಸುಬೋಧ ಯಾದವ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.

ಶುಕ್ರವಾರ ಇಲ್ಲಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಕರ್ನಾಟಕ ನೀರಾವರಿ ನಿಗಮ ನಿಯಮಿತ ಕಲಬುರಗಿ ವಲಯ ವ್ಯಾಪ್ತಿಯಲ್ಲಿ ಬರುವ ಕಲಬುರಗಿ, ಬೀದರ ಮತ್ತು ಯಾದಗಿರಿ ಜಿಲ್ಲೆಗಳ ಜಲಾಶಯಗಳ ಪ್ರಸ್ತುತ ಸ್ಥಿತಿಗತಿ ಕುರಿತು ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ಪ್ರಾದೇಶಿಕ ಆಯುಕ್ತರು ಸಭೆ ನಡೆಸಿದರು.

Contact Your\'s Advertisement; 9902492681

ಬೇಸಿಗೆ ಸಂದರ್ಭದಲ್ಲಿ ಜಿಲ್ಲೆಯಲ್ಲಿನ ಕುಡಿಯುವ ನೀರಿಗೆ ಪರಿಹಾರ ಕಲ್ಪಿಸಲು ಭೀಮಾ ನದಿಗೆ ೨ ಟಿ.ಎಂ.ಸಿ. ನೀರು ಮಹಾರಾಷ್ಟ್ರದಿಂದ ಬಿಡುವುದು. ಅಷ್ಟೆ ಪ್ರಮಾಣದ ನೀರನ್ನು ರಾಜ್ಯದ ಆಲಮಟ್ಟಿ ಜಲಾಶಯದಿಂದ ಮಹಾರಾಷ್ಟ್ರಕ್ಕೆ ಬಿಡುವುದು. ಈ ರೀತಿಯ ಒಪ್ಪಂದ ಆದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಲಿದೆ. ಇದಲ್ಲದೆ ಆಮಲಟ್ಟಿಯಿಂದ ನಾರಾಯಣಪುರ ಜಲಾಶಯದ ಮೂಲಕ ಕಲಬುರಗಿ ಮತು ಯಾದಗಿರಿ ಜಿಲ್ಲೆಗೆ ಪ್ರತಿ ವರ್ಷ ಕುಡಿಯುವ ನೀರಿಗಾಗಿ ೨ ಟಿ.ಎಂ.ಸಿ. ನೀರು ಹಂಚಿಕೆ ಮಾಡಲು ವಾರ್ಷಿಕ ಕ್ರಿಯಾ ಯೋಜನೆಯಲ್ಲಿ ಸೇರಿಸಲು ಸಹ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಪ್ರಾದೇಶಿಕ ಆಯುಕ್ತ ಸುಬೋಧ ಯಾದವ ತಿಳಿಸಿದರು.

ಈ ಹಿಂದೆ ಜಲಾಶಯಗಳ ನಿರ್ಮಾಣದ ಸಂದರ್ಭದಲ್ಲಿ ಆಗಿನ ಬೆಳೆಗಳಿಗೆ ಬೇಕಾಗುವ ನೀರಿನ ಪ್ರಮಾಣವನ್ನು ಲೆಕ್ಕಹಾಕಿ ಡಿಪಿಆರ್ ಸಿದ್ದಪಡಿಸಲಾಗಿದೆ. ಇದೀಗ ಸಮರ್ಪಕ ಮಳೆ ಬಾರದ ಕಾರಣ ಮತ್ತು ಜಲಾಶಯಗಳ ಸುತ್ತಮುತ್ತ ಕಬ್ಬು, ಭತ್ತದಂತಹ ಬೆಳೆಗಳು ಬೆಳೆಯುತ್ತಿರುವುದರಿಂದ ನೀರಿನ ಪ್ರಮಾಣದಲ್ಲಿಯೂ ವ್ಯತ್ಯಾಸವಾಗಿದೆ. ಇದರ ಜೊತೆಗೆ ಈಗ ಬೆಳೆಗಳ ಪದ್ದತಿಯಲ್ಲಿಯೂ ಮಾರ್ಪಾಡುಗೊಂಡಿರುವುದರಿಂದ ಕೃಷಿ ಬೆಳೆಗೆ ನೀರು ಹಂಚಿಕೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಿದೆ. ಇದಲ್ಲದೆ ಕುಡಿಯುವ ನೀರಿಗೂ ಪ್ರತಿ ವರ್ಷದ ಕ್ರಿಯಾ ಯೋಜನೆಯಲ್ಲಿ ಹಂಚಿಕೆ ಮಾಡಬೇಕಾದ ಅಗತ್ಯವಿದೆ ಎಂದರು.

ಕರ್ನಾಟಕ ನೀರಾವರಿ ನಿಗಮದ ಕಲಬುರಗಿ ವಲಯದ ಮುಖ್ಯ ಇಂಜಿನೀಯರ್ ಜಗನ್ನಾಥ ಹಲಿಂಗೆ ಮಾತನಾಡಿ ಗೋದಾವರಿ ಜಲಾನಯನ ಪ್ರದೇಶದ ಬೀದರ ಜಿಲ್ಲೆಯ ಕಾರಂಜಾ, ಮುಲ್ಲಾಮಾರಿ ಮೇಲ್ದಂಡೆ ಮತ್ತು ಚುಳಕಿ ನಾಲಾ ಮತ್ತು ಕೃಷ್ಣಾ ಜಲಾನಯನ ಪ್ರದೇಶದ ಕಲಬುರಗಿ ಜಿಲ್ಲೆಯ ಅಮರ್ಜಾ, ಭೀಮಾ ಎಲ್.ಐ.ಎಸ್., ಬೆಣ್ಣೆತೋರಾ, ಗಂಡೋರಿನಾಲಾ, ಚಂದ್ರಂಪಳ್ಳಿ, ಕೆಳದಂಡೆ ಮುಲ್ಲಾಮಾರಿ ಹಾಗೂ ಯಾದಗಿರಿ ಜಿಲ್ಲೆಯ ಹತ್ತಿಕುಣಿ ಮತ್ತು ಸೌದಾಗರ ಯೋಜನೆಗಳಿಂದ ಒಟ್ಟಾರೆ ವಲಯದಲ್ಲಿ ೧೧೬೪೨೩ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರಿನ ಸೌಲಭ್ಯ ನೀಡಲಾಗುತ್ತಿದೆ ಎಂದು ತಿಳಿಸುತ್ತ ಎಲ್ಲಾ ಜಲಾಶಯಗಳ ಪ್ರಸ್ತುತ ಸ್ಥಿತಿಗತಿ, ನೀರಿನ ಮಟ್ಟದ ಕುರಿತು ಸಭೆಗೆ ವಿವರಿಸಿದರು.

ಸಭೆಯಲ್ಲಿ ಕರ್ನಾಟಕ ನೀರಾವರಿ ನಿಗಮ, ಕೃಷ್ಣ ಭಾಗ್ಯ ಜಲ ನಿಗಮ ಹಾಗೂ ಸಣ್ಣ ಮತ್ತು ಮಧ್ಯಮ ನೀರಾವರಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here